ಚಳ್ಳಕೆರೆ ಜು.31.ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ತಮ್ಮೂರಲ್ಲೇ ಇದ್ದು ಹೆಚ್ಚಿನ ವ್ಯಾಸಂಗ ಮಾಡಲು ಇದು ಅನುಕೂಲವಾಗಲಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.





ತಾಲೂಕಿನ ಸಾಣಿಕೆರೆ ಗ್ರಾಮದ ವಸಿಷ್ಟ ಶೈಕ್ಷಣಿಕ ಅಭಿವೃದ್ಧಿ ಅಕಾಡೆಮಿಯ ವೇದ ಪದವಿ ಕಾಲೇಜು ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ವಿದ್ಯಾರ್ಥಿಗಳಿಗೆಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಇದು ಅನುಕೂಲವಾಗಿದ್ದು ಹೆಚ್ಚಿನ ವ್ಯಾಸಂಗಕ್ಕೆ ದೂರದ ನಗರಕ್ಕೆ ಹೋಗುವ ಪ್ರಸಂಗ ತಪ್ಪಲಿದೆ ಎಂದರು.
ವೇದ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಟಿ. ರವೀಂದ್ರ ಮಾತನಾಡಿ ಮನುಷ್ಯ ಹುಟ್ಟಿದ ಮೇಲೆ ಏನಾದರೂ ಸಾಧಿಸುವ ಛಲ ಇರಬೇಕು, ದೊಡ್ಡದಾಗಿ ಕನಸು ಕಂಡರೆ ದೊಡ್ಡವನಾಗುತ್ತಾನೆ ಸಣ್ಣದಾಗಿ ಕನಸು ಕಂಡರೆ ಸಣ್ಣವನಾಗುತ್ತನೆ ಎಂಬ ಹಿರಿಯರ ಮಾತಿನಂತೆ ನಾನು ಶಿಕ್ಷಣ ತಜ್ಞ ಅಲ್ಲ, ಆದರೆ ಶಿಕ್ಷಣ ಪ್ರೇಮಿ ಎಂದು ಹೇಳಿದರು.
ಗ್ರಾಮದಲ್ಲಿ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಮಹಾದಾಸೆಯಿಂದ ಶಿಕ್ಷಣ ಸಂಸ್ಥೆ ಪ್ರಾರಂಬಿಸಿದೆ, ಹಿರಿಯರ ಮಾತಿನಂತೆ ನೋವು ನಲಿವು, ಕಷ್ಟ, ದುಃಖಗಳನ್ನು, ಎಲ್ಲವನ್ನು ಸ್ವೀಕರಿಸಿದ ನಂತರ ಸನ್ಮಾನ ನಿಶ್ಚಿತ ಎಂಬಂತೆ ಸನ್ಮಾನಿತನಾಗಿರುವೆ, ಬಯಲು ಸೀಮೆಯ ಮಕ್ಕಳಿಗೆ ವಿಧ್ಯಾರ್ಜನೆ ನೀಡುವ ಮಹದಾಸೆಯಿಂದ ಇಂತಹ ಬಯಲುಸುಮೆ ನಾಡಿನಲ್ಲಿ ಶಿಕ್ಷಣ ಸಂಸ್ಥೆ ತೆರೆದು ಸಾವಿರಾರು ಮಕ್ಕಳಿಗೆ ಇಂದು ಶಿಕ್ಷಣ ಸಂಸ್ಥೆ ಬೆಳಕಾಗಿದೆ, ಪ್ರಸ್ತುತ ಹತ್ತನೆ ವರ್ಷದ ಹಾದಿಯಲಿದ್ದೆವೆ, ಅದರಂತೆ ಮುಂದಿನ ದಿನಗಳಲ್ಲಿ ದಶಮಾನೋತ್ಸವ ಸಂಭ್ರಮ ಆಚರಣೆಗೆ ಅಣಿಯಾಗುತಿದೆ ವೇದ ಸಂಸ್ಥೆ ಎಂದರು.
ಬೆಳಗಾವಿಯ
ವಿಶ್ರಾಂತಿ ಕುಲಪತಿಗಳಾದ ಪ್ರೋ. ಎಚ್ .ಮಹೇಶಪ್ಪ ಮಾತನಾಡಿ, ಶಿಕ್ಷಣ ಎಂಬುದು ಮಹತ್ವಪೂರ್ಣವಾದದ್ದು ಅದರಂತೆ ಇಂದಿನ ಆಧುನಿಕ ಜಗತ್ತಿಗೆ ತಕ್ಕಂತೆ ಶಿಕ್ಷಣ ಪರಿಪೂರ್ಣವಾಗ ಬೇಕಾಗಿದೆ.
ಪ್ರಾಥಮಿಕ ಅಂತದಲ್ಲೇ ಗುಣಮಟ್ಟದ ಶಿಕ್ಷಣ ನೀಡಿದ್ದ ಆದರೆ ಉನ್ನತ ವ್ಯಾಸಂಗಕ್ಕೆ ಅನುಕೂಲಕರವಾಗಲಿದೆ ಆದ್ದರಿಂದ ವೇದ ಇಂಥ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳು ಈಗಿನ ಪದವಿ ತರಗತಿಗಳಲ್ಲಿ ಉತ್ತಮ ಕಲಿಕೆಗೆ ಒಳಪಟ್ಟರೆ ಜೀವನದಲ್ಲಿ ಉದ್ಯೋಗಗಳನ್ನು ಗಿಟಿಸಿಕೊಳ್ಳಬಹುದು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ ಟಿ ಕುಮಾರಸ್ವಾಮಿ ಮಾತನಾಡಿ, ಕಳೆದ ಹತ್ತು ವರ್ಷಗಳ ಹಿಂದೆ ಬಯಲು ಸೀಮೆಯಂತೆ ಇರುವ ಈ ಜಾಗದಲ್ಲಿ ಕೇವಲ 50 ರಿಂದ 100 ಮಕ್ಕಳ ಪ್ರಾರಂಭಿಕ ಹಂತವಾಗಿ ಪ್ರಾಥಮಿಕ ಶಿಕ್ಷಣ ಪ್ರೌಢ ಶಿಕ್ಷಣ ಹಾಗೂ ಕಾಲೇಜು ತೆರೆದು ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾಧನ ಮಾಡಿರುವುದು ಸಂತಸ ತಂದಿದೆ, ಇಂದು ಸಾವಿರಾರು ಮಕ್ಕಳು ಕಲಿಕೆಯಲ್ಲಿ ತೊಡಗಿರುವುದು ಗುಣಮಟ್ಟದ ಶಿಕ್ಷಣಕ್ಕೆ ಮಹತ್ವ ನೀಡಲಾಗಿದೆ ಎಂದರು.
ವಕೀಲರ ಸಂಘದ ಕಾನೂನು ಸಲಹೆಗಾರರಾದ ಜಿ.ಎಂ ಆನಂದ್ ಮಾತನಾಡಿ, ಇಂದು ನೂತನವಾಗಿ ಪ್ರಾರಂಭವಾದ ಬಿಸಿಎ, ಬಿಕಾಂ ಪದವಿ ತರಗತಿಗಳು, ವಿದ್ಯಾರ್ಥಿ ಜೀವನ ಉದ್ಯೋಗದಲ್ಲಿ ಇರುವಂತೆ ಮಾಡುತ್ತದೆ, ಉತ್ತಮ ಕೋರ್ಸ್ ಗಳನ್ನು ಆಯ್ಕೆಮಾಡಿಕೊಂಡು ಓದಿದರೆ ನಿರುದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಬಹುದು, ಇಂದಿನ ಆಧುನಿಕ ಯುಗದಲ್ಲಿ ಉದ್ಯೋಗ ಸಿಗುವುದು ಕಷ್ಟ, ಸ್ಥಳೀಯವಾಗಿ ನಿರುದ್ಯೋಗವು ಇದ್ದರೆ, ಉತ್ತರ ಭಾರತ, ವೆಸ್ಟ್ ಬೆಂಗಳ್ , ಮೂಲದವರು ಉದ್ಯೋಗ ಮಾಡುತ್ತಾರೆ, ಆದ್ದರಿಂದ ಬ್ಯಾಂಕ್ ಗೆ ಪರೀಕ್ಷೆ ಮೂಲಕ ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಳ್ಳಬಹುದು,
ವಸಿಷ್ಠ ಸಂಸ್ಥೆ, ಕೇವಲ ಸಂಸ್ಥೆಯಾಗದೆ ವಿಶಿಷ್ಠಿ ಸಂಸ್ಥೆಯಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ವಿಶ್ರಾಂತಿ ಕುಲಪತಿಗಳಾದ ಪ್ರೊ. ಮಹೇಶಪ್ಪ , ನಿವೃತ್ತ ಪ್ರಾಂಶುಪಾಲರಾದ ವಿ ವೀರಣ್ಣ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಿವಸ್ವಾಮಿ, ಎಚ್ ಚಂದ್ರಣ್ಣ, ಕೆ ಆರ್ ಪ್ರಕಾಶ್, ಡಾ.ಕೆ ಪ್ರಸಾದ್, ನಿವೃತ್ತ ಪ್ರಾಂಶುಪಾಲರಾದ ರವೀಶ್, ಮಂಜ ನಾಯಕ, ರಾಜಶೇಖರಪ್ಪ ಲೀಲಾವತಿ, ಶಶಿಧರ್, ಶಂಭುಲಿಂಗಪ್ಪ ಮಲ್ಲೇಶಪ್ಪ,ದಿನೇಶ್ ರೆಡ್ಡಿ ,ತಿಪ್ಪೇರುದ್ರಪ್ಪ , ರೇವಂತ್ ಭಂಡಾರಿ, ರಾಜಶೇಖರ್, ಬಾಬುರೆಡ್ಡಿ ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.