,
ತಳಕು: ‘ಕೇಂದ್ರ ಸರ್ಕಾರ
ನೂತನವಾಗಿ ಜಾರಿಗೆ ತಂದಿರುವ ವಿಬಿ-
ಜಿ ರಾಮ್ ಜಿ ಯೋಜನೆಯು ಗ್ರಾಮೀಣ ಜನರ ಬದುಕಿಗೆ ಭದ್ರತೆ ಒದಗಿಸಲಿದೆ. ಆದರೂ ಕಾಂಗ್ರೆಸ್ ಪಕ್ಷವು ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಿದೆ’ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಜಯಪಾಲಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ತಳಕು ಹೋಬಳಿಯ ಮನ್ನೆಕೋಟೆ, ಘಟಪರ್ತಿ, ದೇವರೆಡ್ಡಿಹಳ್ಳಿ, ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳಕು ಗ್ರಾಮದಲ್ಲಿ ನಾಯಕನಹಟ್ಟಿ ಮತ್ತು ತಳಕು ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ವಿಬಿ-ಜಿ ರಾಮ್ ಜಿ ಯೋಜನೆ ಕುರಿತ ಜಾಗೃತಿ ಮತ್ತು ಬಿಜೆಪಿ
ಸಂಘಟನಾ ಅಭಿಯಾನ ಕಾರ್ಯಕ್ರಮದಲ್ಲಿ
ಮಾತನಾಡಿದರು.
‘ಭಾರತದ ಗ್ರಾಮೀಣ ಉದ್ಯೋಗ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಕಾಯ್ದೆಯನ್ನು ಜಾರಿಗೆ ತಂದಿದೆ
ಎಂದರು.
ಮುಖಂಡ ಪಾಪೇಶ್ ನಾಯಕ, ಮಾತನಾಡಿದರು.ಈ ಹಿಂದೆ ನಮ್ಮ ಬಿಜೆಪಿ ಸರ್ಕಾರ ಇರುವಾಗ ಕಾಂಗ್ರೆಸ್ ಪಕ್ಷದವರು 40 ಪರ್ಸೆಂಟ್ ಸರ್ಕಾರ ಎಂದು ಟೀಕೆ ಮಾಡುತ್ತಿದ್ದರು ಆದರೆ ರಾಜ್ಯದಲ್ಲಿ 80 ಪರ್ಸೆಂಟ್ ಸರ್ಕಾರ ಏನಾದರೂ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಕಾನೂನು ಸುವ್ಯವಸ್ಥೆ ಹದೇಗೆಟ್ಟು ಹೋಗಿದೆ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಟೀಕಿಸಿದರು.
ಇನ್ನೂ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆ ಚಿಕ್ಕಮ್ಮನಹಳ್ಳಿ ತಿಪ್ಪೇರುದ್ರಪ್ಪ ನಾಗರಾಜ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು
ಮಂಡಲ ಅಧ್ಯಕ್ಷ ಮಲ್ಲೇಶ್, ನಿಕಟ ಪೂರ್ವ ಮಾಜಿ ಅಧ್ಯಕ್ಷ ಇ. ರಾಮರೆಡ್ಡಿ, ಪದಾಧಿಕಾರಿಗಳಾದ ಎಸ್ ಟಿ ಮೋರ್ಚ ಜಿಲ್ಲಾಧ್ಯಕ್ಷ ಪಿ. ಶಿವಣ್ಣ, ಎಚ್ ವಿ ಪ್ರಕಾಶ್ ರೆಡ್ಡಿ, ಬೆಂಕಿಗೋವಿಂದಪ್ಪ, ಎಸ್ ನಾಗರಾಜ್, ಮನ್ನೇಕೋಟೆ ಎಂ ಎಸ್ ರವೀಂದ್ರ,ತಳಕು ಗ್ರಾ.ಪಂ. ಸದಸ್ಯರಾದ ಕೃಷ್ಣಮೂರ್ತಿ, ಶಾಂತಣ್ಣ, ತಿಪ್ಪೇಸ್ವಾಮಿ,ರಾಜಣ್ಣ,ಜಡೇಜ ನಾಯ್ಕ, ಮತ್ತು ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ, ತಾತಣ್ಣ ಹನುಮಂತಪ್ಪ, ನಾಗರಾಜ್, ತಿಪ್ಪೇಸ್ವಾಮಿ, ವೈ ಗುರುಮೂರ್ತಿ, ಹನುಮಂತಪ್ಪ,ಇದ್ದರು
About The Author
Discover more from JANADHWANI NEWS
Subscribe to get the latest posts sent to your email.