
ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಕೆಎಂಎಸ್ ಪಿ ಪಿ
ಜೆ ಎಸ್ ಡಬ್ಲ್ಯೂ ಗ್ರಾಮಾಲಯ ಸಂಸ್ಥೆ ಶೌಚಾಲಯ ಕೊಠಡಿಗಳನ್ನು ನಿರ್ಮಿಸಿ ಕೊಟ್ಟಿರುವುದು ಶ್ಲಾಘನೀಯ ಎಂದು ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಬಿ ಕಾಟಯ್ಯ ಹೇಳಿದರು.
ಗುರುವಾರ ಹೋಬಳಿಯ ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಪ್ರೌಢಶಾಲೆಯ ನೂತನ ಶೌಚಾಲಯ ಕೊಠಡಿಗಳನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ ಅವರು ಕೆ ಎಂ ಎಸ್ ಪಿ ಪಿ ,ಐ ಎಲ್ ಪಿ ,ಜೆ ಎಸ್ ಡಬ್ಲ್ಯೂ ,ಗ್ರಾಮಾಲಯ ಸಂಸ್ಥೆಯು ರಾಜ್ಯದ ವಿವಿಧ ಹಳ್ಳಿಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಇಂತಹ ಶೌಚಾಲಯಗಳನ್ನು ನಿರ್ಮಿಸಿ ಕೊಟ್ಟಿರುವುದು ತುಂಬಾ ಹೆಮ್ಮೆಯ ಸಂಗತಿ ವಿದ್ಯಾರ್ಥಿಗಳು ಶೌಚಾಲಯಗಳನ್ನು ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಬಳಕೆ ಮಾಡಿಕೊಳ್ಳಬೇಕು ಎಂದರು.
ಮುಖ್ಯ ಶಿಕ್ಷಕ ಎಚ್ ಡಿ ವೆಂಕಟೇಶ್ ಮಾತನಾಡಿದರು ಗ್ರಾಮಾಲಯ ಸಂಸ್ಥೆ ನಮ್ಮ ಶಾಲೆಯನ್ನು ಗುರುತಿಸಿ ಶೌಚಾಲಯ ಕೊಠಡಿಗಳನ್ನು ನಿರ್ಮಿಸಿ ಕೊಟ್ಟಿರುವುದು ಹೆಮ್ಮೆಯ ಸಂಗತಿ ಎಂದರು
ಇದೇ ಸಂದರ್ಭದಲ್ಲಿ ಗ್ರಾಮಾಲಯ ಪದ್ಮಶ್ರೀ ಎಸ್ ಧಾಮೋದರನ್, ಎಳೆ ಗೋವನ್, ಎ. ಪಾಪು, ಆಂಥೋನಿ ಜಯಪಾಲ್, ಪಲಣಿ ವೇಲನ್, ಪ್ರಭು ಮಂಜುನಾಥ್ ಶಶಿಕುಮಾರ್, ಕೆ ಎಂ ಎಸ್ ಪಿ ಪಿ ಸದಸ್ಯರಾದ ಮರಿಪಾಲಯ್ಯ, ಚಂದನ್ ,ಕೀರ್ತಿರಾಜ್ , ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅರುಣ್ ಕುಮಾರ್, ಶಿಕ್ಷಕರಾದ ರಂಗನಾಥ್ ನಾಗಭೂಷಣ್ ಜಗದೀಶ್ ವೀರಭದ್ರಪ್ಪ ಓಂಕಾರಪ್ಪ, ಶಿವಕುಮಾರ್ ಅತಿಥಿ ಶಿಕ್ಷಕಿಯರಾದ ರಂಜಿತ, ರಮ್ಯಾ, ಸೇರಿದಂತೆ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.