ಚಳ್ಳಕೆರೆ ಡಿ.30
ನಿವೇಶ ಕೊಡಿಸುವುದಾಗಿ ಜನರಿಂದ ಹಣ ವಸೂಲಿ ಸೂರಿನ ಹೆಸರಲ್ಲಿ ಅಮಾಯಕರಿಗೆ ವಂಚನೆ.
ಹೌದು ಇದು ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿ ಗ್ರಾಮದ ಅಲೆಮಾರಿ ಕುಟುಂಬಗಳಿಗೆ ನಗರಂಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಬಳಿ ಚಂದ್ರಾ ಲೇ ಹೌಟ್ ನಲ್ಲಿ ಕಡಿಮೆ ಬೆಲೆಗೆ ನಿವೇಶನ ಕೊಡುವುದಾಗಿ ಹಣ ಪಡೆದಯ ಹಣವೂ ಇಲ್ಲ ನಿವೇಶನವೂ ಇಲ್ಲ ಹಣಕ್ಕಾಗಿ ಸುಮಾರು 7 ತಿಂಗಳಿಂದ ನ್ಯಾಯಾಕ್ಕಾಗಿ ಅಲೆದಾಡುತ್ತಿದ್ದಾರೆ.
ದಿನದ ತುತ್ತಿಗಾಗಿ ಊರೂರು ಅಲೆದಾಡಿ ರಸ್ತೆ ಹಾಗೂ ಖಾಲಿ ನಿವೇಶನಗಳಲ್ಲಿ ಬಟ್ಟೆಯಿಂದ ಮಾಡಿದ ಜೋಪಡಿಗಳಲ್ಲಿ ವಾಸ ಮಾಡುತ್ತಾ ಕೂಲಿ ಕೆಲಸದ ಜತೆಗೆ ಬಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಂಡು ಅಷ್ಟೋ ಇಷ್ಟೋ ಕೂಡಿಟ್ಟ ಹಣದಲ್ಲಿ ಸಿದ್ದಾಪುರ ಗ್ರಾಮದ ನೀವೇಶಗಳನ್ನು ಕೊಡಿಸುವ ಹಾಗೂ ನಗರದ ಅಣ್ಣಪ್ಪ ಎಂಬುವವರಿ ಅಲೆಮಾರಿ ಕುಟುಂಬದ 6 ಜನರ ಬಳಿ 2 ಲಕ್ಷ ರೂ ಮುಂಗಡ ಪಡೆದು ನಿವೇಶನ ಹೆಸರಿಗೆ ಇ-ಖಾತೆ ಮಾಡಿಸಿದ ಮೇಲೆ ಉಳಿದ ಹಣ ನೀಡುವಂತೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ.
ದಿನ ಕಳೆದಂತೆ ನಿವೇಶ ನೀಡುವುದಾಗ ಹಣ ಪಡೆದವರನ್ನು ವಿಚಾರಿಸಲು ಹೋದಾಗ ನಗರದಲ್ಲಿದ್ದ ಕಚೇರಿಇ ನ್ನು ಮುಚ್ಚಲಾಗಿದ್ದು ಹಣ ಕೊಡುವುದಾಗಿ ನೀಡಿದ ಚೆಕ್ ಬ್ಯಾಂಕಿಗೆ ಹಾಕಿದಾಗ ಖಾತೆಯಲ್ಲಿ ಹಣ ಖಾಲಿಯಾಗಿರುವುದು ಬೆಳಕಿಗೆ ಬಂದಿದ್ದು ಹಣ ಪಡೆದವರ ಪೋನ್ ಸ್ವಿಚ್ ಆಫ್ ಅಗಿದೆ ಠಾಣೆಗೆ ದೂರು ನೀಡಲಯ ಹೋದರೆ ಅವನೇ ಸಾಲ ಮಾಡಿಕೊಂಡೂ ಊರು ಬಿಟ್ಟಿದ್ದಾನೆ ಹೋಗಿ ಎಂದು ದೂರು ಪಡೆಯದೆ ಪೋಲಿಸರು ವಾಪಸ್ ಕಳಿಸುತ್ತಾರೆ.
ರಾಧ ಡೆವಲ್ಪರ್ ಹೆಸರಿಗೆ ಕರಾರು ಪತ್ರ ನೀಡಿದ್ದು ಚಂದ್ರಾ ಲೇಹೌಟ್ ಮಾಲಿಕರ ಬಳಿ ಹೋದರೆ ನಮಗೂ ಇದಕ್ಕೂ ಸಂಬಂಧವಿಲ್ಲ ಅಣ್ಣಪ್ಪ ಎಂಬ ವ್ಯಕ್ತಿ ನಮಗೂ ಸುಮಾರು2.5 ಕೋಟಿ ಹಣ ವಂಚನೆ ಮಾಡಿದ್ದಾನೆ .ನೀವು ನಿವೇಶನ ಪಡೆಯುವಾಗ ದಾಖಲೆ ಪರಿಶೀಲಿಸಿ ಹಣ ಕೊಡ ಬೇಕಿತ್ತು ಎಂದು ಉತ್ತರ ನೀಡುತ್ತಾರೆ.
ನಾವು ಅನಕ್ಷರಸ್ತರು ಓದು ಬರಹ ಬಾರದವರು ನಿವೇಶನ ಖರಿಸ ಬೇಕೆಂದು ಹಣ ನೀಡಿದ್ದೇವೆ ಬುದ್ದಿವಂತರು ಹಣವಂತರು 2.5 ಕೋಟಿ ಕಳೆದುಕೊಂಡಿದ್ದೇ ಎನ್ನುತ್ತಾರೆ ನಿವೇಶನ ಮಾಲಿಕರು.
ಬದಿಯಲ್ಲಿ
ಬಿಕ್ಷೆ ಹಾಗೂ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 6 ಜನ ಅಲೆಮಾರಿಗಳಿಂದ ತಲಾ.2.5 ರೂ ಒಟ್ಟು 1.5 ಕೋ ರೂ ಗೆ ಮುಂಗಡ ಅಗ್ರಿಮೆಂಟ್ ಬರೆದುಕೊಟ್ಟಿದ್ದಾರೆ ಈಗ ಹಣ ಪಡೆದವರೂ ಊರು ಬಿಟ್ಟು ಹೋಗಿದ್ದಾರೆ ಒಂದು ನಿವೇಶಕ್ಕೆ ಮೂರಿಂದ ನಾಲ್ಕು ಜನರ ಬಳಿ ಹಣ ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ .
ನಿವೇಶನ ಕನಸು ಹೊತ್ತ ಅಲೆಮಾರಿ ಕುಟುಂಬಸ್ಥರು ಮಾತ್ರ ಕೊಟ್ಟ ಹಣ ನೀಡಿದರೆ ಸಾಕು ಎಂದು ಹಣಕ್ಕಾಗಿ ಅಲೆದಾಡುತ್ತಾರೆ.
ಕೂಡಲೆ ಅಮಾಯಕರಿಗೆ ನಿವೇಶ ಕೊಡಿಸುವ ಆಸೆ ತೋರಿಸಿ ವಂಚನೆ ಮಾಡಿದವರಿಗೆ ಸಂಬಂಧ ಪಟ್ಟ ಇಲಾಖೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವರೇ ಕಾದು ನೋಡ ಬೇಕಿದೆ.






8471875307301149013.jpg)
About The Author
Discover more from JANADHWANI NEWS
Subscribe to get the latest posts sent to your email.