ಚಳ್ಳಕೆರೆ:
ಚಳ್ಳಕೆರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವಿಜಯವಾಣಿ ಪತ್ರಿಕೆಯ ವರದಿಗಾರರಾದ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.















ಸಂಘದ ಗೌರವಾಧ್ಯಕ್ಷರಾಗಿ ಸಾಕ್ಷಿ ಪತ್ರಿಕೆಯ ವರದಿಗಾರರಾದ ಡಿ.ಎಸ್. ನಾಗಭೂಷಣ್ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಉದಯವಾಣಿ ಪತ್ರಿಕೆಯ ರಾಜು (ಪರಶುರಾಂಪುರ) ಹಾಗೂ ಕನ್ನಡನಾಡು ಪತ್ರಿಕೆಯ ಸುರೇಶ್ ಬೆಳೆಗೆರೆ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಎಂ.ಜೆ. ಕಿರಣ್, ಖಜಾಂಚಿಯಾಗಿ ವಿಶ್ವವಾಣಿ ಪತ್ರಿಕೆಯ ರಾಮಾಂಜೀನಯ್ಯ, ಕಾರ್ಯದರ್ಶಿಯಾಗಿ ಲಕ್ಷ್ಮಣ್ ಪಾಳೇಗಾರ (ಪರಶುರಾಂಪುರ) ಅವರನ್ನು ಆಯ್ಕೆ ಮಾಡಲಾಗಿದೆ.
ನಿರ್ದೇಶಕರಾಗಿ ವಿಜಯವಾಣಿ ಪತ್ರಿಕೆಯ ಭಾರತಿ ಚಿತ್ತಯ್ಯ, ಪ್ರಜಾವಾಣಿ ಪತ್ರಿಕೆಯ ಧನಂಜಯ (ನಾಯಕನಹಟ್ಟಿ), ನಗರವಾಣಿ ಪತ್ರಿಕೆಯ ಸಿ.ವೈ. ಗಂಗಾಧರ್ (ಚಳ್ಳಕೆರೆ) ಹಾಗೂ ಉದಯಕಾಲ ಪತ್ರಿಕೆಯ ಶಿವಮೂರ್ತಿ (ಪರಶುರಾಂಪುರ) ಅವರನ್ನು ನೇಮಕ ಮಾಡಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿನಾಯಕ ಸೇರಿದಂತೆ ಸಿದ್ದರಾಜು, ಮೂರ್ತಿ, ವೀರೇಶ್, ರಾಜು, ತಿಪ್ಪೇಸ್ವಾಮಿ, ಮಾರುತಿ, ಪ್ರಸನ್ನ ಕುಮಾರ್ ಸೇರಿದಂತೆ ಅನೇಕ ಪತ್ರಕರ್ತರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.