
ಚಳ್ಳಕೆರೆ: ಕನ್ನಡ ನಾಡು ನುಡಿ ಸಂರಕ್ಷಣೆ ಪ್ರತಿಯೊಬ್ಬರ ಕನ್ನಡಿಗನ ಜವಾಬ್ದಾರಿಯಾಗಿದ್ದು ಪ್ರತಿ ಮನೆ ಮನಗಳಲ್ಲೂ ಕನ್ನಡ ಭಾಷೆ ರಾರಾಜಿಸಬೇಕು ಎಂದು ಶಾಸಕ ಟಿ ರಘುಮೂರ್ತಿ ಕರೆ ನೀಡಿದರು.
ನಗರದ 4ನೇ ವಾರ್ಡ್ ನ ಹಳೇಟೌನ್ ಶ್ರೀ ವೀರಭದ್ರ ಸ್ವಾಮಿ ಯುವಕರ ಸ್ನೇಹ ಬಳಗದ ವತಿಯಿಂದ 10ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕರ್ನಾಟಕ ಶಾಂತಿ ಸೌಹಾರ್ದತೆಯ ನಾಡಾಗಿದ್ದು ಕುವೆಂಪುರವರ ಮಾತಿನಂತೆ ಕರುನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು ಎಲ್ಲಾ ಭಾಷೆಯ ಜನರು ಇಲ್ಲಿ ವಾಸ ಮಾಡುತ್ತಿದ್ದಾರೆ. ಅನ್ಯ ಭಾಷಿಗರು ಕನ್ನಡವನ್ನು ಕಲಿತು ನಾಡಿನ ನಡೆ-ನುಡಿ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬದುಕಬೇಕಾಗಿದೆ ನೆಲ ಜಲ ಭಾಷೆ ವಿಚಾರವಾಗಿ ನಾಡಿಗೆ ಅನ್ಯಾಯವಾದರೆ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿ ನಮ್ಮ ತನವನ್ನು ಪ್ರದರ್ಶಿಸೋಣ ಎಂದು ತಿಳಿಸಿದರು.




ಈ ಸಂದರ್ಭದಲ್ಲಿ ಯುವಕರ ಸ್ನೇಹ ಬಳಗ ಅಧ್ಯಕ್ಷರಾದ ಪಿ.ಎಂ. ಪ್ರದೀಪ್ ಕುಮಾರ್, ಉಪಾಧ್ಯಕ್ಷ ಬಿ.ವಿ.ಸಂತೋಷ್ ಕುಮಾರ್, ನಗರಸಭೆ ಸದಸ್ಯರಾದ ರಮೇಶ್ ಗೌಡ, ರಾಘವೇಂದ್ರ, ಹೊಯ್ಸಳ ಗೋವಿಂದ, ಶಿಲ್ಪ ಮುರುಳೀಧರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಶಶಿಧರ, ಮುಖಂಡರುಗಳಾದ ಪ್ರಸನ್ನಕುಮಾರ್, ನಾಗರಾಜ್, ಸುಧಾ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು, ಯುವಕ ಸಂಘದ ಪದಾಧಿಕಾರಿಗಳು, ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.