January 30, 2026
FB_IMG_1735572314062.jpg


ಹಿರಿಯೂರು:
ದಲಿತರ ಜಮೀನುಗಳಲ್ಲಿ ಅಕ್ರಮವಾಗಿ ಬೋರ್ ವೆಲ್ ಗಳನ್ನು ಕೊರೆದು ತಮ್ಮ ಸ್ವಂತ ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಕೇಳಲು ಹೋದ ದಲಿತರ ಆಸ್ತಿ ಪಾಸ್ತಿ ನಷ್ಟಮಾಡಿ ದೌರ್ಜನ್ಯ ನಡೆಸಿ, ಜೀವಬೆದರಿಕೆ ಹಾಕುತ್ತಿರುವವರ ಮೇಲೆ ಸೂಕ್ತಕ್ರಮ ಜರುಗಿಸಬೇಕು ಎಂಬುದಾಗಿ ಮಹಾನಾಯಕ ದಲಿತಸೇನೆ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷರಾದ ಕೆ.ಪಿ.ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಮಹಾನಾಯಕ ದಲಿತಸೇನೆ ಸಂಘಟನೆಯ ವತಿಯಿಂದ ದಲಿತರ ಆಸ್ತಿ ಪಾಸ್ತಿ ನಷ್ಟಮಾಡಿ ದೌರ್ಜನ್ಯ ನಡೆಸುತ್ತಿರುವವರ ಮೇಲೆ ಸೂಕ್ತಕ್ರಮ ಜರುಗಿಸಬೇಕೆಂದು ಒತ್ತಾಯಿಸಿ, ತಾಲ್ಲೂಕು ತಹಶೀಲ್ದಾರರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ತಾಲ್ಲೂಕಿನ ಐಮಂಗಳ ಹೋಬಳಿ ಸೊಂಡೆಕೆರೆ ಗ್ರಾಮದ ರಿ ಸರ್ವೇ ನಂ 35ಹಾಗೂ 32ರ ಆ ಗ್ರಾಮದ ಎಸ್.ಸಿ/ಎಸ್.ಟಿ. ಸಮುದಾಯದವರ ಹೆಸರಿಗೆ 1991/92ರಲ್ಲಿ ಸರ್ಕಾರವು ಮಂಜೂರಾತಿ ಆದೇಶ ನೀಡಿರುತ್ತದೆ 1998/99ರಲ್ಲಿ ಸಾಗುವಳಿ ಚೀಟಿಗಳನ್ನು ಪಡೆದು ಕಾನೂನುನಾತ್ಮಕವಾಗಿ ಖಾತೆ ಕಂದಾಯ ಪಹಣಿ, ಪಟ್ಟಗಳನ್ನು ಹೊಂದಿ ಭೂ ಕಂದಾಯ ಪಾವತಿಸಿ ಸುಮಾರು 20ವರ್ಷಗಳ ಕಾಲ ಸ್ವಾದೀನ ಅನುಭವದಲ್ಲಿದ್ದು ವ್ಯವಸಾಯ ಮಾಡಿರುತ್ತಾರೆ.
ಅಲ್ಲದೆ ಇತ್ತೀಚೆಗೆ ಸದರಿ ಗ್ರಾಮದ ಕೆಲವರು ಈ ವ್ಯವಸಾಯ ಭೂಮಿಯು ದಲಿತರಿಗೆ ಸೇರಿದ್ದಲ್ಲಾ ಅರಣ್ಯ ಇಲಾಖೆಗೆ ಸೇರಿದೆದ್ದೆಂದು ಖಾತೆ ಇರುವ ದಲಿತರು ಜಮೀನು ವ್ಯವಸಾಯ ಮಾಡದಂತೆ ಅತಿಕ್ರಮ ಪ್ರವೇಶ ಮಾಡಿ, ದಲಿತರ ಜಮೀನುಗಳಲ್ಲಿ ಗುಂಡಿ ತೆಗೆದು ಮಣ್ಣು ಸಾಗಾಟ ಮಾಡಿರುತ್ತಾರೆ ಎಂದರಲ್ಲದೆ,
ದಲಿತರ ಜಮೀನುಗಳಲ್ಲಿ ಅಕ್ರಮವಾಗಿ ಬೋರ್ ವೆಲ್ ಗಳನ್ನು ಕೊರೆದು ತಮ್ಮ ಸ್ವಂತ ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಈ ಕೂಡಲೇ ಪ್ರಕರಣಕ್ಕೆ ಸಂಗಂಧಿಸಿದಂತೆ ದೂರು ದಾಖಲಿಸಿ, ತೊಂದರೆ ಅನುಭವಿಸುತ್ತಿರುವವರಿಗೆ ಸೂಕ್ತ ರಕ್ಷಣೆ ಒದಗಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತಕ್ರಮಕೈಗೊಳ್ಳಬೇಕು ಎಂಬುದಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷರಾದ ಕೆ.ಪಿ. ಶ್ರೀನಿವಾಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಳೆಯಪ್ಪ ಕೆ ಸಾಕ್ಯ, ಜಮೀನಿನ ಮಾಲೀಕರಾದ ಕೆಂಚಪ್ಪ. ಕಾವ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading