
ವರದಿ: ಕೆ.ಟಿ.ಮೋಹನ್ ಕುಮಾರ್
ಮೈಸೂರು: ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಶ್ರೀ ಭಗೀರಥ ಉಪ್ಪಾರರ ಸಂಘದ ವತಿಯಿಂದ ಶ್ರೀ ಭಗೀರಥ ಮಹರ್ಷಿಗಳ ಜಯಂತೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಧಾರ್ಮಿಕ ವಿಧಿ ವಿಧಾನಗಳಂತೆ ಆಚರಣೆ ಮಾಡಲಾಯಿತು.





ಶ್ರೀ ಭಗೀರಥ ಮಹರ್ಷಿ ಅವರ ಭಾವಚಿತ್ರವನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ಹೂವಿನಿಂದ ಅಲಂಕಾರ ಮಾಡಿ ವಿವಿಧ ಕಲಾತಂಡಗಳೊಂದಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡುವ ಮೂಲಕ ಶ್ರೀ ಭಗೀರಥ ಮಹರ್ಷಿ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಮೆರವಣಿಗೆ ಯುದ್ಧಕ್ಕೂ ವಿವಿಧ ವಾದ್ಯ ಪ್ರಕಾರಗಳ ಸದ್ದಿಗೆ ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ನೃತ್ಯ ಮಾಡುತ್ತಾ ಹೆಜ್ಜೆ ಹಾಕಿದ್ದು ಮೆರವಣಿಗೆಗೆ ರಂಗು ತಂದಿತು.
ಈ ಸಂದರ್ಭದಲ್ಲಿ ಸಂಘದ ನೂತನ ನಾಮಫಲಕವನ್ನು ಅನಾವರಣಗೊಳಿಸಿ ಗಣ್ಯರುಗಳನ್ನು ಸನ್ಮಾನಿಸಲಾಯಿತು.
ಜಯಂತಿಯ ಅಂಗವಾಗಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಹಳ್ಳಿ ಸೋಮಶೇಖರ್, ಗ್ರಾ.ಪಂ. ಉಪಾಧ್ಯಕ್ಷ ಕೆ.ಎಸ್.ಕೃಷ್ಣೇಗೌಡ, ಮಾಜಿ ಸದಸ್ಯರಾದ
ಎಂ.ಕೃಷ್ಣೆಗೌಡ, ಜೆಸಿಬಿ ಬಲರಾಮ್, ನಿವೃತ್ತ ಪೊಲೀಸ್ ಅಧಿಕಾರಿ ಬಸವಣ್ಣ, ಕೃಷಿಕ ಸಮಾಜದ ನಿರ್ದೇಶಕ ಪುಟ್ಟೇಗೌಡ, ವಿ ಎಸ್ ಎಸ್ ಬಿ ಎನ್ ನಿರ್ದೇಶಕ ಲೋಕೇಶ್, ಮುಖಂಡರುಗಳಾದ ರಾಜೇಗೌಡ, ಸ್ವಾಮಿನಾಯ್ಕ, ಮಹದೇವ, ಸಿ.ಸ್ವಾಮಿಗೌಡ, ಕೃಷ್ಣೇಗೌಡ, ಜವರಪ್ಪ, ನಾಗರಾಜು, ಶ್ರೀ ಭಗೀರಥ ಉಪ್ಪಾರರ ಸಂಘದ ಎಂ.ಶಿವಣ್ಣ, ನಾಗರಾಜ, ಕೃಷ್ಣೆಗೌಡ, ರಂಗೇಗೌಡ, ಕೆ.ಟಿ.ಶಿವಣ್ಣ, ದೇವೇಗೌಡ, ಕಾಳೇಗೌಡ, ಅಜ್ಜಪ್ಪ, ರಂಗಸ್ವಾಮಿ, ಸ್ವಾಮಿಗೌಡ, ಕೆ.ಆರ್.ಸಚಿನ್, ಚಿಕ್ಕಯ್ಯ, ಚಂದ್ರು, ತಮ್ಮಯ್ಯ, ಮೈಲಾರಿ, ಕೆ.ಎ.ಸ್ವಾಮಿ, ಕೆ.ಡಿ.ರಂಗೇಗೌಡ, ತಮ್ಮೇಗೌಡ, ಅಶೋಕ್, ಅಭಿ, ರವಿ, ಮಧು, ರಾಮ, ಸಚಿನ್, ಪ್ರಜ್ವಲ್, ಪವನ್, ದೀಪು, ಹರ್ಷ, ಕಿಶೋರ್, ಸಾಗರ್, ದರ್ಶನ್, ಸೂರಿ, ಲಕ್ಷ್ಮಿ, ಗಾಯಿತ್ರಿ, ಜಯಮ್ಮ, ರತ್ನ, ಸೌಮ್ಯ, ಶಿವಮ್ಮ, ಶೋಭಾ, ಕವಿತಾ, ರೂಪ, ದೇವಮ್ಮ, ಜಯಕ್ಕ, ಲಕ್ಷ್ಮಕ್ಕ, ರತ್ನಮ್ಮ, ಸುಪ್ರಿತಾ, ಮಮತ, ಸೋನು, ಲಕ್ಷ್ಮಮ್ಮ, ಸುಧಾ, ಮೀನಾಕ್ಷಿ, ಯುವಕರು, ಮಹಿಳೆಯರು, ಉಪ್ಪಾರ ಸಮಾಜದವರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.


About The Author
Discover more from JANADHWANI NEWS
Subscribe to get the latest posts sent to your email.