ನಾಯಕನಹಟ್ಟಿ-: ಚಳ್ಳಕೆರೆ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ವಕೀಲರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಚಳ್ಳಕೆರೆ ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷ ಜಿ. ಆರ್ ಅಶ್ವಥ್ ನಾಯಕ್ ಹೇಳಿದರು.



ಮಂಗಳವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠ ಮತ್ತು ವಾಲ್ಮೀಕಿ ವೃತ್ತ ಹಾಗೂ ಹೊರಮಠಕ್ಕ ವಿಶೇಷ ಪೂಜ್ಯ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸೋಮವಾರ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.ನನ್ನನ್ನು ಆಯ್ಕೆ ಮಾಡಿ ನನಗೆ ಹೆಚ್ಚಿನ ಕರ್ತವ್ಯ ನೀಡಿದ ವಕೀಲರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಶಕ್ತಿಮೀರಿ ಕೆಲಸ ಮಾಡುತ್ತೇನೆ .ಇಂದು ನಾಯಕನಹಟ್ಟಿ- ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರಕ್ಕೆ ದೇವರ ದರ್ಶನ ಪಡೆದಿದ್ದೇನೆ .ಹೋಬಳಿಯ ನಾಯಕ ಸಮುದಾಯ ಮತ್ತು ಇತರ ಸಮುದಾಯದವರು ನನ್ನ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ ಅವರೆಲ್ಲರಿಗೂ ನಾನು ಆಭಾರಿಯಾಗಿರುತ್ತೇನೆ ಎಂದರು.ಸ್ಥಳದಲ್ಲಿ ಚಳ್ಳಕೆರೆ ತಾಲೂಕು ವಕೀಲರ ಸಂಘದ ವಕೀಲರಾದ ಎಂ.ಎಸ್. ಜಗದೀಶ್, ಕೆ.ಬಿ. ಪ್ರಭಾಕರ್, ಕೆ ಟಿ ರುದ್ರೇಶ್, ಎತ್ತಿನಹಟ್ಟಿ ಟಿ. ನಾಗೇಂದ್ರಪ್ಪ, ಕಾಂತರಾಜ್,ಎನ್. ಟಿ, ತಿಪ್ಪೇಸ್ವಾಮಿ, ಬಿ ಟಿ ಗುರುಮೂರ್ತಿ, ಗುಂತಕೋಲ್ಮನಹಳ್ಳಿ ವೈ. ಮಲ್ಲೇಶ್, ವಸಂತ್, ಡಿ.ಬಿ. ಬೋರಯ್ಯ, ಕೆ ಹೆಚ್ ಬೋರಯ್ಯ, ಶೇಖರಪ್ಪ, ಮಹಾಂತೇಶ್, ವೆಂಕಟೇಶ್,ಬಿ. ಪಾಲಯ್ಯ, ಬೋರಯ್ಯ, ಬಿ.ಎಸ್ ,ಓಬಯ್ಯ, ದಳವಾಯಿ, ನಾಯಕನಹಟ್ಟಿ- ಹೋಬಳಿಯ ಯುವ ಮುಖಂಡರಾದ ಡಿ.ಬಿ. ಬೋರಯ್ಯ, ಜಿ.ಬಿ. ಮುದಿಯಪ್ಪ ,ಎಸ್ ಟಿ.ಬೋರಸ್ವಾಮಿ, ಏಜೆಂಟ್ರು ಪಾಲಯ್ಯ, ಕೆ.ಟಿ. ಮಲ್ಲಿಕಾರ್ಜುನ್ ಟಿ ಮಂಜುನಾಥ್ ಶಿಕ್ಷಕ ನಾಗರಾಜ್, ಮಲ್ಲೂರಹಳ್ಳಿ ಕಾಟಯ್ಯ,ಎ.ಟಿ. ಅಶೋಕ್, ನಾಯಕನಹಟ್ಟಿ ಓಬಳೇಶ್, ಕೊಂಡಯ್ಯನಕೊಪ್ಪಲೆ ಬೋರಯ್ಯ, ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.