ಹೊಸದುರ್ಗ: ತನ್ನ ಕಷ್ಟಗಳನ್ನು ಬದಿಗೊತ್ತಿ, ವಿದ್ಯಾರ್ಥಿಗಳ ಶ್ರೆಯಸ್ಸಿಗೆ ಸದಾ ಹಂಬಲಿಸುವ ಮಾತೃ ಹೃದಯಿ, ವೃತ್ತಿ ಶಿಕ್ಷಕರಾಗಿದ್ದರೂ ಸಹ ವಾಲಿಬಾಲ್ ಕ್ರೀಡೆಯಲ್ಲಿ ಶಾಲೆಯ ಕೀರ್ತಿಯನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೋಯ್ದ ನೆಚ್ಚಿನ ಶಿಕ್ಷಕ ಕೆ.ಎಸ್. ಸೋಮಶೇಖರ್ ಅವರ ನಿವೃತ್ತಿಯಾಗಲಿದ್ದು, ನ.೩೦ ರಂದು ಶನಿವಾರ ಹೊಳಲ್ಕೆರೆ ತಾಲೂಕು ಗೌಡಿಹಳ್ಳಿಯ ಶ್ರೀ ಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಹಳೇ ವಿದ್ಯಾರ್ಥಿಗಳ ತಂಡದಿAದ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗದೆ.
೧೯೬೪ ರ ನವೆಂಬರ್ ೨೩ ರಂದು ಹೊಳಲ್ಕೆರೆ ತಾಲ್ಲೂಕಿನ ಕಣಿವೆಹಳ್ಳಿ ಗ್ರಾಮದ ರೈತ ದಂಪತಿಗಳಾದ ಶಾಂತಮ್ಮ, ಸಿದ್ದರಾಮಪ್ಪ ಅವರಿಗೆ ೬ ನೇ ಮಗನಾಗಿ ಜನಿಸಿದರು. ಪ್ರೌಢಶಾಲೆಯ ಹಂತದವರೆಗೂ ಉತ್ತಮ ಶಿಕ್ಷಣ ಪಡೆದರು. ಜೆ.ಓ.ಸಿ. ಶಿಕ್ಷಣದ ನಂತರ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಹಾರ್ಟಿಕಲ್ಚರ್ ತರಬೇತಿ ಪಡೆದರು.
ವೃತ್ತಿ ಜೀವನ : ೧೯೮೫ ರ ಆಗಸ್ಟ್ ೧೪ ರಂದು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಲೋಕಮ್ಮನಹಳ್ಳಿ ವೃತ್ತದಲ್ಲಿನ ತುರುವೇಕೆರೆ ತಾ. ಕಂಚಿರಾಯ ಸ್ವಾಮಿ ವಿದ್ಯಾಸಂಸ್ಥೆಯ ಎಸ್.ಕೆ.ಆರ್ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದರು. ೧೯೮೬ ರಲ್ಲಿ ಕೆ.ಎಲ್. ಸುಲೋಚನಾ ಅವರ ಜೊತೆ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದರು. ಇದರ ಜೊತೆಯಲ್ಲಿಯೇ ಬಿ.ಎ ಪದವಿಯನ್ನು ಸಹ ತಮ್ಮ ಮುಡಿಗೇರಿಸಿಕೊಂಡರು. ೧೯೯೪ ರಲ್ಲಿ ಕಾನೂನು ಪದವಿ ಪಡೆದರು. ಶಿಕ್ಷಣ ಹಾಗೂ ಓದುವುದರ ಬಗ್ಗೆ ಅಪಾರ ಆಸಕ್ತಿ ವಹಿಸಿದ್ದ ಕೆ.ಎಸ್. ಸೋಮಶೇಖರ್ ಅವರು ವೃತ್ತಿ ಹಾಗೂ ವೈವಾಹಿಕ ಜೀವನದ ಜೊತೆಯಲ್ಲಿಯೂ ಓದು ಮುಂದುವರಿಸಿದರು. ಬಿ.ಇಡಿ. ಪದವಿ ನಂತರ ೨೦೦೧ ರ ಸಾಲಿನಲ್ಲಿ ಕೆ.ಎ.ಎಸ್. ಪರೀಕ್ಷೆಯನ್ನು ಸಹ ಎದುರಿಸಿದರು. ಫಲಿತಾಂಶ ಬಂದ ದಿನವೇ ಹಿರಿಯ ಮಗನ ಅಕಾಲಿಕ ಮರಣದಿಂದಾಗಿ ಒಲಿದ ಅದೃಷ್ಟ ಕೈ ತಪ್ಪಿತು. ದುಃಖದ ನಡುವೆ ಛಲಬಿಡದೆ ಓದಿದ ಇವರು ೨೦೧೫ ರಲ್ಲಿ ಎಂ.ಎ ಪದವಿ ಪಡೆದರು. ಅಪಾರ ಪುಸ್ತಕಗಳನ್ನು ಅಧ್ಯಯನ ಮಾಡಿದ್ದಾರೆ. ಜ್ಞಾನ ಭಂಡಾರವೇ ಅವರು ಬಳಿಯಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ವೃತ್ತಿ ಜೀವನ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಗೌಡಿಹಳ್ಳಿ ಈ ಶಾಲೆಗೆ ವರ್ಗಾವಣೆಗೊಂಡು ಬಂದರು. ಅಂದಿನಿAದ ಸತತ ೩೦ ವರ್ಷಗಳ ಕಾಲ ಇಲ್ಲಿನ ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದಿ, ಶಿಲೆಯಂತಿದ್ದ ಮಕ್ಕಳನ್ನು ತಿದ್ದಿ, ತೀಡಿ, ಎಲ್ಲರ ನೆಚ್ಚಿನ ಕೆ.ಎಸ್.ಎಸ್. ಆದರು.
೨೫ ವರ್ಷಗಳ ಕಾಲ ವೃತ್ತಿ ಶಿಕ್ಷಕರಾಗಿದ್ದುಕೊಂಡೇ ಇಂಗ್ಲಿಷ್ ಶಿಕ್ಷಣ ಬೋಧನೆ ಮಾಡುತ್ತಿದ್ದರು. ಪ್ರಾಮಾಣಿಕ ಪ್ರಯತ್ನ ಮಾಡಿದರೆ,
ಕ್ರೀಡೆಯಲ್ಲಿಯೂ ಹೆಜ್ಜೆ ಗುರುತು: ಕೇವಲ ಓದುವುದು, ಜ್ಞಾನಾರ್ಜನೆಗೆ ಸೀಮಿತವಾಗಿರದೆ, ಕ್ರೀಡೆಯಲ್ಲಿಯೂ ಸಕ್ರಿಯವಾಗಿ ತೊಡಗಿಕೊಂಡಿದ್ದರು. ವಾಲಿಬಾಲ್ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಇವರು, ದೈಹಿಕ ಶಿಕ್ಷಕರಿಗೆ ಬೆನ್ನೆಲುಬಾಗಿ ನಿಂತು, ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ. ವಾಲಿಬಾಲ್ ಹಾಗೂ ಥ್ರೋಬಾಲ್ ನೆಚ್ಚಿನ ಕ್ರೀಡೆಯಾಗಿದ್ದು, ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದವರೆಗೂ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ.
ಪ್ರಶಸ್ತಿಗಳು : ಸೇವೆ ನಿರಂತರವಾಗಿ, ಪ್ರಾಮಾಣಿಕವಾಗಿದ್ದರೇ ಫಲ ತಮ್ಮ ಬಳಿಯೇ ಬರುತ್ತವೆ ಎಂಬುದಕ್ಕೆ ಉತ್ತಮ ನಿದರ್ಶನ ನಮ್ಮ ಕೆ.ಎಸ್.ಎಸ್. ಇವರಿಗೆ ೨೦೧೩ ರಲ್ಲಿ ತಾಲ್ಲೂಕಿನ ಅತ್ಯುತ್ತಮ ಶಿಕ್ಷಕ. ೨೦೧೮ ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ.
೧೫ ಬಡ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಆಶ್ರಯ ನೀಡಿ, ಶಿಕ್ಷಣ ನೀಡಲಾಗಿದ್ದು,ಶಿಕ್ಷಕರ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಸತತವಾಗಿ ಪ್ರಥಮ ಸ್ಥಾನ ಗಳಿಸಿದ್ದಾರೆ. ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.