ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮದ ಹೊರವಲಯದ ಬಿ.ಸೀತರಾಮಶಾಸ್ರ್ತಿ ಪ್ರೌಡಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಶಾರದ ಮಂದರದ ಸಭಾಗಣದಲ್ಲಿ ಕ್ರೀಡೆ,ವಿಜೇತರಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಶಾರದ ಪೂಜೆ,ಮತ್ತು ವಿದ್ಯಾರ್ಥಿ ಸಂಘದ ವಾರ್ಷಿಕೊತ್ಸವ ಕಾರ್ಯಕ್ರಮದಲ್ಲಿ ಉದ್ಘಾಟನೆನ ನೆರವೇರಿಸಿ ಮಾತನಾಡಿ. ಶಾಲೆಗಳಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರ ವಿನಯ ಕಲಿಯಬೇಕು, ಇಂತಹ ಸಂಸ್ಕಾರ ಈ ಶಾಲೆಯಲ್ಲಿ ಕಲಿಸುತ್ತದ್ದು ಅದೆಷ್ಟೋ ಬಡ ವಿದ್ಯಾರ್ಥಿಗಳು ಪಾಲಿಗೆ ಈ ಶಾಲೆ ಬೆಳಕಾಗಿ ದಾರಿದೀಪವಾಗಿದೆ.




ಕೃಷ್ಣ ಶಾಸ್ತ್ರಿಗಳು ತಮ್ಮ ಜೀವನವನ್ನೇ ಮುಡುಪಾಗಿಟ್ಟು ಅಕ್ಷರ ದಾಸೋಹಿಗಳಾಗಿದ್ದಾರೆ, ಗ್ರಾಮೀಣ ಭಾಗದ ಮಕ್ಕಳಿಗೆ ಈ ಶಾಲೆ ಗುರುಕುಲ ವಾಗಿದೆ ಇಲ್ಲಿ ಉತ್ತಮ ವಿದ್ಯಾಭ್ಯಾಸ ನೀಡಲಾಗುತ್ತಿದ್ದು,ಜತಗೆ ಊಟ ವಸತಿ ನೀಡುತ್ತಿದ್ದ ವಿದ್ಯಾರ್ಥಿಗಳು ಇದರ ಸದೂಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣ ಕಲಿತು ನಿಮ್ಮ ಭವಿಷ್ಯವನ್ನ ರೂಪಿಸಕೊಳ್ಳಬೇಕು,
ವಿದ್ಯಾರ್ಥಿಗಳು ಅಷ್ಟೇ ಯಾವುದೇ ಮೂಡನಂಬಿಕೆಗಳಿಗೆ ಮಾರುವಾಗದೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಜೊತೆಗೆ ಕ್ರೀಡೆ ಸಾಂಸ್ಕೃತಿ ಕಾರ್ಯಕ್ರಮ ಇಂತಹ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಡಾ ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡಿ, ಪ್ರತಿಯೊಬ್ಬರಿಗೂ ಶಿಕ್ಷಣ ಶಿಕ್ಷಣವೇ ಶಕ್ತಿಯಾಗಿದೆ. ಬರಲು ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ಉಚಿತ ರಾಗದೆ ಇಂತಹ ಶಾಲೆಗಳಲ್ಲಿ ಸಿಗುವಂತಹ ಉತ್ತಮ ಶಿಕ್ಷಣವನ್ನು ಪಡೆದು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕಿದೆ. ಶಾಲೆ ಬಡ ಮಕ್ಕಳನ್ನು ಅಧಿಕಾರಿಗಳನ್ನಾಗಿ ಮಾಡಿದೆ. ಕಲಿತಂತಹ ವಿದ್ಯಾರ್ಥಿಗಳು ಇಂದು ಅಧಿಕಾರಿಗಳಾಗಿದ್ದಾರೆ ಶಿಕ್ಷಕರಾಗಿದ್ದಾರೆ ಮಾಧ್ಯಮ ಕೆಲಸ ಮಾಡುತ್ತಿದ್ದಾರೆ. ಪೋಲಿಸ್ ಇಲಾಖೆಯಲ್ಲಿ ಹಾಗೂ ದೇಶ ಕಾಯುವ ಕಾಯಕದಲ್ಲೂ ಸಹ ಕೆಲಸ ಮಾಡುತ್ತಿದ್ದಾರೆ. ಸಾಹಿತಗಳಾಗಿದ್ದಾರೆ. ಇಂತಹ ಗುರುಕುಲ ದಲ್ಲಿ ಕಲಿತ ನಾನು ಸಹ ಇಂದು ಜಾನಪದ ಪ್ರತಿಷ್ಠಾನದ ಸದಸ್ಯನಾಗಿರುವು ನನಗೆ ಹೆಮ್ಮೆ ತಂದಿದೆ.
ಇವತ್ತು ಶಾಸ್ತ್ರಿಗಳಿಲ್ಲ ಆದರೆ ಅವರು ಬಿಟ್ಟಂತಹ ಕೊಡುಗೆ ಗುರುಕುಲ ಇದು ಸಾವಿರಾರು ಬಡ ಮಕ್ಕಳ ಬಾಳಿಗೆ ಬೆಳಕಾಗಿದೆ ಕಾರ್ಯನಿರ್ವಹಿಸುತ್ತಿ ಈ ಶಾಲೆಯಲ್ಲಿ ಕಲಿಕೆಗೆ ಅನುಗುಣವಾಗುವಂತಹ ಉತ್ತಮವಾದ ವಾತಾವರಣವಿದೆ.ಇದರ ಸದುಪಯೋಗ ಈ ಭಾಗದ ಮಕ್ಕಳಿಗಾಗಲಿ ಎಂದರು.
ಹಿರಿಯ ಸಹಾಯಕ ಪ್ರಾಧ್ಯಾಪಕರಾದ ಟಿ.ಗಾಯತ್ರಿ ಮಾತನಾಡಿ,ಇದೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಇದೇ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದಿರುವುದು ನಮ್ಮ ಪುಣ್ಯ ಅನಿಸುತ್ತೆ. ಇದಕ್ಕೆ ಈ ಶಾಲೆಯ ಶಿಸ್ತು ಉತ್ತಮ ಶಿಕ್ಷಣ ನಮ್ಮನ್ನ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ನಾನು ಇವತ್ತು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವುದು ಈ ಶಾಲೆ ನೀಡಿದ ಕೊಡುಗೆಯಾಗಿದೆ. ನೀವು ಸಹ ಇದೇ ರೀತಿಯಾಗಿ ಮುಂದಿನ ದಿನಗಳಲ್ಲಿ ಉತ್ತಮ ಗುರಿ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿ ತೊರೆಕೋಲಮನಹಳ್ಳಿ ಪೀತಾಂಬರಂ ಹಾಗೂ ಶಾರದ ಮಂದಿರ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ.ಕೆ. ರಾಜಣ್ಣ, ಮಾತನಾಡಿದರು. ಈ ಈ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರಾದ ಮಂಜುನಾಥ, ಕಾಲೇಜಿನ ಪ್ರಾಂಶುಪಾಲರಾದ ಆರ್ ಸರೋಜಮ್ಮ, ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ವಿಎಚ್.ವೀರಣ್ಣ, ಉಪನ್ಯಾಸಕರದ ಚನ್ನಕೇಶವ ಅಬ್ದುಲ್ ವಾಯುದ್, ಶಕರಾದ ಗಿರೀಶ್ ,ಸುಹಾಸ್, ಚಿದಾನಂದ. ಶಶಿಕಲಾ. ರಾಘವೇಂದ್ರ ಆಶಾ ಸೇರಿದಂತೆ ಭೋದಕ ಬೋಧಕೇತರ ಸಿಬ್ಬಂದಿ ಶಿಕ್ಷಕರು ಶಿಕ್ಷಕಿಯರು. ವಿದ್ಯಾರ್ಥಿಗಳು ಇದ್ದರು…
About The Author
Discover more from JANADHWANI NEWS
Subscribe to get the latest posts sent to your email.