January 30, 2026
IMG-20241230-WA0110.jpg

ನಾಯಕನಹಟ್ಟಿ : ಮಧ್ಯ ಕರ್ನಾಟಕದ ಪವಾಡ ಪುರುಷ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಪುಣ್ಯಕ್ಷೇತ್ರದಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಹೋಬಳಿ ಅಧ್ಯಕ್ಷ ಡಾ. ನಾಗರಾಜ್ ಮೀಸೆ ಒತ್ತಾಯಿಸಿದರು.

ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಪುಣ್ಯಕ್ಷೇತ್ರದಲ್ಲಿ ದಿನ ಬೆಳಗರಾದರೂ ಸಾವಿರಾರು ಭಕ್ತರು ಪಟ್ಟಣಕ್ಕೆ ಭೇಟಿ ನೀಡಿ, ಸ್ವಾಮಿ ಆಶೀರ್ವಾದ ಪಡೆಯುತ್ತಾರೆ. ಬೆಳಗ್ಗೆ 5:00 ಗಂಟೆಯಿಂದ ರಾತ್ರಿ 10.30 ರವರೆಗೆ ಬಸ್ಸುಗಳು ಸಂಚರಿಸುತ್ತವೆ. ಆದರೆ ಪಟ್ಟಣದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ವಿಲ್ಲದಿರುವುದರಿಂದ ಬಿಸಿಲು, ಮಳೆ, ಗಾಳಿಯನ್ನದೆ ಬೀದಿಯಲ್ಲಿಯೇ ನಿಂತು ಬಸ್ ಬರುವ ತನಕ ಕಾಯುವ ಪರಿಸ್ಥಿತಿ ಪ್ರಯಾಣಿಕರದಾಗಿದೆ. ಆದ್ದರಿಂದ ಪಟ್ಟಣದಲ್ಲಿ ಶೀಘ್ರವಾಗಿ ಬಸ್ ನಿಲ್ದಾಣವನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದಿಂದ ಚಳ್ಳಕೆರೆ ಹಾಗೂ ಚಿತ್ರದುರ್ಗ ನಗರಕ್ಕೆ ಬೆಳವಣಿಕೆಯಷ್ಟು ಸಾರಿಗೆ ಇಲಾಖೆ ಬಸ್ಸುಗಳು ಸಂಚರಿಸುತ್ತಿವೆ. ಚಳ್ಳಕೆರೆ, ಜಗಳೂರು, ದಾವಣಗೆರೆ ಪಟ್ಟಣಗಳಿಗೆ ಸಾರಿಗೆ ಇಲಾಖೆಯಿಂದ ಬಸ್ಸುಗಳನ್ನು ಒದಗಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಎಂ ಪರ್ವತಯ್ಯ ಓಬಯ್ಯನಹಟ್ಟಿ, ನಾಗರಾಜಪ್ಪ ಗಜ್ಗನಹಳ್ಳಿ, ಓಬಯ್ಯ ಗಜಗಾನಹಳ್ಳಿ ಇನ್ನು ಮುಂತಾದವರು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading