ನಾಯಕನಹಟ್ಟಿ-: ಗ್ರಾಮೀಣ ಪ್ರದೇಶದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆ ಹಾಗೂ ಹೇಮಾವತಿ ಅಮ್ಮನವರ ಕಾರ್ಯಕ್ರಮ ಜಾತಿಯತೆ ಬಡವ ಶ್ರೀಮತಿ ಕೆಲವು ಹೋಗಲಾಡಿಸಲು ಬಹಳ ಪ್ರಮುಖವಾಗಿದೆ ಎಂದು ಎಂವೈಟಿ ಸ್ವಾಮಿ ತಿಳಿಸಿದರು.




ಗುರುವಾರ ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ(ರಿ) ಸಂಸ್ಥೆ ವತಿಯಿಂದ ಮಾತೃಶ್ರೀ ಹೇಮಾವತಿ ಅಮ್ಮನವರ ಹುಟ್ಟು ಹಬ್ಬದ ಪ್ರಯುಕ್ತ ನಾಯಕನಹಟ್ಟಿ- ಯೋಜನಾ ಕಚೇರಿ ವ್ಯಾಪ್ತಿಯ ನಾಯಕನಹಟ್ಟಿ- ವಲಯದ ನಾಯಕನಹಟ್ಟಿ- ಮತ್ತು ಜಾಗನೂರಹಟ್ಟಿ ಗ್ರಾಮಗಳ ಮಾಶಾಸನ ಪಡೆಯುವ ಫಲಾನುಭವಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಲಕ್ಷಾಂತರ ಹೆಣ್ಣು ಮಕ್ಕಳು ಮಾಶಾಸನವನ್ನು ಪಡೆಯುತ್ತಿದ್ದಾರೆ ಶ್ರೀ ಕ್ಷೇತ್ರ ಇಂತಹ ಸಾಮಾಜಿಕ ಆರ್ಥಿಕವಾಗಿ ಸಮ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಿರುವುದು ಪುಣ್ಯದ ಕೆಲಸ ಎಂದರು.
ಇನ್ನೂ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳು ಹಣ್ಣು ಹಂಪಲ ಸ್ವೀಕರಿಸಿದ ಹಿರಿಯ ಜೀವಿಗಳು ಮಾತೃಶ್ರೀ ಹೇಮಾವತಿ ಅಮ್ಮನವರಿಗೆ ಶುಭ ಹಾರೈಸಿದರು.
ತಾಲ್ಲೂಕು ಯೋಜನಾಧಿಕಾರಿ ಜಯಂತ್ ಕುಮಾರ್,
ಒಕ್ಕೂಟದ ಪದಾಧಿಕಾರಿಗಳು ಮತ್ತು
ಮೇಲ್ವಿಚಾರಕಿ ಶ್ರೀಮತಿ ಶಶಿಕಲಾ ಸೇವಾ ಪ್ರತಿನಿಧಿಗಳು ಇದ್ದರು