.
ವರದಿ- ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಕುಟುಂಬಸ್ಥರೆಲ್ಲರೂ ಭಜನೆ ಪೂಜೆಗಳಲ್ಲಿ ಭಾಗವಹಿಸಿದಾಗ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಅದಕ್ಕೆ ದೇವಸ್ಥಾನಗಳು ಸಾಕ್ಷಿಯಾಗಲಿವೆ ಎಂದು ಕ್ಷೇತ್ರ ಯೋಜನಾಧಿಕಾರಿ ಶಿವಣ್ಣ.ಎಸ್ ತಿಳಿಸಿದರು.
ತಾಲೂಕಿನ ಅಗಸರಹಳ್ಳಿ ಗ್ರಾಮದ ಶ್ರೀ ಬವಾನಸಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಸೋಮವಾರ ಮೂರುವರೆ ಲಕ್ಷ ಡಿ.ಡಿ.ವಿತರಣೆ ಮಾಡಿ ಮಾತನಾಡಿದರು.
ಕುಟುಂಬದವರು, ಮಕ್ಕಳು,ಮನೆಯವರೆಲ್ಲರೂ ಪೂಜಾ ಕಾರ್ಯಕ್ರಮದಲ್ಲಿ ಪೂಜೆ,ಪ್ರಾರ್ಥನೆ ನಡೆಯುವ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಭಾಗವಹಿಸಿದರೆ ಹಿರಿಯರು ದೇವಸ್ಥಾನಗಳ ಮಹತ್ವದ ಬಗ್ಗೆ ಹಿರಿಯರು ಕಿರಿಯರಿಗೆ ಭೋಧನೆ ಮಾಡಿದಾಗ ಗ್ರಾಮದಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಮೊಬೈಲ್ ,ಟಿವಿ ಹಾವಳಿ ಹೆಚ್ಚಾಗಿದ್ದು ಹಿರಿಯರು,ಕಿರಿಯರು ಒಟ್ಟಿಗೆ ಕೂತು ಪೂಜಾ ಕಾರ್ಯಕ್ರಮಗಳ ಸಂಭ್ರಮ ಪಡುವುದು ಕಡಿಮೆಯಾಗುತ್ತಿದ್ದು, ಇದರಿಂದ ಭವಿಷ್ಕಕ್ಕೆ ತೊಂದರೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಬದಲ್ಲಿ ಜಿಲ್ಲಾ ಜನಜಾಗೃತಿ ಸದಸ್ಯರಾದ ತಿಪ್ಪೇಶ್,ಸಿದ್ದರಾಮಣ್ಣ ಊರಿನ ಮುಖಂಡರು, ವಕೀಲರು ನಾಗು ಮನಸ್ಸು,ಪರಮೇಶ್ವರಪ್ಪ ಊರಿನ ಗಣ್ಯರು ದೇವಸ್ಥಾನದ ಕಮಿಟಿಯವರು, ಸಂಘದ ಸದಸ್ಯರು ಹಾಜರಿದ್ದರು.



About The Author
Discover more from JANADHWANI NEWS
Subscribe to get the latest posts sent to your email.