
ಚಳ್ಳಕೆರೆ ಮೇ.31
ಜನರ ಪ್ರೀತಿ, ವಿಶ್ವಾಸಗಳಿಸುವ ಜತಗೆ ಸೇವಾ ಅವಧಿಯಲ್ಲಿ ಯಾವುದಕ್ಕೂ ಬೇಸರ ಪಟ್ಟುಕೊಳ್ಳದೆ ತಾಳ್ಮೆ ಹಾಗೂ ಶ್ರದ್ಧೆಯಿಂದ ಕೆಲಸ ನಿರ್ವಹಿಸಿದ್ದಾರೆ ಅವರ ಸೇವೆ ಅನನ್ಯವಾದುದು ಎಂದು ಡಾ.ವೆಂಕಟೇಶ್ ಹೇಳಿದರು.
ನಗರದ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 27 ವರ್ಷ ಸುದೀರ್ಘ ಸೇವೆ ಸಲ್ಲಿ ವಯೋ ವಿವೃತ್ತಿಹೊಂದಿದ ಡಿ ಗ್ರೂಪ್ ನೌಕರ ಗಂಗಾಧರ್ ಇವರಿಗೆ ಸನ್ಮಾನಿಸಿ ಗೌರವಿಸಿ ಬೀಳ್ಕೊಡಿಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಅಧಿಕಾರಿ ಹನುಮಂತರಾಯ ಮಾತನಾಡಿ ಗಂಗಾಧರ ನ ಮನಸ್ಸು ಶುಚ್ಚಿ ಅವರು ಹಾಕುವ ಬಟ್ಟೆಯೂ ಬಿಳಿ ಅದೇ ರೀತಿ ಕರ್ಯವ್ಯಕ್ಕೆ ನಿಗಧಿತ ಸಮಕ್ಕಿಂತ ಮುಂಚಿತವಾಗಿ ಸೈಕಲ್ ಮೇಲೆ ಬರುತ್ತಿದ್ದರು. ಶವಗಾರದ ಕರ್ತವ್ಯದ ವೇಳೆ ಶವಕ್ಕೂ ಸಹ ಗುಣಮಟ್ಟದ ಬಟ್ಟೆ ಖರೀದಿಸಿ ಶವಪ್ಯಾಕ್ ಮಾಡುತ್ತಿದ್ದ ಕಚೇರಿಗೆ ರಜೆ ಹಾಕದೆ ಕರ್ತವ್ಯ ಮಾಡುತ್ತಿದ್ದ ಕೇವಲ ಆಸ್ಪತ್ರೆಯಲ್ಲ ಎಲ್ಲಾ ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಬಳಿಯೂ ಚನ್ನಾಗಿದ್ದು ಯಾವುದೇ ಕೆಲಸ ವಿಳಂಭವಾಗದಂತೆ ಮಾಡುತ್ತಿದ್ದ ಸರಕಾರಿ ನೌಕರರಿಗೆ ನಿವೃತ್ತಿ ಸಹಜ ಕರ್ತವ್ಯದ ವೇಳೆ ನಾವು ಮಾಡಿದ ಸೇವೆ ಶಾಶ್ವತ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಶಿವಕುನಾರ್. ಡಾ.ಆದಿಮನಿ.ಡಾ ಮಂಜಪ್ಪ.ಡಾ.ಜಯಲಕ್ಷ್ಮಿ.ಡಾ.ಸಾಯಿಲಕ್ಷ್ಮಿ. ಡಾ.ಪ್ರಜ್ವಕ್ ಧನ್ಯ ಸೇರಿದಂತೆ ಇತರರಿದ್ದರು.








About The Author
Discover more from JANADHWANI NEWS
Subscribe to get the latest posts sent to your email.