
ಚಳ್ಳಕೆರೆ : ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಕಾಜಕಾಲುವ ಪಕ್ಕದ ರಸ್ತೆ.
ಹೌದು ಇದು ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ 2 ನೇವಾರ್ಡ್ ಗೊಲ್ಲರಹಟ್ಟಿಗೆ ಹೊಂದುಕೊಂಡು ಹಾದು ಹೋಗುತ್ತಿರುವ ರಾಜಕಾಲುವೆ ಹೂಳು ತುಂಬಿ ಗೊಬ್ಬು ವಾಸನೆ ಒಂದು ಕಡೆಯಾದರೆ ಕಾಲುವೆಯ ದಡದ ಮಣ್ಣು ಹಾಗೂ ಪಕ್ಕದ ರಸ್ತೆ ಕೊರೆದಿರುವುದರಿಂದ ರಸ್ತೆಯಲ್ಲಿ ವಾಹನ ಸಂಚರಿಸಿದರೆ ಕುಸಿಯುತ್ತಿದೆ.
ಕಾಟಪ್ಪನಹಟ್ಟಿ ರಾಜಕಾಲುವೆ ಪಕ್ಕದ ರಸ್ತೆಯಲ್ಲಿಹಾದು ಹೋಗುವ ಕಾರು ಒಂದು ಇದ್ದಕ್ಕಿದ್ದಂತೆ ರಸ್ತೆ ಕುಸಿತದಿಂದ ಕಾರು ಕುಸಿದು ಸಿಲುಕಿಕೊಂಡಿದ್ದು ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಇಷ್ಟೆಲ್ಲಸಣ್ಣ ಅವ್ಯವಸ್ಥೆ ಇದ್ದರೂ ಸಹ ನಗರಸಭೆ ಮಾತ್ರ ರಾಜಲಾಲುವೆ ದುರಸ್ಥಿಪಡಿಸಲು ಮುಂದಾಗಿತ್ತಿಲ್ಲ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಅಪಘಾತಗಳನ್ನು ತಡೆಯಲು ರಾಜಕಾಲುವೆ ಹಾಗೂ ರಸ್ತೆ ದುರಸ್ಥಿ ಪಡಿಸುವರೇ ಕದು ನೋಡ ಬೇಕಿದೆ.
.