ಹಿರಿಯೂರು :
ತಾಲ್ಲೂಕಿನ ಶ್ರೀ ಶುಭೋದಯ ಶೈಕ್ಷಣಿಕ ಸೇವಾ ವೃದ್ದಾಶ್ರಮದ ಹಿತೈಷಿಗಳೂ ದಾನಿಗಳು ಆದ ಶ್ರೀ ಗಣೇಶ್ ರವರು ಪ್ರತಿ ತಿಂಗಳಲ್ಲಿ ಮೊದಲನೇ ಬುಧವಾರದಂದು ಆಶ್ರಮದ ಹಿರಿಯರಿಗೆ ಮದ್ಯಾಹ್ನದ ಹೋಳಿಗೆ ಊಟವನ್ನು ಇಲ್ಲಿನ ಎಲ್ಲಾ ವ್ಯವಸ್ಥೆ ಮಾಡಿಸುತ್ತಾರೆ, ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂಬುದಾಗಿ ಆಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಹೇಳಿದರು.
ತಾಲ್ಲೂಕಿನ ಶ್ರೀ ಶುಭೋದಯ ಶೈಕ್ಷಣಿಕ ಸೇವಾ ವೃದ್ದಾಶ್ರಮದಲ್ಲಿ ಶ್ರೀ ಗಣೇಶ್ ರವರು ವ್ಯವಸ್ಥೆ ಮಾಡಿದ ಹೋಳಿಗೆ ಊಟವನ್ನು ಆಶ್ರಮದ ನಿವಾಸಿಗಳಿಗೆ ವಿತರಿಸಿ, ನಂತರ ಅವರು ಮಾತನಾಡಿದರು.
ತಮ್ಮೆಲ್ಲ ಕೆಲಸ ಕಾರ್ಯಗಳಲ್ಲೂ ಭಗವಂತ ಒಳ್ಳೇದು ಮಾಡಲಿ ನಿಮ್ಮೆಲ್ಲ ಆಸೆ ಕನಸುಗಳು ಈಡೇರಲಿ ಇನ್ನು ಹೆಚ್ಚಿನದಾಗಿ ಸಹಾಯ ಮಾಡುವ ಶಕ್ತಿ ಆ ಭಗವಂತ ಕರುಣಿಸಲಿ ಶ್ರೀಯುತರ ಸೇವಾಮನೋಭಾವಕ್ಕೆ ಶ್ರೀ ಆಶ್ರಮ ಸಮಿತಿ ವತಿಯಿಂದ ಅವರಿಗೆ ಹಾಗೂ ಅವರ ಕುಟುಂಬವರ್ಗಕ್ಕೆ ದೈವಾನುಗ್ರಹ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಿ, ಧನ್ಯವಾದಗಳನ್ನು ತಿಳಿಸಿದರು.
About The Author
Discover more from JANADHWANI NEWS
Subscribe to get the latest posts sent to your email.