ನಾಯಕನಹಟ್ಟಿ- ಸಮೀಪದ ನಲಗೇತನಹಟ್ಟಿ ಗ್ರಾ. ಪಂ. ವ್ಯಾಪ್ತಿಯ ರಾಮದುರ್ಗ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ. ಗುರುಮೂರ್ತಿ ರವರ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು.


ಇದು ವೇಳೆ ನಲಗೇತನಹಟ್ಟಿ ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಬಂಗಾರಪ್ಪ ಮಾತನಾಡಿ,ಶಿಕ್ಷಕರು ಕೇವಲ ಅಕ್ಷರ ಕಲಿಸುವ ಕೆಲಸಕ್ಕೆ ಸೀಮಿತವಾಗಿರದೆ ಸಮಾಜಕ್ಕೆ ಉತ್ತಮ ಮಕ್ಕಳನ್ನು ಕೊಡುಗೆ ನೀಡುವ ಗುರುತರ ಜವಾಬ್ದಾರಿಯೂ ನಿಮ್ಮ ಮೇಲಿದೆ. ಅಮೂರ್ತವಾದ ಮಕ್ಕಳನ್ನ ತಿದ್ದಿ ಮೂರ್ತ ರೂಪಕ್ಕೆ ತಂದಾಗ ಉತ್ತಮ ಜೀವನ ಮಾರ್ಗದಲ್ಲಿ ನಡೆಯುತ್ತಾರೆ. ಶಿಕ್ಷಕರ ಶ್ರಮ, ಸಹನೆ, ಸಮರ್ಪಣಾ ಭಾವನೆ ಶಿಕ್ಷಕರ ಆತ್ಮೋನ್ನತಿಗೆ ಕಾರಣವಾಗುವ ಜೊತೆಗೆ ಶಿಷ್ಯರ ಜೀವನಕ್ಕೆ ದಾರಿಯಾಗುತ್ತದೆ. ವೃತ್ತಿ ಜೀವನದ ಸಾರ್ಥಕ ಕ್ಷಣಗಳಿಗೆ ಗೌರವಾರ್ಧವಾಗಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸುತ್ತಿರುವುದು ಖುಷಿಯ ಜೊತೆಗೆ ಧನ್ಯತಾ ಭಾವ ಉಂಟುಮಾಡಿದೆ. ನಿಮ್ಮ ಜೀವನ ಸಮಾಜಮುಖಿಯಾಗಿ, ಧನ್ಯತಾ ಭಾವದಿಂದ ಇರಲಿ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಕೆ.ಬಿ. ಬೋಸಯ್ಯ, ಎಸ್ ಡಿ ಎಂ ಸಿ ಅಧ್ಯಕ್ಷ ತಮ್ಮಯ್ಯ, ಗ್ರಾಮಸ್ಥರಾದ ದೊಡ್ಡ ಓಬಯ್ಯ, ಬೊಮ್ಮಯ್ಯ,
ನಿವೃತ್ತ ಶಿಕ್ಷಕ ಸಿ.ಬಿ. ಉಮೇಶ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಹೇಮಂತ್, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಪಿ.ವಿ. ವಿಶ್ವನಾಥ, ಸಿಆರ್ಪಿ ಜಿ.ಪಾಲಯ್ಯ, ಜಗನ್ನಾಥ್, ಶಿಕ್ಷಕರ ಬಳಗದ ಹೋಬಳಿ ಅಧ್ಯಕ್ಷ ಬಿ.ಎಚ್. ತಿಪ್ಪೇರುದ್ರಪ್ಪ, ಎನ್ ಮಹಾಂತೇಶ್, ಬಸವರಾಜ್, ಮಲ್ಲಿಕಾರ್ಜುನ್, ಹುಸೇನ್ ಸಾಬ್,ಓ. ಬೋರಯ್ಯ, ರಾಮದುರ್ಗ ಶಾಲೆ ಶಿಕ್ಷಕಿ ಶಕುಂತಲಾ, ಜಯಲಕ್ಷ್ಮಿ, ರಾಧ ದೀಪಾ, ಸೇರಿದಂತೆ ರಾಮದುರ್ಗ ಗ್ರಾಮಸ್ಥರು ವಿದ್ಯಾರ್ಥಿ -ವಿದ್ಯಾರ್ಥಿನಿಯರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.