January 30, 2026
IMG-20250131-WA0233.jpg


ಚಿತ್ರದುರ್ಗಜ.31:
ನಮ್ಮ ದೌರ್ಬಲ್ಯಗಳ ನಿವಾರಣೆಗಾಗಿ ಅಂಬೇಡ್ಕರ್ ಓದು ಅವಶ್ಯಕವಾಗಿದೆ. ಅಂಬೇಡ್ಕರ್ ಅಂದರೆ ಶಕ್ತಿ, ಮಾನವತ್ವ, ಮಾನವೀಯತೆ ಹಾಗೂ ಎಲ್ಲಕ್ಕಿಂತಲೂ ಮುಖ್ಯವಾಗಿ ಮನುಷ್ಯ ಪ್ರೀತಿ ಎಂದು ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಕುವೆಂಪು ಭಾಷಾ ಭಾರತಿ ಸದಸ್ಯ ಪ್ರೊ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಡಾ.ಬಿ.ಆರ್.ಅಂಬೇಡ್ಕರ್ ಓದು” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅಲೋಚನೆಗಳು, ಚಿಂತನೆಗಳನ್ನು ಕೊಂಡ್ಯೊಯುವ ದೊಡ್ಡ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಅಂಬೇಡ್ಕರ್ ಯಾವುದೇ ಒಂದು ಜಾತಿ, ಧರ್ಮ, ಸಮುದಾಯಕ್ಕೆ ಸೀಮಿತರಾದವರು ಅಲ್ಲ. ಅಂಬೇಡ್ಕರ್ ಮಾನವೀಯತೆಗೆ ಸೀಮಿತರಾದವರು ಎಂದು ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಇಡೀ ವಿಶ್ವಕ್ಕೆ ಜ್ಞಾನ, ಬೆಳಕಾಗಿದ್ದು, ನಾವು ಆ ಬೆಳಕನ್ನು ಕಾಣಬೇಕಿದೆ. ಹಾಗಾಗಿ ಅಂಬೇಡ್ಕರ್ ಅವರ ಜ್ಞಾನ ತುಂಬಾ ಮುಖ್ಯ. ನಮ್ಮೊಳಗಿನ ಶಕ್ತಿ ತೋರಿಸುವವರು ಹಾಗೂ ಪ್ರಜ್ಞೆಯನ್ನು ಎಚ್ಚರಗೊಳಿಸುವ ಜಾಗೃತಿ ಅಂಬೇಡ್ಕರ್ ಎಂದರು.
ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಟಿ.ತಿಪ್ಪೇರುದ್ರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಓದು ಎಂಬುವುದು ಒಂದು ಚೇತನ ಹಾಗೂ ಶಕ್ತಿಯನ್ನು ನೀಡುವ ಶಿರೋನಾಮೆಯಾಗಿದೆ. ಅಂಬೇಡ್ಕರ್ ಅವರು ವಿಶ್ವದ ಅನೇಕ ರಾಷ್ಟ್ಟ್ರಗಳಿಗೆ ಭೇಟಿ ನೀಡಿ, ವಿವಿಧ ಸಂವಿಧಾನಗಳನ್ನು ಅಧ್ಯಯನ ಮಾಡುವ ಮೂಲಕ ದೇಶಕ್ಕೆಎ ಉತ್ತಮವಾದ ಸಂವಿಧಾನವನ್ನು ನಮಗೆ ತಂದುಕೊಟ್ಟಿದ್ದಾರೆ ಎಂದು ತಿಳಿಸಿದ ಅವರು, ಈ ದೇಶದಲ್ಲಿ ಅಸಮಾನತೆ, ಅಸಹನೆ, ಕೋಮುವಾದ, ಮನುವಾದ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ಸಹ ಅಂಬೇಡ್ಕರ್ ನಿಲುವು, ಸಿದ್ದಾಂತ ಅಗತ್ಯ ಎಂದು ಹೇಳಿದರು.
ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಾ.ಜೆ.ಮೋಹನ್ ಉಪನ್ಯಾಸ ನೀಡಿ, ನಮಗೆ ಜೀವ ಕೊಟ್ಟವರು ತಾಯಿ-ತಾಯಿಗಳಾದರೆ, ಬದುಕಿಗೆ ಬೆಳಕಾದವರು ಡಾ.ಬಿ.ಆರ್.ಅಂಬೇಡ್ಕರ್ ಎಂಬ ಅರಿವು ಪ್ರತಿಯೊಬ್ಬರಿಗೂ ಇರಬೇಕು ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಜೀವಪರ, ಮನುಷ್ಯಪರವಾದುದು. ಸಂವಿಧಾನವನ್ನು ಸಮಗ್ರವಾಗಿ ಅಧ್ಯಯನ ಮಾಡಿ ನೋಡಿದಾಗ ಎಲ್ಲಿಯೂ ಕೂಡ ಒಂದು ಜಾತಿ, ಧರ್ಮ, ವರ್ಗವನ್ನು ಹೇಳಿಲ್ಲ. ಪ್ರತಿಯೊಬ್ಬರು ಸಹ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದಿಂದ ಬದುಕಬೇಕು ಎಂಬ ಆಶಯವನ್ನು ಸಂವಿಧಾನ ಹೊಂದಿದೆ ಎಂದು ಹೇಳಿದರು.
ವಕೀಲ ಎಂ.ರಮೇಶ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ಮಾತನಾಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಲೀಲಾವತಿ ಅವರು ಸಂವಿಧಾನ ಪೀಠಿಕೆ ಬೋಧಿಸಿದರು.
ಅಂಬೇಡ್ಕರ್ ಓದು ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ, ಪ್ರಬಂಧ, ಆಶುಭಾಷಣ ಹಾಗೂ ಕವನ ವಾಚನ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜು ಐಕ್ಯೂಎಸಿ ಸಂಚಾಲಕರಾದ ಪ್ರೊ.ಆರ್.ತಾರಿಣಿ ಶುಭದಾಯಿನಿ, ಪರೀಕ್ಷಾ ನಿಯಂತ್ರಕ ಡಾ.ಬಿ.ಸುರೇಶ, ಕಾಲೇಜು ಅಧ್ಯಾಪಕರ ಸಂಘ ಕಾರ್ಯದರ್ಶಿ ಡಾ.ಆರ್.ಗಂಗಾಧರ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಆರ್.ಶಿವಪ್ಪ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಗಿರೀಶ್ ನಾಯಕ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶ್ಯಾಮ್ ರಾಜ್ ಸೇರಿದಂತೆ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading