February 10, 2026
IMG-20260209-WA0215.jpg

ಚಳ್ಳಕೆರೆ:
ಚಳ್ಳಕೆರೆ ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಚನ್ನಮ್ಮನಾಗತಿಹಳ್ಳಿಯ ಶ್ರೀ ಪಾತಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವವನ್ನು ಫೆಬ್ರವರಿ 21 ಮತ್ತು 22 ರಂದು ಎರಡು ದಿನಗಳ ಕಾಲ ಭಕ್ತಿಶ್ರದ್ದೆಯಿಂದ ನಡೆಸಲು ಜಾತ್ರಾ ಸಮಿತಿ ನಿರ್ಧರಿಸಿದೆ.

ಈ ಸಂಬಂಧ ನಗರದ ಪ್ರವಾಸಿಮಂದಿರದಲ್ಲಿ ಜಾತ್ರಾ ಸಮಿತಿ ಸದಸ್ಯರು ಪೂರ್ವಭಾವಿ ಸಭೆ ನಡೆಸಿ, ಜಾತ್ರೆಯನ್ನು ಯಶಸ್ವಿಗೊಳಿಸಲು ಕೈಗೊಳ್ಳಬೇಕಾದ ವ್ಯವಸ್ಥೆಗಳು, ಭಕ್ತರಿಗೆ ಅಗತ್ಯ ಸೌಲಭ್ಯಗಳು, ಶಿಸ್ತು ಮತ್ತು ಭದ್ರತೆ ಕುರಿತು ಚರ್ಚಿಸಿದರು. ಸಭೆಯಲ್ಲಿ ಜಾತ್ರಾ ಸಮಿತಿ ಸದಸ್ಯರೊಂದಿಗೆ ಸಮುದಾಯದ ಮುಖಂಡರು ಹಾಗೂ ಗೊರವಿನಕೆರೆ ವಂಶಸ್ಥರು ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದರು.
ಜಾತ್ರಾ ಮಹೋತ್ಸವವು ಸುಸೂತ್ರವಾಗಿ ಹಾಗೂ ಶಾಂತಿಯುತವಾಗಿ ನಡೆಯಲು ಎಲ್ಲರೂ ಸಹಕಾರ ನೀಡಬೇಕೆಂದು ಜಾತ್ರಾ ಸಮಿತಿ ಮನವಿ ಮಾಡಿತು. ಭಕ್ತರ ಸೌಲಭ್ಯ, ಸ್ವಚ್ಛತೆ, ಸಂಚಾರ ವ್ಯವಸ್ಥೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಹೆಚ್ಚಿನ ಗಮನ ನೀಡಲಾಗುವುದು ಎಂದು ತಿಳಿಸಲಾಯಿತು.
ಸಭೆಯಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಆರ್. ಮಲ್ಲಯ್ಯ, ಕಾರ್ಯದರ್ಶಿ ಕರೀಕೆರೆ ನಾಗರಾಜ, ಹಿರಿಯೂರು ಚಂದ್ರಣ್ಣ, ಪಾತಲಿಂಗಪ್ಪ, ಗೊಲ್ಲಹಳ್ಳಿ ನಿಂಗಣ್ಣ, ನರೇಂದ್ರಕುಮಾರ್, ಪ್ರಕಾಶ್ ಜುಂಜರಗುಂಟೆ, ನಾಗರಾಜು, ತಿಪ್ಪೇಸ್ವಾಮಿ, ವೇದಮೂರ್ತಿ, ಗುರುಸಿದ್ದಪ್ಪ, ಮಲ್ಲಿಕಾರ್ಜುನ್, ನಗರಂಗೆರೆ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading