ವರದಿ: ಕೆ.ಟಿ.ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:-ಪ್ರತಿಯೊಬ್ಬ ದಂಪತಿಗಳಿಗೆ ತನ್ನ ವಂಶವನ್ನು ಬೆಳಗಲು ಗಂಡು ಮಗು ಬೇಕು ಎನ್ನುವ ಹಂಬಲ ಇದ್ದೆ ಇರುತ್ತದೆ, ಪ್ರಕೃತಿ ನಿಯಮವೋ ಅಥವಾ ವಂಶ ಪರಂಪರೆಯಿಂದ ಬಂದ ಬೆಳವಣಿಗೆಯು ಒಂದೊಮ್ಮೆ ಗಂಡು ಸಂತಾನವಾಗುವುದಿಲ್ಲ ಇದರಿಂದಾಗಿ ವಂಶೋದ್ಧರಕನಿಗಾಗಿ ದಂಪತಿಗಳು ದೇವರ ಮೊರೆ ಹೋಗುತ್ತಾರೆ.





ಹಿರೇಹಳ್ಳಿ ಗ್ರಾಮದ ಕಾಟಯ್ಯ ಅನುಸೂಯಮ್ಮ ಎಂಬ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು ಆಗಿದ್ದರು, ಆದ್ರೆ ಇವರು ಗಂಡು ಸಂತಾನಕ್ಕಾಗಿ ತಮ್ಮ ಕುಲ ದೈವವಾದ ಗಜ್ಜುಗಾನಹಳ್ಳಿ ಗ್ರಾಮದಲ್ಲಿರುವ ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೈವ ನಲ್ಲಜರು ಓಬಳೇಶ್ವರ ಸ್ವಾಮಿಗೆ ಗಂಡು ಸಂತಾನಕ್ಕಾಗಿ ಹರಕೆ ಹೊತ್ತಿದ್ದಾರೆ.
ದೇವರ ಹರಕೆ ಹೊತ್ತು ಪೂಜೆ ಪುನಸ್ಕಾರಗಳನ್ನು ಮಾಡಿಡುತ್ತಿದ್ದರು.ಇವರ ಹರಕೆಯಂತೆ ಆರೋಗ್ಯವಾಗಿ ಗಂಡು ಮಗು ಜನಿಸಿದ್ದು ತಮ್ಮ ಬೇಡಿಕೆಯನ್ನು ಈಡೇರಿಸಿದ ದೇವರಿಗೆ ದಂಪತಿಗಳು ತುಲಭಾರ ಅರ್ಪಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ.
ಈ ಕುರಿತಂತೆ ಗ್ರಾಮಸ್ಥರಾದ ಓ.ದಾಸಯ್ಯ ಮಾತನಾಡಿ, ಯಾರಿಗಾದರೂ ಮಕ್ಕಳು ಆಗಲಿಲ್ಲವೆಂದರೆ ನಲಜರು ಓಬಳೇಶ್ವರಸ್ವಾಮಿಗೆ ಹರಕೆ ಹೊತ್ತು ಭಕ್ತಿಯಿಂದ ಬೇಡಿದರೆ ಇಷ್ಟ ಪ್ರಾಪ್ತಿಯಾಗುತ್ತದೆ, ದೇವರಲ್ಲಿ ಭಕ್ತಿಯಿಂದ ಬೇಡಿದರೆ ಎಲ್ಲವುದು ಈಡೇರುತ್ತದೆ ಎನ್ನುವುದಕ್ಕೆ ಗಂಡು ಮಗುವಿನ ಸಂತಾನ ಪಡೆದಿರುವ ಹಿರೇಹಳ್ಳಿ ಗ್ರಾಮದ ಕಾಟಯ್ಯ ಅನುಸೂಯಮ್ಮ ದಂಪತಿಗಳು ಸಾಕ್ಷಿಯಾಗಿದ್ದಾರೆ.ಕುಲ ದೈವವನ್ನು ನಂಬಿದ್ದಲ್ಲಿ ಇಷ್ಟಾರ್ತ ಪ್ರಾಪ್ತಿಯಾಗುತ್ತದೆ ಎನ್ನುವ ಅದೆಷ್ಟೋ ಉದಾಹರಣೆಗಳು ಕಣ್ಣ ಮುಂದೆ ನಡೆದಿವೆ, ಇದು ದೇವರ ಪವಾಡವೇ ಆಗಿದೆ ಎಂದರು.
ಈ ಸಂದರ್ಭದಲ್ಲಿ ಪೂಜಾರಿ ಹೇಮಣ್ಣ, ದಾಸಯ್ಯ, ಯಜಮಾನ್ ತಿಪ್ಪೇಸ್ವಾಮಿ ಮಲ್ಲೂರಹಳ್ಳಿ, ಕಿಲಾರಿ ಯಜಮಾನ ಬಿ.ಟಿ.ನಲಜರವಯ್ಯ, ಬಿ.ಓಬಯ್ಯ, ಕೆ.ತಿಪ್ಪೇಸ್ವಾಮಿ, ಸೇರಿದಂತೆ ಮಹಿಳೆಯರು ಮಕ್ಕಳು ಗ್ರಾಮಸ್ಥರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.