ನಾಯಕನಹಟ್ಟಿ: ಎದೆ ನೋವಿನಿಂದ ಬಳಳುತಿದ್ದ ವ್ಯಕ್ತಿ ಎಸ್ ನಾಗರಾಜ್ (50) ಇವರನ್ನು ನಿನ್ನೆ ಬೆಳ್ಳಗೆ 7ಗಂಟೆ ಸಮಯದಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸೆಗೆಂದು ಕರೆದುಕೊಂಡು ಬಂದ ಸಂರ್ಭದಲ್ಲಿ ವೈದ್ಯರು ಇಲ್ಲದ ಕಾರಣ ಹೃದಯಾಘಾತದಿಂದ ವ್ಯಕ್ತಿ ಸಾವನ್ನುಪ್ಪಿದ ಘಟನೆ ಜರುಗಿದೆ.





ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಸಂಬಂಧಿಕರು, ಬಂಧುಗಳು ಆಸ್ಪತ್ರೆಯ ಆವರಣದಲ್ಲಿ ಸೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದಿರುವ ಕಾರಣ ಜಿಲ್ಲಾ ಮತ್ತು ತಾಲ್ಲೂಕು ವೈತ್ಯಾಧಿಕಾರಿಗಳ ಹಾಗೂ ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಪ್ರತಿಭಟಿಸಿ ಇಡಿ ಶಾಪಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಆಸ್ಪತ್ರೆಯ ಬಾಗಿಲಲ್ಲಿ ಮೃತ ದೇಹದೊಂದಿಗೆ ಹೆಂಡತಿ ಮಕ್ಕಳ ಮತ್ತು ಸಂಬಂಧಿಕರ ಆಕ್ರಂದನ ನೋಡುಗರನ್ನು ಮೌನಗೊಳಿಸಿತು.ಕೂಡಲೇ ಕೆಲವು ಮುಖಂಡರು ಜಿಲ್ಲಾ ಆಡಳಿತ ವೈದ್ಯಧಿಕಾರಿ ಡಾ ರೇಣುಪ್ರಸಾದ್ , ಡಾ ಅಭಿನವ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಕಾಶಿ ಯವರಿಗೆ ಕರೆ ಮಾಡಿ ವಿಷಯ ತಿಳಿಸಿದ ಕೂಡಲೇ ಅಧಿಕಾರಿಗಳು ಆಗಮಿಸಿ ತುರ್ತು ಸಭೆಯನ್ನು ನಡೆಸಿದರು.
ಸಾವು ನೋವುನಿಂದ ಜನ ಆಸ್ಪತ್ರೆಗೆ ಬಂದರೆ ಇಲ್ಲಿ ಡಾಕ್ಟರ್ ಇರೋದಿಲ್ಲ ಕೇವಲ ಡಿ ಗ್ರೂಪ್, ನರ್ಸಿಂಗ್ ಸಿಬ್ಬಂದಿಗಳು ಮಾತ್ರ ಇರ್ತಾರೆ, ಇವರೇನು ಮಾಡ್ತಾರೆ,,,,,,? ಇದೇ ಮೊದಲಬಾರಿ ಅಲ್ಲ ಈಗೆ ಹಲವು ಬಾರಿ ಇದೆ ರೀತಿ ಸುಮಾರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಇವತ್ತು ಸಮಯಕ್ಕೆ ಸರಿಯಾಗಿ ಡಾಕ್ಟರ್ ಇದಿದ್ದರೆ ಒಬ್ಬ ವ್ಯಕ್ತಿ ಯ ಜೀವ ಉಳಿಯುತ್ತಿತು ಎನ್ನುವ ನಂಬಿಕೆ ಇತ್ತು. ಇನ್ನೂ ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು ಮೃತನ ಸಂಬಂಧಿ ಟಿ ಶಿವದತ್ತ ಆಕ್ರೋಶ ವ್ಯಕ್ತಪಡಿಸಿದರು.
ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಬಳಿ ವ್ಯಾಪ್ತಿಯ 43 ಗ್ರಾಮಗಳಿಂದ ರೋಗಿಗಳು ಮತ್ತು ಹೆರಿಗೆಗೆಂದು ಹಗಲು ಮತ್ತು ರಾತ್ರಿ ಸಂದರ್ಭದಲ್ಲಿ ಬರುತ್ತಿರುತ್ತಾರೆ. ಆದರೆ ಯಾವುದೇ ರೀತಿಯ ಪ್ರಸೂತಿಯನ್ನ ಮಾಡಿಸದೇ ಚಳ್ಳಕೆರೆ /ಚಿತ್ರದುರ್ಗ ದ ಆಸ್ಪತ್ರೆಗಳಿಗೆ ಕಳುಹಿಸಿಕೊಡುತ್ತಾರೆ. ನಾಯಕನಹಟ್ಟಿಯಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಸರ್ಕಾರ ಸೊಸಜ್ಜಿತವಾದ ಆಸ್ಪತ್ರೆಗಳನ್ನ ನಿರ್ಮಿಸಿದರೂ ಈ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಟೆಕ್ನಿಕಲ್ ಸಿಬ್ಬಂದಿ ಇದ್ದರೂ ಕೂಡ ರೋಗಿಗಳಿಗೆ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೆ ಬೇಜವಾಬ್ದಾರಿ ತೋರುತ್ತಿದ್ದಾರೆ. ಔಷಧಿಯನ್ನ ರೋಗಿಗಳಿಗೆ ನೀಡದೆ ಸಮಯ ಮುಗಿದ ಔಷಧಿಯನ್ನು ಸುಟ್ಟು ಹಾಕುತ್ತಾರೆ ಅಥವಾ ಬಿಸಾಡುತ್ತಾರೆ ಆದ್ದರಿಂದ ಇಂಥ ವ್ಯವಸ್ಥೆಯನ್ನು ಸರಿಪಡಿಸಲು ಹಲವಾರು ಬಾರಿ ತಾಲ್ಲೂಕು ಮತ್ತು ಜಿಲ್ಲಾ ವೈದ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸಹ ಕ್ರಮ ತೆಗೆದುಕೊಂಡಿರಲಿಲ್ಲ. ಆದ್ದರಿಂದ ಈ ಕೂಡಲೇ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಮಾರು ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿಗಳನ್ನು ವರ್ಗಾವಣೆ ಮಾಡಬೇಕು. ಬೇರೆ ವೈದ್ಯರು ಮತ್ತು ಸಿಬ್ಬಂದಿ ವರ್ಗದವರನ್ನು ನಿಯೋಜನೆ ಮಾಡಬೇಕು ಇಲ್ಲವಾದಲ್ಲಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಸಭೆಯಲ್ಲಿ ಭಾಗವಹಿಸಿದ ಪ್ರಯೊಬ್ಬರು ಅಧಿಕಾರಿಗಳಿಗೆ ಆಗ್ರಹಿಸಿದರು.
ನಾಯಕನಹಟ್ಟಿ ಹೋಬಳಿ ರೈತ ಸಂಘ ಮತ್ತು ಹಸಿರು ಸೇನೆ ಹೋಬಳಿ ಅಧ್ಯಕ್ಷ ಡಾ. ಈ ನಾಗರಾಜ್ ಮೀಸೆ ಮಾತನಾಡಿ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತರೆ ವ್ಯಕ್ತಿ ಬದುಕುವ ಸಾಧ್ಯತೆ ಹೆಚ್ಚು ಜೀವ ಎಂಬುದು ಅತ್ಯಮೂಲ್ಯವಾದದು. ಜೀವ ಹೋದರೆ ಅದನ್ನು ತರಲು ಯಾರಿಂದಲೂ ಸಾಧ್ಯವಿಲ್ಲ ನಾವುಗಳು ಕೈ ಮುಗಿಯೋದು ಮೂವರಿಗೆ ಮಾತ್ರ ಅದರಲ್ಲಿ ಮೊದಲನೆಯದಾಗಿ ತಂದೆ ತಾಯಿಗಳು, ದೇವರು, ವೈದ್ಯರು ಯಾಕೆಂದರೆ ವೈದ್ಯರು ದೇವರು ಸಮಾನ ಎಂದು ಆದರೆ ಈ ರೀತಿಯಲ್ಲಿ ನಡೆದುಕೊಂಡರೆ ಹೇಗೆ? ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದಲ್ಲ ಎರಡಲ್ಲ ನೂರಾರು ಸಮಸ್ಯೆಗಳಿವೆ. ಜಿಲ್ಲಾ ವೈದ್ಯಾಧಿಕಾರಿಗಳಾದ ನೀವುಗಳು ಇದಕ್ಕೆಲ್ಲ ಸೂಕ್ತ ಕ್ರಮ ಜರಗಿಸಬೇಕು ಎಂದು ಮನವಿ ಮಾಡಿಕೊಂಡರು.
ಗ್ರಾಮ ಪಂಚಾಯತಿ ಮಾಜಿ ಸದಸ್ಯ ಆರ್ ಶ್ರೀಕಾಂತ್ ಮಾತನಾಡಿ ವೈದ್ಯರು ದಿನದ 24 ಗಂಟೆ ಕರ್ತವ್ಯ ನಿರ್ವಹಿಸಿ 48 ಗಂಟೆಗಳ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಈ ರೀತಿ ಕರ್ತವ್ಯ ನಿರ್ವಹಿಸಲು ಕಾನೂನಿನಲ್ಲಿ ಅವಕಾಶ ಇದೆಯೇ? ಎಂದು ಪ್ರಶ್ನಿಸಿದರು.
ಆಸ್ಪತ್ರೆಯಲ್ಲಿ ಯಾವ ಸಮಯದಲ್ಲಿ ಯಾವ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆ ಆಸ್ಪತ್ರೆಯಲ್ಲಿ ಸೂಚನಾ ಫಲಕ ಹಾಕಿಸುವಂತೆ ಹಾಗೂ ಆಸ್ಪತ್ರೆಯಲ್ಲಿ ವೈದ್ಯರ ಬಗ್ಗೆ ವಿಚಾರಿಸಿದಾಗ ಸಿಬ್ಬಂದಿಗಳು ಗೊಂದಲದ ಮಾಹಿತಿ ನೀಡುತ್ತಾರೆ. ರಾತ್ರಿ ಕರ್ತವ್ಯದಲ್ಲಿ ಸಮಸ್ಯೆಗಳು ಹೆಚ್ಚು ಇವುಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮುಖಂಡರಾದ ಶಿವದತ್ತ ಮಾತನಾಡಿ ಆಸ್ಪತ್ರೆಯಲ್ಲಿ ರಾತ್ರಿ ಸಮಯದಲ್ಲಿ ವೈದ್ಯರುಗಳು ಇರುವುದಿಲ್ಲ ಆದರೆ ನರ್ಸ್ ಗಳೇ ವೈದ್ಯರಾಗಿ ಚಿಕಿತ್ಸೆ ನೀಡುತ್ತಾರೆ. ನಮ್ಮ ಅಣ್ಣನವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ವೈದ್ಯರಾಗಲಿ, ನರ್ಸ್ ಗಳಾಗಲಿ ಇಲ್ಲದಿರುವ ಕಾರಣ ಸಾವನ್ನಪ್ಪಿದ್ದಾರೆ. ವೈದ್ಯರಿದ್ದಿದ್ದರೆ ಬದುಕುವ ಸಾಧ್ಯತೆ ಇತ್ತು ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆಡಳಿತ ವೈದ್ಯ ಅಧಿಕಾರಿ ಡಾ. ರೇಣುಪ್ರಸಾದ್ . ಡಾ. ಅಭಿನವ, ತಾಲೂಕು ಆರೋಗ್ಯ ಅಧಿಕಾರಿ ಡಾ. ಕಾಶಿ, ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದ ವ್ಯದ್ಯ ಡಾ ಸಚಿನ್,ಆರ್ ಶ್ರೀಕಾಂತ್,ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜೆ ಪಾಂಡುರಂಗ, ಪೊಲೀಸ್ ಪೇದೆಗಳಾದ ಅಣ್ಣಪ್ಪ ನಾಯ್ಕ್, ಶಿವಕುಮಾರ್, ಲೋಹಿತ್, ಕುಮಾರ್. ಮತ್ತು ಆಸ್ಪತ್ರೆಯ ಸಿಬ್ಬಂದಿಗಳು,ಮುಖಂಡರಾದ ಟಿ ಶಿವದತ್ತ, ಎಸ್ ಬಾಬು, ಜೆ ಟಿ ತಿಪ್ಪೇಸ್ವಾಮಿ, ಟಿ ಬಸವರಾಜ್, ಮತ್ತಿತರರು ಹಾಜರಿದ್ದರು.
ಮೃತ ನಾಗರಾಜಪ್ಪ ರವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ವೈದ್ಯರು ಇಲ್ಲದಿರುವ ಕಾರಣ ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತಂತೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಜರುಗದ ರೀತಿ ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು.
ಡಾ. ರೇಣುಪ್ರಸಾದ್
ಜಿಲ್ಲಾ ಆಡಳಿತ ವೈದ್ಯಾಧಿಕಾರಿಗಳು
ಚಿತ್ರದುರ್ಗ ಜಿಲ್ಲೆ.
About The Author
Discover more from JANADHWANI NEWS
Subscribe to get the latest posts sent to your email.