ತಳಕು ಅ.31
ದಲಿತ ಸಮುದಾಯಕ್ಕೆ ಕ್ಷೌರಮಾಡದ ಅಂಗಡಿ ಮಾಲಿಕನ ವಿರುದ್ದ ದೂರು ನೀಡಿದ ಯುವಕನಿಗೆ ದೂರವಾಣಿ ಕರೆ ಮಾಡಿ ದಮ್ಕಿಕದವರ ಮೇಲೆ ತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಹೌದು ಇದು ತಳಕು ಠಾಣೆ ವ್ಯಾಪ್ತಿಯ ಕಾಲುವೆಹಳ್ಳಿ ಗ್ರಾಮದ ರಂಗಮಂದಿರದ ಹಿಂಭಾಗ ಇಟ್ಟಿರುವ ಕ್ಷೌರದ ಅಂಗಡಿ ನಾಗರಾಜ್ ಎಕೆ ಜನಾಂಗದವರಿಗೆ
ಕಟಿಂಗ್ ಶೇವಿಂಗ್ ಮಾಡಿರುವುದಿಲ್ಲ. ಕಳೆದ 8 ದಿನಗಳ ಹಿಂದೆ ಪಿರ್ಯಾದಿಯು ನಾಗರಾಜನ ಕಟಿಂಗ್ ಅಂಗಡಿಗೆ ಹೋಗಿ ಕಟಿಂಗ್ ಮಾಡಲು
ಕೇಳಿಕೊಂಡಾಗ ನಾಗರಾಜನು ಗ್ರಾಮಸ್ಥರ ಮತ್ತು ಇತರೆ ಜಾತಿಯವರ ಒಪ್ಪಿಗೆ ಕೊಡಿಸು ಆಗ ಎಕೆ ಜನಾಂಗದವರಿಗೆ ಕಟಿಂಗ್ ಶೇವಿಂಗ್ ಮಾಡುತ್ತೇನೆ
ಇಲ್ಲವಾದರೆ ಮಾಡುವುದಿಲ್ಲ, ಆಗೊಂದು ವೇಳೆ ನಾನು ನಿಮಗೆ ಕಟಿಂಗ್ ಶೇವಿಂಗ್ ಮಾಡಿದರೆ, ಗ್ರಾಮದ ಬೇರೆ ಜಾತಿಯವರು ನನ್ನ ಮೇಲೆ ಗಲಾಟೆ
ಮಾಡಿ ಊರು ಬಿಡಿಸುತ್ತಾರೆ ಎಂದು ಹೇಳಿರುತ್ತಾರೆ.
ನೊಂದ ದಲಿತ ಯುವಕ ಅ.28 ರಂದು ಚಳ್ಳಕೆರೆಯ ದಲಿತ
ಮುಖಂಡರನ್ನು ಸಂಪರ್ಕಿಸಿ ಅವರ ಮೂಲಕ ಚಳ್ಳಕೆರೆ ತಹಶೀಲ್ದಾರ್ ಗೆ ಮನವಿ
ನೀಡಿದ್ದು ತಹಶೀಲ್ದಾರ್ ರವರು ಬುಧುವಾರ ಗ್ರಾಮಕ್ಕೆ ಬಂದು ಸರಿಪಡಿಸುವುದಾಗಿ ಹೇಳಿ ಕಳುಹಿಸಿರುತ್ತಾರೆ.
ನಂತರ ಅ.29 ರಂದು ಕಾಲುವೇಹಳ್ಳಿ, ಗ್ರಾಮದ ಎ.ಕೆ ಜನಾಂಗದ ದರ್ಶನ್ ಗ್ರಾಮದ
ನಾಗರಾಜ ಪೋನ್ ಮಾಡಿ ನಿನ್ನ ತಮ್ಮ ಅಜಿತ್ ನಿಗೆ
ಕೊಡು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದಾಡಿದಾಗ ಅಜಿತ್ ಈತನು ಯಾಕಣ್ಣ ಎಂದು ಕೇಳಿದಾಗ ನಾಗರಾಜನ ಮೇಲೆ ಯಾಕೆ ಕಂಪ್ಲೆಂಟ್
ಕೊಟ್ಟಿದ್ದೀಯಾ ನಾವು ಅವನಿಗೆ ಸಂಬಳ ಕೊಟ್ಟು ಅಂಗಡಿ ಇಡಿಸಿದ್ದೇವೆ ಎಂದು ಪೋನ್ ಮೂಲಕ ದಮ್ಮಿ ಹಾಕಿದ್ದು, ನಂತರ ಬುಕಣ ಎಂಬುವವನು
ಪಿರ್ಯಾದಿಗೆ ಪಂಚಾಯಿತಿಗೆ ಬರುವಂತೆ ಒತ್ತಾಯಿಸಿ ದಮ್ಮಿ ಹಾಕಿರುತ್ತಾನೆ, ಮತ್ತು ಜೋಲಾಡಿ ರಂಗ ಮತ್ತು ವೆಂಕಟೇಶ ಇವರುಗಳು ಪಿರ್ಯಾದಿಗೆ
ಮತ್ತು ಪಿರ್ಯಾದಿಯ ತಮ್ಮ ಅಜಿತ್ ಗೆ ಪಂಚಾಯಿತಿಗೆ ಬರುವಂತೆ ದಮ್ಮಿ ಹಾಕಿ ಬೆದರಿಕೆ ಹಾಕಿರುತ್ತಾನೆ. ನಾಗರಾಜನು ನಮ್ಮ ಸಮಾಜಕ್ಕೆ ಮಾತ್ರ
ಕಟಿಂಗ್ ಮಾಡುವುದು ಮಾದಿಗ ಜನಾಂಗಕ್ಕೆ ಮಾಡುವುದಿಲ್ಲ ಎಂದು ದಮ್ಮಿ ಹಾಕಿ ನಾಗರಾಜನಿಗೆ ಬೆಂಬಲಿಸಿ ಅಸ್ಪೃಷ್ಯತೆ ಆಚರಣೆಗೆ ದೌರ್ಜನ್ಯ
ನಡೆಸಿರುವ ನಾಗರಾಜ ಕಾತಗೊಂಡನಹಳ್ಳಿ .ನಾಗರಾಜ. ಬುಕಣ. ಜೋಲಾಡಿ ರಂಗ ..ವೆಂಕಟೇಶ ಕಾಲುವೆಹಳ್ಳಿಗ್ರಾಮದವರು ಈ 5 ಜನರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ ದೂರಿನ ಮೇರೆಗೆ ತಳಕು ಪಿಎಸ್ ಐ ಲೋಕೇಶ್ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
About The Author
Discover more from JANADHWANI NEWS
Subscribe to get the latest posts sent to your email.