September 15, 2025
1753965020795.jpg


ಹಿರಿಯೂರು:
ತಾಲ್ಲೂಕಿನ ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು 1989ರಲ್ಲಿ ಸ್ಥಾಪನೆಯಾಗಿ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮೂಲಕ 4ಲಕ್ಷ ಲಾಭ ಗಳಿಸಿರುವುದಕ್ಕೆ ಶಿಮುಲ್ ನಿರ್ದೇಶಕರಾದ ಬಿ.ಸಿ. ಸಂಜೀವಮೂರ್ತಿ ಪ್ರಶಂಸೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಸಾಮಾನ್ಯ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಲಾಭ ಗಳಿಸುವುದು ಕಡಿಮೆ ಅಂತಹುದರಲ್ಲಿ ಈ ಸಂಘವು ಲಾಭಾಂಶ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂಬುದಾಗಿ ಅವರು ಹೇಳಿದರು.
ಇಂದಿನ ದಿನಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಲಾಭ ಗಳಿಸುವುದು ಕಡಿಮೆ.ಅಂತಹುದರಲ್ಲಿ ಈ ಸಂಘವು ಲಾಭಾಂಶ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿದಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂಬುದಾಗಿ ಅವರು ಹೇಳಿದರು.
ತಾಲ್ಲೂಕಿನಲ್ಲಿ ಹಾಲು ಉತ್ಪಾದನೆ ಸುಧಾರಣೆಯಾಗಿದ್ದು, ಜಿಲ್ಲೆಯಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿದೆ. ಈ ಸಂಘಕ್ಕೆ ಮುಂದಿನ ಮಾರ್ಚ್ ತಿಂಗಳಲ್ಲಿ ಸಂಘಕ್ಕೆ ಚಾಪ್ ಕಟ್ಟರ್ ಹಾಗೂ ಮಿಲ್ಕ್ ಮಿಶನ್ ಕೊಡಲು ವ್ಯವಸ್ಥೆ ಮಾಡಲಾಗುವುದು.
ಕೆ.ಎಂ.ಎಫ್. ಕಡೆಯಿಂದ ಸಿಗುವ ಬೂಸಾವನ್ನು ಹಸುಗಳಿಗೆ ಬಳಸಿಕೊಳ್ಳಿ. ಒಕ್ಕೂಟದಿಂದ ಅನುಕೂಲವಾಗುವ ಯೋಜನೆಗಳನ್ನು ಉತ್ಪಾದಕರಿಗೆ ನೀಡಲಾಗುವುದು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.
ಹೈನುಗಾರಿಕೆ ಹೆಚ್ಚಿಸಲು ಕೃಷಿ ಇಲಾಖೆ ಸಹಯೋಗದೊಂದಿಗೆ ಪಹಣಿ ಹೊಂದಿರುವ ರೈತರಿಗೆ 20 ಸಾವಿರ ಸಬ್ಸಿಡಿಯೊಂದಿಗೆ ಹಸುಗಳನ್ನು ಕೊಡಲಾಗುವುದು. ಇದರಿಂದ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ. ಇಲ್ಲಿನ ಉತ್ಪಾದಕರಿಗೆ ಏನೇ ಸಮಸ್ಯೆಗಳಿದ್ದರೆ ಆಡಳಿತ ಮಂಡಳಿಯ ಗಮನಕ್ಕೆ ತನ್ನಿ. ನಾವು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂಬುದಾಗಿ ಅವರು ಭರವಸೆ ನೀಡಿದರು.
ಸಂಘದ ಅಧ್ಯಕ್ಷರಾದ ಬಸವರಾಜ್ ಅವರು ಮಾತನಾಡಿ ನಮ್ಮ ಗ್ರಾಮದ ಹಾಲಿನ ಡೈರಿ ಕಿರಿದಾಗಿದೆ. ಪ್ರತಿದಿನ 1600 ಲೀಟರ್ ಹಾಲಿನ ಉತ್ಪಾದನೆಯಾಗುತ್ತಿದೆ. ಸಾಮಾಗ್ರಿಗಳನ್ನು ಶೇಖರಣೆ ಮಾಡಲು ಸ್ಥಳಾವಕಾಶ ಕಡಿಮೆ ಇದೆ. 4ಕುಂಟೆ ನಿವೇಶನವಿದ್ದು, ಅಲ್ಲಿಗೆ ಡೈರಿ ನಿರ್ಮಾಣ ಮಾಡಿ, ಪ್ರತ್ಯೇಕ ಬಿ.ಎಂ.ಸಿ. ಕೇಂದ್ರ ತೆರೆಯಲು ಅವಕಾಶ ಮಾಡಿಕೊಡಿ ಎಂಬುದಾಗಿ ಅವರು ಮನವಿ ಮಾಡಿದರು.
ಅಧ್ಯಕ್ಷರ ಮನವಿಗೆ ಸ್ಥಳದಲ್ಲೇ ಸ್ಪಂದಿಸಿದ ನಿರ್ದೇಶಕರಾದ ಬಿ.ಸಿ.ಸಂಜೀವಮೂರ್ತಿ ಸಂಘದ ಹೆಸರಿಗೆ ಪಹಣಿ ಹಾಗೂ ಈ ಸ್ವತ್ತು, ದಾಖಲೆಗಳನ್ನು ಸಿದ್ಧತೆ ಮಾಡಿಸಿಕೊಳ್ಳಿ. ಶಿಮುಲ್ ಆಡಳಿತ ಮಂಡಳಿಯ ಸಭೆಯಲ್ಲಿ ಗಮನಕ್ಕೆ ತಂದು ನಿಮ್ಮ ಬೇಡಿಕೆ ಕೂಡಲೇ ಈಡೇರಿಸಲಾಗುವುದು ಎಂಬುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡಿದ ಮೂವರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ಕೃಷ್ಣಕುಮಾರ್, ಪಶುವೈದ್ಯ ಡಾ.ದೀರಾಜ್ ಪ್ರಕಾಶ್ ಜಿ, ಸಂಘದ ಉಪಾಧ್ಯಕ್ಷರಾದ ಹರೀಶ್ ಕುಮಾರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಾದ ಹರ್ಷ, ಸಂಘದ ನಿರ್ದೇಶಕರಾದ ಶಿವಮ್ಮ, ಚಂದ್ರಕಲಾ, ಬಿ.ಎಸ್. ಶಿವಕುಮಾರ್, ನರಂಸಿಂಹಮೂರ್ತಿ, ತಿಪ್ಪೇರುದ್ರಪ್ಪ, ಪಿ. ಶಿವಮೂರ್ತಿ, ಗುಂಡಪ್ಪ, ರಂಗಮ್ಮ, ಕಾರ್ಯದರ್ಶಿ ಗೀತಾ, ಹಾಲು ಪರೀಕ್ಷಕ ಹುಮಾರ್, ಬಿನ್ ಕತಾಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading