ಚಳ್ಳಕೆರೆ ಜು.31
ಯೂರಿಯಾ ರಸಗೊಬ್ಬರ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್ ಸೂಚನೆ ಮೇರೆಗೆ ನಗರದ ವಿವಿಧ ಫರ್ಟಿಲೈಸರ್ ಅಂಗಡಿಗಳಿಗೆ ತಹಶೀಲ್ದಾರ್ ರೇಹಾನ್ ಪಾಷ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ಪರಿಶೀಲನೆ ನಡೆಸಿದರು.
ಅಂಗಡಿಗಳ ಗೋದಾಮಿನ ದಾಸ್ತಾನು . ದಾಖಲೆ ಪರಿಶೀಲನೆ ನಡೆಸಿ ಯೂರಿಯ ಗೊಬ್ಬರ ಕೊರತೆಯಿದೆ ಎಂದು ಕೃತಕ ಗೊಬ್ಬರ ಅಭಾವ ಸೃಷ್ಠಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಅಶೋಕ್ ಮಾತನಾಡಿ ಈದಿನ 45 ಟನ್ ಯೂರಿಯ ಗೊಬ್ವರ ಸರಬರಾಜಾಗಿದ್ದು ಬೆಳಗ್ಗೆ ರೈತರಿಗೆ ವಿತರಣೆ ಮಾಡಲಾಗುವುದು.ಯೂರಿಯಾ ಗೊಬ್ಬರ ಅಭಾವವಿದ್ದು ಅದರ ಬದಲಾಗಿ ಯೂರಿಯಾ ಲಕ್ವಿಡ್ ಖರೀದಿಸಿ ಬೆಳೆಗಳಿಗೆ ಸಿಂಪರಣೆ ಮಾಡಿದರೆ ಬೆಳೆಗಳು ಹೆಚ್ಚು ಇಳುವರಿ ಬರುತ್ತದೆ .
ರಸಗೊಬ್ಬರ ರೈತರಿಗೆ ವಿತರಣೆ ಮಾಡುವಾಗ ರೈತರ ಆಧಾರ್‌ಕಾರ್ಡ್, ಪಹಣಿ ಪಡೆಯಬೇಕು. ಯೂರಿಯಾ ಮತ್ತು ಡಿಎಪಿ ರಸಗೊಬ್ಬರವನ್ನು ಎಂಆರ್‌ಪಿ ಬೆಲೆಗೆ ಮಾರಾಟ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಠಾಣಾಧಿಕಾರಿ ಕೆ.ಕುಮಾರ್. ಕಂದಾಯ ನಿರೀಕ್ಷ ತಿಪ್ಪೇಸ್ವಾಮಿ.ಗ್ರಾಮಲೆಕ್ಕಾದಿಕಾರಿ ಪ್ರಕಾಶ್ ಇತರರಿದ್ದರು.











About The Author
Discover more from JANADHWANI NEWS
Subscribe to get the latest posts sent to your email.