ಚಳ್ಳಕೆರೆ ಅ.31
ಹದಿನೈದು ವರ್ಷ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು, ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ನಗರಸಭೆ ಸದಸ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಪ್ಪ ಹೇಳಿದರು.
ನಗರದ ಶಾಸಕರ ಭವನದಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯ 40 ನೇ ಪುಣ್ಯಸ್ಮರಣೆ ದಿನಾಚರಣೆಯಲ್ಲಿ ಭಾವ ಚಿತ್ರಕ್ಕೆ ಪುಸ್ಪನಮನ ಸಲ್ಲಿಸಿ ಮಾತನಾಡಿದರು.
ದೇಶದೊಳಗಿನ ಪ್ರತಿರೋಧಗಳನ್ನು ಮೆಟ್ಟಿ ನಿಂತು ಜಾಗತಿಕ ಮಟ್ಟದಲ್ಲಿ ಭಾರತವನ್ನು ಉತ್ತುಂಗ ಸ್ಥಾನಕ್ಕೇರಿಸಿದರು. ಉಕ್ಕಿನ ಮಹಿಳೆಯಾಗಿದ್ದರು ಅಧಿಕಾರವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಇಂದಿಗೂ ಜನರಮನದಲ್ಲಿ ಉಳಿದ್ದಾರೆ ಎಂದು ತಿಳಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಬಾಯಿ ಮಾತನಾಡಿ ಬಡವರ ಪರವಾದ ಅನೇಕ ಯೋಜನೆಗಳನ್ನು ಇಂದಿರಾ ಗಾಂಧಿ ತಮ್ಮ ಆಡಳಿತಾವಧಿಯಲ್ಲಿ ಜಾರಿಗೆ ತಂದರು. ಹಾಗಾಗಿಯೇ, ಕಾಂಗ್ರೆಸ್ ಪಕ್ಷವನ್ನು ಇಂದಿಗೂ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಜನರು ನೆನಪಿಸಿಕೊಳ್ಳುತ್ತಾರೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜೈತುನ್ ಬೀ, ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ, ನಗರಸಭೆ ನಾಮ ನಿರ್ದೇಶನ ಸದಸ್ಯರಾದ ಅನ್ವರ್ ಮಾಸ್ಟರ್, ಬಡಗಿ ಪಾಪಣ್ಣ, ಪಿ.ತಿಪ್ಪೇಸ್ವಾಮಿ,ನಿಂಗಮ್ಮ, ಕವಿತಾ, ಮಂಗಳಮ್ಮ, ನಾಗಲಿಂಗಮ್ಮ, ರಾಜಕ್ಕ, ಅನಿತಾ, ಪಾರ್ವತಮ್ಮ, ಮಂಜುಳಮ್ಮ, ಯಶೋಧಮ್ಮ, ಮೃಂದಾಮಣಿ ಇತರರಿದ್ದರು.



About The Author
Discover more from JANADHWANI NEWS
Subscribe to get the latest posts sent to your email.