
ನಾಯಕನಹಟ್ಟಿ:
ಪೋಕ್ಸೋ ಕಾಯ್ದೆಯು ಬಾಲ್ಯ ವಿವಾಹ ನಡೆಸುವ ಪೋಷಕರ ನೆತ್ತಿಯ ಮೇಲೆ ಸದಾ ತೂಗುವ ಕತ್ತಿ ಇದ್ದಂತೆ ಹಾಗಾಗಿ ಪ್ರತಿಯೊಬ್ಬ ಮಕ್ಕಳಿಗೂ ಕಡ್ಡಾಯ ಶಿಕ್ಷಣ ನೀಡುವುದರ ಜೊತೆಗೆ ಬಾಲ್ಯ ವಿವಾಹ ಮಾಡುವುದನ್ನು ನಿಲ್ಲಿಸಬೇಕಿದೆ ಎಂದು ನಾಯಕನಹಟ್ಟಿ ಪೊಲೀಸ್ ಠಾಣೆ ಪಿಎಸ್ಐ ಪಾಂಡುರಂಗಪ್ಪ ತಿಳಿಸಿದರು ಅವರು ಪಟ್ಟಣದ ವಿದ್ಯಾ ವಿಕಾಸ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಕಾನೂನು ಸೇವೆಗಳ ಪ್ರಾಧಿಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಕ್ಕಳ ರಕ್ಷಣಾ ಘಟಕ ಹಾಗೂ ಆಶ್ರಿತ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಹೆಣ್ಣಾಗಲಿ ಗಂಡಾಗಲಿ ಅಪ್ರಾಪ್ತ ವಯಸ್ಸಿನಲ್ಲಿ ಕಡ್ಡಾಯವಾಗಿ ಶಿಕ್ಷಣ ನೀಡಿ ಎಂದರು.
ಹೆಣ್ಣು ಮಕ್ಕಳು ದೈಹಿಕವಾಗಿ ಮತ್ತು ಸಾಮಾಜಿಕವಾಗಿ ಹಲ್ಲೆಗೊಳಗಾದಾಗ ಧೈರ್ಯವಾಗಿ ಪ್ರತಿರೋಧಿಸಿ, ನಿಮ್ಮ ಸುತ್ತಲಿನ ಕೆಟ್ಟ ಪರಿಸ್ಥಿತಿಗಳನ್ನು ವಿರೋಧಿಸದೆ ಮೌನವಾಗಿದ್ದರೆ ಅದನ್ನು ಸಮ್ಮತಿ ಎಂದುಕೊಂಡು ಕಿಡಿಗೇಡಿಗಳು ನಿಮ್ಮ ಮೇಲೆ ಮತ್ತಷ್ಟು ಕಿರುಕುಳ ಕೊಡುತ್ತಾರೆ ಎಂದು ತಿಳಿಸಿದರು.
ಡಿ.ಸಿ.ಪಿ.ಓ.ವಿನಯ್ ಮಾತನಾಡಿ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಮುಂದುವರಿಸುವ ಪೂರಕ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಿ ಕೊಡಬೇಕು ಸಂಬಂಧಗಳ ವಿಚಾರಕ್ಕೆ ಅಪ್ರಾಪ್ತ ಬಾಲಕರಿಗೆ ಮದುವೆ ಮಾಡಿದರೆ ಕಾನೂನು ರೀತ್ಯಾ ಅಂತಹ ಪೋಷಕರನ್ನು ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂದರು.
ಶಿಕ್ಷಣದಿಂದ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ಸದೃಢ ದೇಶವನ್ನು ಕಟ್ಟಬಹುದು ಹಾಗಾಗಿ ಯುವಜನತೆ ಮೊಬೈಲ್ ಗಳನ್ನು ತ್ಯಜಿಸಿ ಶಿಕ್ಷಣದಡೆಗೆ ಗಮನ ಕೊಡಿ ಎಂದು ಕರೆ ನೀಡಿದರು.
ಆರೋಗ್ಯ ಇಲಾಖೆಯ ಶೇಷಾದ್ರಿ, ಸಖಿ ಕೇಂದ್ರದ ಶೃತಿ. ರೇಖಾ. ಮಾತನಾಡಿದರು. ಎ.ಎಸ್ಐ. ಧನಂಜಯ. ಆಶ್ರಿತ ಸಂಸ್ಥೆಯ ಎಸ್ ಚಂದ್ರಣ್ಣ. ತಿಪ್ಪೇಸ್ವಾಮಿ. ದೇವಿರಮ್ಮ. ಯುವರಾಜ್. ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಾಯಕನಹಟ್ಟಿ ವಲಯ ಮೇಲ್ವಿಚಾರಕಿ ಸೌಮ್ಯ. ಸುನೀತ. ವಿನುತಾ. ಶಾಲೆಯ ಮುಖ್ಯ ಶಿಕ್ಷಕರು ಶಿಕ್ಷಕ ವೃಂದ. ಅಂಗನವಾಡಿ ಕಾರ್ಯಕರ್ತೆಯರು. ವಿದ್ಯಾರ್ಥಿಗಳು ಹಾಜರಿದ್ದರು.