December 14, 2025
img_1_1759831716794.jpg

ಚಳ್ಳಕೆರೆ ಸೆ.7 ಗ್ರಾಮ ಪಂಚಾಯತಿಗಳಲ್ಲಿ 15ನೇ ಹಣಕಾಸು ಯೋಜನೆಯ ಹಣ ದುರ್ಬಳಕೆಯಾಗಿದ್ದು, ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ತಾಲೂಕು ಇಒ ಗೆ ನವೀನ್ ರೆಡ್ಡಿ ದೂರು ನೀಡಿರುವುದು ಬೆಳಕಿಗೆ ಬಂದಿದೆ.

ಹೌದು ಇದು ಚಳ್ಳಕೆರೆ ತಾಲೂಕಿನ ಅನ್ಬೇನಹಳ್ಳಿ.ಬೆಳಗೆರೆ.ಪಿ.ಮಹದೇವಪುರ.ಮಲ್ಲೂರಹಳ್ಳಿ.ರಾಮಜೋಗಿಹಳ್ಳಿ.ಎನ್.ದೇವರಹಳ್ಳಿಗ್ರಾಮಪಂಚಾಯಿಗಳಲ್ಲಿ ಸಾಮಾಗ್ರಿಗಳ ಖರೀದಿ ಹೆಸರಿನಲ್ಲಿ 2023-24ಹಾಗೂ 25 ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಹಣ ದುರ್ಬಳಕೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸಿನ ಅನುದಾನದ
ಹಣವನ್ನುನೈರ್ಮಲ್ಯ. ಕುಡಿಯುವ ನೀರು.ಬೀದಿ ದೀಪ ಹೆಸರಿನಲ್ಲಿ ಕ್ರಿಯಾ
ಯೋಜನೆ ರೂಪಿಸಿ ನಿಯಮಗಳನ್ನು ಗಾಳಿಗೆ ತೂರಿ ಚೆಕ್ ಮೂಲಕ‌ ಹಣ ನೀಡಿರುವುದು ಬೆಳಕಿಗೆ ಬಂದಿದೆ.
ಅಭಿವೃದ್ಧಿ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಖರ್ಚಾದರೂ ಸಹ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ
ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಬೋಗಸ್ ಬಿಲ್ ಗಳನ್ನು ಮಾಡುತ್ತಿದ್ದಾರೆ. ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ಉಪಯೋಗಕ್ಕೆ
ಬಳಕೆಯಾಗಬೇಕಾಗಿದ್ದ ಹಣ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಸೇರಿದಂತೆ ಕೆಲವರ ಕೈ ಸೇರುತ್ತಿದೆ ಎಂಬ ಗಂಭೀರ ಆರೋಪಗಳು ನಿರಂತರವಾಗಿ ಕೇಳಿಬರುತ್ತಿವೆ.
ಕುಡಿಯುವ ನೀರು, ಚರಂಡಿ ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಇತರೆ ಸೇವೆಗಳ ಹೆಸರಿನಲ್ಲಿ 15ನೇ
ಹಣಕಾಸಿನ ಹಣವನ್ನು ಯಥೇಚ್ಚವಾಗಿ ಖರ್ಚು ಮಾಡುತ್ತಿದ್ದಾರೆ. ಆದರೇ ಇವರುಗಳು ತಿಳಿಸಿದಂತೆ, ಯಾವುದೇ ಕೆಲಸ ಕಾರ್ಯಗಳು ಆಗಿಲ್ಲ ದಿರುವುದು
ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಅಷ್ಟೇ ಅಲ್ಲದೇ 15ನೇ ಹಣಕಾಸಿನ ಅನುದಾನದ ಹಣವನ್ನು ನಿರಂತರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸಾಲು ಸಾಲು ಆರೋಪಗಳು ಕೇಳಿ ಬರುತ್ತೇವೆ.

ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಸಿಬ್ಬಂದಿಗಳು ಕೆಲ ಗ್ರಾಪಂಚಾಯತಿ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು 15ನೇ ಹಣಕಾಸಿ ಅನುದಾನದ ಖರ್ಚಿನ ಬಗ್ಗೆ ಕೇಳುತ್ತಿರುವ ಮಾಹಿತಿಯನ್ನು ಸಂಬಂಧಿಸಿದ ಅಧಿಕಾರಿಗಳು ನೀಡುತ್ತಿಲ್ಲ ಮಾಹಿತಿ ಹಕ್ಕಿನಡಿಯಲ್ಲಿ ಕೇಳಿದರು ನೀಡುತ್ತಿಲ್ಲ. ಮನವಿ ಪತ್ರದ ಮೂಲಕ ಕೇಳಿದರು ಮಾಹಿತಿ ಕೊಡುತ್ತಿಲ್ಲ. ಮಾಹಿತಿ ಕೊಡದೇ ನೆಪ ಹೇಳಿಕೊಂಡು ಸಾಗುತ್ತಿದ್ದಾರೆ. ಮುಖ್ಯವಾಗಿ ಹದಿನೈದನೇ ಹಣಕಾಸಿನ ಅನುದಾನದ ಬಳಕೆಯ ವಿಷಯದಲ್ಲಿ ಗೌಪ್ಯತೆ ಕಾಪಾಡಿಕೊಳ್ಳುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಯಾಕೆಂದರೇ, ಹದಿನೈದು ಹಣಕಾಸಿನ ಅನುದಾನದ ಹಣವನ್ನು ಯಥೇಚ್ಛವಾಗಿ ಅಂಗಡಿಗಳಿಗೆ, ವ್ಯಕ್ತಿಗಳಿಗೆ ವರ್ಗಾವಣೆ ಮಾಡುತ್ತಿದ್ದಾರೆ. ಆದರೇ ಇವರುಗಳು ಯಾವುದಕ್ಕಾಗಿ ವರ್ಗಾವಣೆ ಮಾಡಿದ್ದೆವೆ.ಎಂದು ತಿಳಿಸಿರುತ್ತಾರೋ ಆ ಕೆಲಸಗಳು ಆಗಿರುವುದಿಲ್ಲ.
ಉದಾಹರಣೆಗೆ: ಒಂದು ಅಂಗಡಿಗೆ ಉಪಕರಣ ಖರೀದಿ ಹೆಸರಿನಲ್ಲಿ ಚೆಕ್ ಬರೆದಿದ್ದರೇ, ಆ ಉಪಕರಣ ಖರೀದಿ
ಆಗಿರುವುದಿಲ್ಲ, ಬದಲಿಗೆ ಅವರಿಗೆ ಕಮಿಷನ್ ನೀಡಿ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಹಾಗಾಗಿ ಕಳೆದ ಕೆಲವು ವರ್ಷಗಳಿಂದ 15ನೇ ಹಣಕಾಸಿನ ಅನುದಾನದಲ್ಲಿ ಮಾಡಲಾಗಿರುವ ಎಲ್ಲಾ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ನೀಡಿರುವುದು ಖರೀದಿಸಿದ್ದಿವಿ ಎನ್ನುತ್ತಿರುವ ಉಪಕರಣಗಳ ಬಗ್ಗೆ ಕೂಡಲೇ ತನಿಖೆ ನಡೆಸಬೇಕು. ಅನುದಾನ ದುರ್ಬಳಕೆಯಾಗಿರುವುದು ನಿಜವಾಗಿದ್ದರೆ
ಮೇಲಧಿಕಾರಿಗಳು ಸಂಬಂಧಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸಂಬಂಧಿಸಿದ ಸದಸ್ಯರ ಮೇಲೆ ಪ್ರಕರಣ
ದಾಖಲಿಸಿ, ದುರ್ಬಳಕೆಯಾಗಿರುವ ಹಣವನ್ನು ಅವರುಗಳಿಂದ ವಸೂಲಿ ಮಾಡಬೇಕು. ಅಷ್ಟೇ ಅಲ್ಲದೇ ತಪ್ಪಿತಸ್ಥರ
ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನವೀನ್ ರೆಡ್ಡಿ ದೂರು ನೀಡುವ ಮೂಲಕ ಆಗ್ರಹಿಸಿದ್ದಾರೆ.

ತನಿಖೆ ನಡೆಸಿ ಸೂಕ್ತ ದಾಖಲೆಗಳಿಗಾಗಿ ನೋಟಿಸ್ ಜಾರಿ.

ತಾಲೂಕು ಪಂಚಾಯತ್ ಇಒ ಶಶಿಧರ್ ಮಾತನಾಡಿ ಈಗಾಗಲೆ ಗ್ರಾಮ ಪಂಚಾಯಿತಿ ಗಳಲ್ಲಿ 15 ನೇ ಹಣಕಾಸು ಅನುದಾನ ದುರ್ಬಳಕೆ ಬಗ್ಗೆ ದೂರುಗಳು ಬಂದಿದ್ದು ತನಿಖೆ ನಡೆಸಲಾಗಿದ್ದು ಸೂಕ್ತ ದಾಖಲೆಗಳಿಗಾಗಿ ನೋಟಿಸ್ ಜಾರಿ ಮಾಡಿದ್ದು ಸೂಕ್ತ ದಾಖಲೆ ನೀಡದಿದ್ದರೆ ಸೂಕ್ತ ಕ್ರ‌ಮಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading