ನಾಯಕನಹಟ್ಟಿ : ಕಾಂಗ್ರೆಸ್ ಪಕ್ಷ ಅಧಿಕಾರ ಬಂದ ಬಿನದಿಂದ ಇಲ್ಲಿವರಿಗೂ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ರಾಜ್ಯದಲ್ಲಿ ರಸ್ತೆಗಳು ತಂಗು ಗುಂಡಿಗಳು ತುಂಬಿವೆ ರಸ್ತೆಗಳ ಗುಂಡಿ ಮುಚ್ಚಿಲು ಆಗುತ್ತಿಲ್ಲ ಎಂದು ಬಿಜೆಪಿ ಜಿಲ್ಲಾ ಆಧ್ಯಕ್ಷ ಕೆ ಟಿ ಕುಮಾರಸ್ವಾಮಿ ತಿಳಿಸಿದರು.
ಗುರುವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಾಯಕನಹಟ್ಟಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಪಕ್ಷ ಸಂಘಟನೆ ಮತ್ತು ಮತದಾರ ಪಟ್ಟಿ ಪರಿಷ್ಕರಣೆ ಪ್ರಶಿಕ್ಷಣ ವರ್ಗ ಡಾ|| ಬಿ ಆರ್ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾನಾಡಿದವರು 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರ ಬರುವುದು ಸೂರ್ಯ ಚಂದ್ರರ ಆಣೆ ಅಧಿಕಾರ ಬರುವುದು ಖಂಚಿತ, ಆದ್ದರಿಂದ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಕೈ ಜೋಡಿಸಬೇಕೆಂದು ಸಲಹೆ ನೀಡಿದರು.
ಮಂಡಲದ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್ ಮಾತಾನಾಡಿ ಮುಂಬರುವ ಗ್ರಾಮ ಪಂಚಾಯಿತಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ ಅಧಿಕಾರ ಬರಲು ಪ್ರತಿಯೊಬ್ಬ ಕಾರ್ಯಕರ್ತ ತಮ್ಮ ತಮ್ಮ ಗ್ರಾಮಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜೆಯವರ ಅಭಿವೃದ್ಧಿ ಕೆಲಸಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.
ಇನ್ನೂ ಇದೇ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಎಚ್ ಮೋಹನ್ ಹಾಗೂ ಮಾದುರಿ ಗಿರೀಶ್ ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಎಂ ವೈ ಟಿ ಸ್ವಾಮಿ ಮತ್ತು ಈ ರಾಮರೆಡ್ಡಿ ಮಾತಾನಾಡಿದರು.
ಈ ಸಂಧರ್ಭದಲ್ಲಿ ಎಸ್ ಸಿ ಮೋರ್ಚ ಅಧ್ಯಕ್ಷ ಶಂಕರಸ್ವಾಮಿ ಮಂಡಲ ಉಪಾಧ್ಯಕ್ಷ ಗುಂತಕೋಲಮ್ಮನಹಳ್ಳಿ ಜೆಸಿಬಿ ತಿಪ್ಪೇಸ್ವಾಮಿ, ಮಂಡಲ ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದಪ್ಪ, ಕಾರ್ಯದರ್ಶಿ ಎಚ್ ಪ್ರಕಾಶ, ಬಿ ಮೂರ್ತಿ, ಶಿವದತ್ತ, ಮಲ್ಲಯ್ಯ ಮಲ್ಲೂರಹಳ್ಳಿ, ಮಲ್ಲಿಕಾರ್ಜುನ, ನಗರ ಘಟಕ ಅಧ್ಯಕ್ಷ ನಾಗರಾಜ್, ಹಿರೇಹಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಡಿ ಎಚ್ ಪರಮೇಶ್ವರಪ್ಪ. ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತಿತರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.