February 10, 2026
vijaykarnataka.jpg

ಚಿತ್ರದುರ್ಗಫೆ.9:
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯ ಫಲಾನುಭವಿಗಳನ್ನು ಗುರಿಯಾಗಿಸಿಕೊಂಡು ಪೋನ್ ಮೂಲಕ ಕರೆ ಮಾಡಿ ಓಟಿಪಿ ಪಡೆದು ವಂಚಿಸುವ ಪ್ರಕರಣ ಬೆಳಕಿಗೆ ಬಂದಿದೆ. ಮೊಬೈಲ್ ಸಂಖ್ಯೆ 9153257976 ಮೂಲಕ ತಾಲ್ಲೂಕಿನ ಕಡಬನಹಳ್ಳಿ ಗ್ರಾಮದ ಅಂಗನವಾಡಿ ವ್ಯಾಪ್ತಿಯ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಕರೆ ಮಾಡಿ, ಅಂಗನವಾಡಿ ಕಾರ್ಯಕರ್ತೆ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಎಂದು ಪರಿಚಯಿಸಿಕೊಂಡು, ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯ ಹಣ ಜಮಾ ಮಾಡುವ ನೆಪದಲ್ಲಿ ಫಲಾನುಭವಿಗಳಿಂದ ಒಟಿಪಿ ಪಡೆದು, ಅವರ ಬ್ಯಾಂಕ್ ಖಾತೆಗಳಿಂದ ಹಣವನ್ನು ದೋಚುತ್ತಿದ್ದಾರೆ. ಸೋಮವಾರ ಫಲಾನುಭವಿಯೊಬ್ಬರ ಖಾತೆಯಿಂದ ಸುಮಾರು 50,000 ರೂ. ಗಳಿಗೂ ಹೆಚ್ಚು ಹಣವನ್ನು ಅನಧಿಕೃತವಾಗಿ ವರ್ಗಾವಣೆ ಮಾಡಿಕೊಳ್ಳಲಾಗಿದೆ. 9153257976 ಮೊಬೈಲ್ ಸಂಖ್ಯೆ ಅಥವಾ ಸಂಶಯಾಸ್ಪದ ಮೊಬೈಲ್ ಸಂಖ್ಯೆಯಿAದ ಕರೆ ಮಾಡಿ ಬ್ಯಾಂಕ್ ವಿವರ ಅಥವಾ ಒಟಿಪಿ ವಿವರ ಕೇಳಿದರೆ ಯಾರು ಕೂಡ ಹಂಚಿಕೊಳ್ಳಬಾರದು. ಒಂದು ವೇಳೆ ಇಂತಹ ಕರೆಗಳು ಬಂದರೆ ಸಾರ್ವಜನಿಕರು ತಕ್ಷಣ ಜಾಗೃತರಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ ಮಾಹಿತಿ ನೀಡುವಂತೆ ಉಪನಿರ್ದೇಶಕ ವಿಜಯ್ ಕುಮಾರ್ ಕೆ.ಹೆಚ್ ಕೋರಿದ್ದಾರೆ.
============

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading