ಚಳ್ಳಕೆರೆ ಜ.30
ಸರಕಾರಿ ಅಧಿಕಾರಿಯೊಬ್ಬರ ಲಂಚದ ಬಗ್ಗೆ ವಿಳಾಸವಿಲ್ಲದ ವಾರ ಪತ್ರಿಕೆಯ ಹೆಸರಿನ ವ್ಯಕ್ತಿಯೊಬ್ಬರು ಜನಧ್ವನಿ ಡಿಜಿಟಲ್ ಮೀಡಿಯಾ ಕಚೇರಿಗೆ ಶುಕ್ರವಾರ ಪತ್ರವೊಂದು ಬಂದಿದೆ.
ಅನಾಮದೇಯ ಅಂಚೆ ಪತ್ರದ ಲಕೋಟಿ ಮೇಲೆಯೂ ದೂರುದಾರನ ವಿಳಾಸ ಮೊಬೈಲ್ ನಂಬರ್ ಇಲ್ಲದ ಪತ್ರವನ್ನು ಬಿಚ್ಚಿ ನೋಡಿದಾಗ ಸರಕಾರದ ಮುಖ್ಯ ಕಾರ್ಯದರ್ಶಿ ಬೆಂ. ಖಜಾನೆ ಆಯುಕ್ತರು ಬೆಂ. ಶಾಸಕ ಟಿ.ರಘುಮೂರ್ತಿ ಹಾಗೂ ವಾಸುದೇವರಾವ್ ಚಿತ್ರದುರ್ಗ ಲೋಕಾಯುಕ್ತ ಕಚೇರಿಗೆ ದೂರು ನೀಡಿರುವುದು ಕಂಡು ಬಂದಿದೆ.
ಚಳ್ಕಕೆರೆ ಉಪಖಜಾನೆಯಲ್ಲಿನ ಲಂಚಾವತಾರದ ಬಗ್ಗೆ ಕೆಲವು ಬಿಲ್ ಪಾಸ್ ಮಾಡಿರುವ ಟೋಕನ್ ನಂಬರ್ .ಹಾಗೂ ಖಜಾನೆ ಅಧಿಕಾರಿಯ ಮಗನ ಪೋನ್ ಫೇ ಗೆ ಹಣ ಹಾಕಿಸಿಕೊಂಡಿರುವುದು ಸೇರಿದಂತೆ ಲಂಚ ಪಡೆದಿರುವ ಬಗ್ಗೆ ಅನಾಮದೇಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶಿವಣ್ಣ ಎಂಬ ಹೆಸರಿನ ಪತ್ರಕರ್ತರಿಗೆ ಕರೆ.
ಚಳ್ಳಕೆರೆ ಉಪಖಜಾನೆ ಅಧಿಕಾರಿಯ ವಿರುದ್ದ ಶಿವಣ್ಣ.ರಾಜವೀರಮದಕರಿ ನಾಯಕ ವಾರಪತ್ರಿಕೆ ಚಳ್ಳಕೆರೆ ಎಂಬ ವಿಳಾಸವಿರುವ ವ್ಯಕ್ತಿಯೊಬ್ಬರು ಅನಾಮದೇಯಾ ಪತ್ರ ಬರೆದಿರುವುದರಿಂದ ಶಿವಣ್ಣ ಎಂಬ ಹೆಸರಿನ ಎಲ್ಲಾ ಪತ್ರಕರ್ತರಿಗೆ ಜಿಲ್ಲಾ ಖಜಾನೆಯ ಅಧಿಕಾರಿಯೊಬ್ಬರು ದೂರಿನ ಬಗ್ಗೆ ಮಾಹಿತಿಗಾಗಿ ವಿಚಾರಣೆ ನಡೆಸಿದರೂ ಸಹ ರಾಜವೀರ ಮದಕರಿನಾಯಕ ವಾರಪತ್ರಿಕೆಯ ಶಿವಣ್ಣ ಪತ್ತೆಯಾಗದೆ ಇರುವುದು ದೂರಿನ ಬಗ್ಗೆ ತನಿಖೆ ಮಾಡಲು ಪೇಚಿಗೆ ಸಿಲುಕುವಂತೆ ಮಾಡಿದೆ.
ಜನಧ್ವನಿ ಡಿಜಿಟಲ್ ಮೀಡಿಯಾಗೆ ಪತ್ರ
ಚಳ್ಳಕೆರೆ ಉಪಖಾನೆ ವಿರುದ್ದ ವಿಳಾಸ ಮೊಬೈಲ್ ನಂಬರ್ ಇಲ್ಲದೆ ಶಿವಣ್ಣ ಸಂಪಾದಕರು ರಾಜವೀರ ಮದಕರಿ ನಾಯಕ ವಾರಪತ್ರಿಕೆಯ ಇವರೂ ಸಹ ಒಬ್ಬ ಪತ್ರಿಕೆಯ ಸಂಪಾದಕರು ಎಂದು ದೂರು ನೀಡಿದ್ದಾರೆ ಹಾಗೆ ಜನಧ್ವನಿ ಡಿಜಿಟಲ್ ಮೀಡಿಯಾಗೆ ಅಧಿಕಾರಿಯ ಲಂಚಾವತಾರದ ವಿರುದ್ದ ಪತ್ರ ಬರೆಯುವ ಬದಲು ನೇರವಾಗಿ ಅವರ ವಾರ ಪತ್ರಿಕೆಯಲ್ಲೇ ಅವರ ಲಂಚಾವತರಾದ ಬಗ್ಗೆ ಪ್ರಕಟಿಸ ಬಹುದಿತ್ತು. ಒಬ್ಬ ಸಂಪಾದರು ಎಂದು ಬರೆದುಕೊಂಡಿದ್ದಾರೆ ಪೂರ್ಣ ವಿಳಾಸವಾದರೂ ಬರೆಯಬಹುತ್ತಿಲ್ಲವೆ? ದೂರಿನಲ್ಲಿ ಏಕೆ ಅವರ ವಿಳಾಸ ತಿಳಿಸಿಲ್ಲ ? ಜಿಲ್ಲೆಯಲ್ಲಿಯೇ ಶಿವಣ್ಣ ಸಂಪದಾಕರು ರಾಜವೀರ ಮದಕರಿನಾಯಕ ವಾರ ಪತ್ರಿಕೆ ಈ ಹೆಸರಿನ ಪತ್ರಿಕೆ ವಾರ್ತಾ ಇಲಾಖೆಯಲ್ಲೂ ನೋಂದಣೆಯಾಗಿಲ್ಲ? ಎಂಬ ಮಾತುಗಳು ಕೇಳಿ ಬರುತ್ತಿದ್ದು . ಇದು ಅಸಲಿಯೋ ನಕಲಿಯೋ ದೇವರಿಗೆ ಗೊತ್ತು…
ಈ ಅನಾಮದೇಯಾ ಪತ್ರ ಮಾತ್ರ ಅಧಿಕಾರಿಗಳ ನಿದ್ರೆಗೆಡಿಸುವಂತೆ ಮಾಡಿ ಅನಾಮ ದೇಯಾ ಪತ್ರ ಬರೆದವರು ಯಾರಿರ ಬಹುದು ಎಂಬುದು ಮಾತ್ರ ಅಧಿಕಾರಿಗಳ ತಲೆ ಕೊರೆಯುವಂತೆ ಮಾಡಿದ್ದು.
ಚಳ್ಳಕೆರೆ ಖಜಾನೆ ಆದಿಕಾರಿಯ ಲಂಚಾವತಾರದ ಅನಾಮದೇಯ ಪತ್ರ ಯಾವದಿಕ್ಕಿಗೆ ಹೋಗುತ್ತದೆ? ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಾರೆಯೇ? ಈ ಹಿಂದೆ ಇದ್ದ ಖಜಾನೆ ಅಧಿಕಾರಿಯೊಬ್ಬರ ಮೇಲೆ ಅನಾಮದೇಯ ಪತ್ರ ಸಾಮೀಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನು ತನಿಖೆಯೂ ಮಾಡಿದ್ದರೂ ಎನ್ನಲಾಗಿದೆ.
ಈಗಿರುವ ಖಾಸನೆ ಅಧಿಕಾರಿಯ ಬಗ್ಗೆ ಅನಾಮದೇಯ ಪತ್ರ ಬರೆದಿರುವುದು ಕುತೂಹಲಕ್ಕೆ ಎಡೆಮಾಡಿದೆ.


About The Author
Discover more from JANADHWANI NEWS
Subscribe to get the latest posts sent to your email.