January 30, 2026
IMG-20241230-WA0098.jpg

  

ಚಳ್ಳಕೆರೆ: ಕಾಂಗ್ರೆಸ್ ಪಕ್ಷದ ನೆಹರು ಇಂದಿರಾಗಾಂಧಿ ಸೇರಿದಂತೆ ನೆಹರು ಮನೆತನದವರು ಡಾ. ಬಿ ಆರ್ ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನವನ್ನು ಎಂದಿಗೂ ಗೌರವಿಸಿಲ್ಲ ಅಂಬೇಡ್ಕರ್ ಅವರನ್ನು ಶೋಷಣೆ ಮಾಡಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದವರು ಇಂದು ಸಂವಿಧಾನದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಚಿತ್ರದುರ್ಗ ಜಿಲ್ಲೆಯ ಸಂಸದ ಗೋವಿಂದ ಎಂ ಕಾರಜೋಳ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿ ಕಾರಿದರು.

ನಗರದ ಚೇಂಬರ್ ಆಫ್ ಕಾಮರ್ಸ್ ಆವರಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಸನ್ಮಾನ ಅಭಿಯಾನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಇಡೀ ವಿಶ್ವವೇ ಒಪ್ಪಿಕೊಂಡಿದ್ದರು ಕಾಂಗ್ರೆಸ್ ಪಕ್ಷ ಒಪ್ಪಿಕೊಂಡಿಲ್ಲ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಹಿಂದೇಟು ಹಾಕಿದರು, ಆದರೆ ಜವಾಹರ್ಲಾಲ್ ನೆಹರು ಇಂದಿರಾಗಾಂಧಿ ರಾಜೀವ್ ಗಾಂಧಿ ಅವರಿಗೆ ಭಾರತ ರತ್ನ ನೀಡಿತ್ತು 1952ರ ಪ್ರಥಮ ಚುನಾವಣೆಯಲ್ಲಿ ಅಂಬೇಡ್ಕರ್ ಅವರು ಸೋತಾಗ ಕಾಂಗ್ರೆಸ್ ಸಂಭ್ರಮಿಸಿತ್ತು ಅಂಬೇಡ್ಕರ್ ಅವರು ನಿಧನ ಹೊಂದಿದಾಗ ರಾಜ್ ಘಾಟ್ ನಲ್ಲಿ ಸಮಾಧಿ ಮಾಡಲು ಜಾಗ ನೀಡದೇ ಅವಮಾನಿಸಿ ಸಮುದ್ರದ ದಂಡೆಯ ಮೇಲೆ ಜಾಗ ನೀಡಿದ್ದು ವಿಪರ್ಯಾಸದ ಸಂಗತಿಯಾಗಿದೆ ಹಿಂದುಳಿದ ಸಮುದಾಯಗಳಿಗೆ ಕಾಂಗ್ರೆಸ್ ಪಕ್ಷ ಯಾವುದೇ ಕೊಡುಗೆಯನ್ನು ನೀಡಿಲ್ಲ ರಾಹುಲ್ ಗಾಂಧಿ ವಿದೇಶದಲ್ಲಿ ಮೀಸಲಾತಿಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾಗ ಎಸ್ ಸಿ ಸಮುದಾಯ ಪ್ರತಿಭಟಿಸಲಿಲ್ಲ ಅಮಿತ್ ಶಾ 12 ಸೆಕೆಂಡುಗಳಲ್ಲಿ ನೀಡಿದ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿ ದೊಡ್ಡ ತಪ್ಪು ನಡೆದಿದೆ ಎಂಬಂತೆ ಬಿಂಬಿಸುತ್ತಿದ್ದಾರೆ ಆದ್ದರಿಂದ ಕಾಂಗ್ರೆಸ್ ಮಾತಿಗೆ ದಲಿತರು ಮರುಳಾಗದೆ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಚುನಾವಣಾ ಸಂದರ್ಭದಲ್ಲಿ ಮಾತ್ರ ದಲಿತರು ಕಾಂಗ್ರೆಸ್ ಪಕ್ಷಕ್ಕೆ ನೆನಪಾಗುತ್ತಿದ್ದು ಸ್ವಾಭಿಮಾನದ ಬದುಕನ್ನು ನಡೆಸುತ್ತಿರುವ ದಲಿತರು ಒಗ್ಗಟ್ಟಾಗಿ ಎಂದು ಕರೆ ನೀಡಿದರು. 

ಮಾಜಿ ಸಚಿವ ಎನ್ ಮಹೇಶ್ ಮಾತನಾಡಿ ಅಮಿತ್ ಶಾ ರವರು ಸಂಸತ್ ಕಲಾಪದಲ್ಲಿ ಒಂದುವರೆ ಗಂಟೆಗಳ ಕಾಲ ಭಾಷಣ ಮಾಡಿದ್ದಾರೆ ಅದರಲ್ಲಿ ಕೇವಲ 12 ಸೆಕೆಂಡ್ ಗಳ ಅಂಬೇಡ್ಕರ್ ಬಗ್ಗೆ ಹೇಳಿರುವ ಮಾತನ್ನು ಕಾಂಗ್ರೆಸ್ ಇಂದು ತನ್ನ ಪ್ರಚಾರದ ಸರಕಾಗಿ ಮಾಡಿಕೊಂಡು ದೇಶದ ದಲಿತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಅಮಿತ್ ಶಾ ರವರು ಅಂದು ಅಂಬೇಡ್ಕರ್ ಅಂಬೇಡ್ಕರ್ ಎಂದು ಜಪಿಸುವ ಬದಲು ದೇವರನ್ನು ಜಪಿಸಿದ್ದರೆ ವರವಾದರೂ ನೀಡುತ್ತಿದ್ದರು ಎಂಬ ಮಾತಿನ ಅರ್ಥವನ್ನು ತಿಳಿಯದೆ ದೇಶಾದ್ಯಂತ ಕಾಂಗ್ರೆಸ್ ಪ್ರತಿಪಟಿಸುತ್ತಿದೆ ಆದರೆ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನಗಳು ದೇಶದ ಜನತೆಗೆ ತಿಳಿದಿದೆ ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿಗೆ ಆಯ್ಕೆ ಆಗಬಾರದು ಎಂಬ ದೃಷ್ಟಿಯಿಂದ ಅವರನ್ನು ಚುನಾವಣೆಗಳಲ್ಲಿ ಸೋಲಿಸಿದ್ದರು ಕಾಂಗ್ರೆಸ್ ಪಕ್ಷ ದಲಿತರನ್ನು ಅಂಬೇಡ್ಕರ್ ರೂಪದಲ್ಲಿ ಅವಮಾನಿಸಿದ್ದು ಈಗಲಾದರೂ ದಲಿತ ಮುಖಂಡರು ಕಾಂಗ್ರೆಸ್ ಪಕ್ಷದ ಬಗ್ಗೆ ಜಾಗೃತಿ ವಹಿಸುವುದು ಮುಖ್ಯವಾಗಿದೆ ಎಂದರು 

ಕಾರ್ಯಕ್ರಮದಲ್ಲಿ ಡಾ. ಅರುಣ್ ಕುಮಾರ್ ವಾದಿರಾಜ ಮಾತನಾಡಿದರು 

ಈ ಸಂದರ್ಭದಲ್ಲಿ ಮಾಜಿ ಶಾಸಕ ನೆರಲಗುಂಟೆ ತಿಪ್ಪೇಸ್ವಾಮಿ ಬಿಜೆಪಿ ತಾಲೂಕು ಅಧ್ಯಕ್ಷ ಸೂರನನಹಳ್ಳಿ ಶ್ರೀನಿವಾಸ್ ರಾಮದಾಸ್ ಕೆಟಿ ಕುಮಾರಸ್ವಾಮಿ ಜಯಪಾಲಯ್ಯ ಓಬಳೇಶ್.ನಿವೃತ್ತ ನೌಕರ ದಯಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading