ಚಿತ್ರದುರ್ಗ | ಜನಧ್ವನಿ ನ್ಯೂಸ್
ಸಂವಿಧಾನ ಶಿಲ್ಪಿ, ಕಾನೂನು ತಜ್ಞ ಹಾಗೂ ಭಾರತ ದೇಶದ ಬಡವರ ಬದುಕಿನ ಕಷ್ಟಗಳಿಗೆ ಧ್ವನಿಯಾಗಿದ್ದ ಬಂಗಾರದ ಮನುಷ್ಯ ಡಾ. ಬಿ.ಆರ್. ಅಂಬೇಡ್ಕರ್ ಅವರ ನಾಮಫಲಕಕ್ಕೆ ಅವಮಾನ ಮಾಡಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಸ್ಥಾಪಿತವಾಗಿದ್ದ ಡಾ. ಅಂಬೇಡ್ಕರ್ ಅವರ ನಾಮಫಲಕಕ್ಕೆ ಕಿಡಿಗೇಡಿಗಳು ಸಗಣಿ ಎಸೆದು ಅಪಮಾನಿಸಿರುವುದನ್ನು ಖಂಡಿಸಿ, ನಾಯಕನಹಟ್ಟಿ–ಚಳ್ಳಕೆರೆ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ತಳಕು ನಾಡಕಚೇರಿಗೆ ದೂರು ಸಲ್ಲಿಸಿದರು. ಉಪತಾಸಿಲ್ದಾರ್ ರಫೀಕ್ ಸಾಬ್ ಹಾಗೂ ಪಿಎಸ್ಐ ಮಂಜುನಾಥ್ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಯಿತು.
ಈ ಪ್ರಕರಣದಲ್ಲಿ ಭಾಗಿಯಾದ ಕಿಡಿಗೇಡಿಗಳನ್ನು ಪೊಲೀಸ್ ಇಲಾಖೆ ಪತ್ತೆಹಚ್ಚಿ, ನ್ಯಾಯಾಂಗದ ಅಡಿಯಲ್ಲಿ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಹಿರೇಹಳ್ಳಿ ಎಸ್. ರಾಜಣ್ಣ, ವಕೀಲ ರುದ್ರಮುನಿ, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ಪತ್ರಕರ್ತ ಸಂಘದ ಪದಾಧಿಕಾರಿ ನಿಂಗರಾಜು ತಳಕು, ಬರಹಗಾರ ವೀರೇಶ್, ಯುವ ನಾಯಕ ಶ್ರೀ ವಾಲ್ಮೀಕಿ ಸ್ಟುಡಿಯೋ ಮಾಲೀಕ ವೀರೇಶ್ ತಳಕು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ್ ಬೇಡರ, ರೆಡ್ಡಿಹಳ್ಳಿ ಬಿ.ಆರ್. ತಿಪ್ಪೇಸ್ವಾಮಿ, ಹೊನ್ನೂರು ಮಾರಣ್ಣ, ಹನುಮಂತನಹಳ್ಳಿ ಚಂದ್ರಣ್ಣ, ಹಾಸ್ಟೆಲ್ ತಿಪ್ಪೇಸ್ವಾಮಿ ಹಿರೇಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.