ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಪಟ್ಟಣದ ತಾಲೂಕು ಕಚೇರಿ ಮುಂಭಾಗ ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿ ತಹಶೀಲ್ದಾರ್ ಎಸ್.ಎನ್.ನರಗುಂದ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಮುಷ್ಕರದಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಅಬ್ದುಲ್ ರಶೀದ್, ತಾಲೂಕು ಗೌರವಾಧ್ಯಕ್ಷ ರವೀಂದ್ರ ರಾವ್, ಅಧ್ಯಕ್ಷ ಸಂದೇಶ್, ಪದಾಧಿಕಾರಿಗಳಾದ ಶಶಿಕಾಂತ್, ತುಕರಾಮಪ್ಪ, ಆರತಿ, ನಾಗರಾಜ್, ಪ್ರಿಯ, ಕಾವೇರಿ, ಅಶ್ವಿನಿ, ಮೇಘನಾ, ಸರಸ್ವತಿ, ರಿಯಾನ, ಹಂಸ ಭಾಗವಹಿಸಿದ್ದರು.

