December 14, 2025
FB_IMG_1735570482395.jpg


ಹಿರಿಯೂರು :
ಗಾಯತ್ರಿ ಜಲಾಶಯ ಸೇರಿದಂತೆ 16 ಕೆರೆಗಳಿಗೆ ಇದುವರೆಗೂ ಸರ್ಕಾರದಿಂದ ನೀರು ತುಂಬಿಸುವ ಯಾವುದೇ ಆದೇಶ ಬರದೇ ಇರುವುದರಿಂದ ತಾಲ್ಲೂಕಿನ ರೈತರು ತೀವ್ರ ಹೋರಾಟಕ್ಕೆ ಮುಂದಾಗಬೇಕು ಎಂಬುದಾಗಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ನಡೆಯುತ್ತಿರುವ 195 ದಿನದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೈತರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬಂದು ಬೀದಿಯಲ್ಲಿ ಕೂತು ಸಾಂಕೇತಿಕ ಧರಣಿ ಹೋರಾಟ ಮಾಡುತ್ತಿದ್ದರೂ, ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಇದುವರೆಗೂ ಧರಣಿ ಸ್ಥಳಕ್ಕೆ ಬಂದಿರುವುದಿಲ್ಲ, ರೈತರ ಸಮಸ್ಯೆ ಆಲಿಸದೆ ಇರುವ ನಮ್ಮ ಶಾಸಕರು ಇನ್ನು ಮುಂದೆ ಯಾವುದೇ ಗ್ರಾಮಕ್ಕೆ ಬಂದರು ರೈತ ವಿರೋಧಿ ಶಾಸಕರು ಎಂದು ಧಿಕ್ಕಾರ ಕೂಗುತ್ತಾ ಗೆರವು ಹಾಕಿ ಕಪ್ಪು ಬಾವುಟ ಹಾರಿಸಲಾಗುವುದು ಎಂದರಲ್ಲದೆ,
ಜೊತೆಗೆ ಕ್ಷೇತ್ರದ ಶಾಸಕರ ಕಚೇರಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕು, ವಾಣಿವಿಲಾಸ ಜಲಾಶಯ ಜನವರಿ 10 ಅಥವಾ 15 ದಿನದೊಳಗಾಗಿ ಕೊಡಿ ಬೀಳುವ ಎಲ್ಲಾ ಮುನ್ಸೂಚನೆಗಳು ಕಾಣುತ್ತವೆ, ಆಗ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮತ್ತು ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ನಮ್ಮ ತಾಲೂಕಿಗೆ ಆಗಮಿಸಬಹುದು
ಆ ಸಂದರ್ಭದಲ್ಲಿ ಈ ಭಾಗದ 16 ಕೆರೆ ಹಾಗೂ ಕಸಬಾ ಹಾಗೂ ಐಮಂಗಳ ಹೋಬಳಿಯ 6 ಕೆರೆಗಳಿಗೆ ನೀರು ತುಂಬಿಸುವ ಆದೇಶ ತೆಗೆದುಕೊಂಡು ಬರಬೇಕು ಎಂದು ಒತ್ತಾಯಿಸಿ ಜನವರಿ 20ನೇ ತಾರೀಕು ಸೋಮವಾರ ಹಿರಿಯೂರು ಬಂದ್ ಗೆ ಕರೆ ಕೊಟ್ಟು ತೀವ್ರ ತರದ ಚಳುವಳಿಯನ್ನು ಹಮ್ಮಿಕೊಳ್ಳೋಣ ಎಂಬುದಾಗಿ ಹೇಳಿದರು.
ಈ ತೀರ್ಮಾನಕ್ಕೆ ಸಭೆಯಲ್ಲಿ ಇದ್ದ ಎಲ್ಲಾ ರೈತಮುಖಂಡರುಗಳು ಒಪ್ಪಿಗೆ ನೀಡಿ, ಹಿರಿಯೂರು ಬಂದ್ ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಸ್ಥಳೀಯ ರೈತ ಸಂಘದ ಅಧ್ಯಕ್ಷರಾದ ಈರಣ್ಣ, ಮಹೇಶ್, ಗ್ರಾಮ ಪಂಚಾಯತಿ ಸದಸ್ಯರಾದ ವಿರುಪಾಕ್ಷಿ, ಸಣ್ಣ ತಿಮ್ಮಣ್ಣ, ಗಿರೀಶ್, ಶಿವಣ್ಣ, ಬಬ್ಬೂರ್ ಫಾರಂ ವಜೀರ್ ಸಾಬ್, ಅಶ್ವತಪ್ಪ, ಮೈಲಾರಲಿಂಗಪ್ಪ, ತಿಪ್ಪೇಸ್ವಾಮಿ, ಬಾಲರಾಜ್, ಮಂಜುನಾಥ್, ರಾಜಪ್ಪ, ಸಿದ್ದಪ್ಪ, ತಿಮ್ಮಜ್ಜ ಸೇರಿದಂತೆ ಅನೇಕರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading