
ಚಳ್ಳಕೆರೆ:ರಾಜಕೀಯ ಕಾರಣಗಳಿಗಾಗಿ ಟಿಪ್ಪು ಸುಲ್ತಾನರನ್ನು ವಿರೋಧಿಸದೆ ಒಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿ ಕಂಡಾಗ ಅವರ ಸಾಧನೆ ಅಪ್ರತಿಮವಾದದ್ದು ದೇಶದ ಸ್ವಾತಂತ್ರ್ಯಕ್ಕಾಗಿ ಅವರ ಹೋರಾಟ ತ್ಯಾಗ ಬಲಿದಾನ ನೆನೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು.

ನಗರದ ಶಾದಿ ಮಹಲ್ ನಲ್ಲಿ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವದಿಕೆ ಮತ್ತು ಮುಸ್ಲಿಂ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 274ನೇ ಟಿಪ್ಪು ಸುಲ್ತಾನ್ ಜಯಂತಿ ಹಾಗೂ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯದ ಕಾರಣಕ್ಕಾಗಿ ಇತಿಹಾಸವನ್ನು ತಿರುಚುವ ಕೆಲಸವಾಗುತ್ತಿದೆ ಆದರೆ ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ ಕೇವಲ ರಾಜಕೀಯದ ಲಾಭಕ್ಕಾಗಿ ಮುಸ್ಲಿಂ ಸಮುದಾಯವನ್ನು ದ್ವೇಷ ಭಾವನೆಯಿಂದ ಕಾಣುವುದು ಸರಿಯಲ್ಲ ಕೆಟ್ಟ ಕೆಲಸ ಮಾಡುವವರಿಗೆ ಕಾನೂನಿನಲ್ಲಿ ಶಿಕ್ಷೆಯಾಗುವ ಅವಕಾಶವಿದೆ ಹಾಗೆಂದ ಮಾತ್ರಕ್ಕೆ ಒಂದು ಜನಾಂಗವನ್ನೇ ದ್ವೇಷಿಸುವುದು ಸಂವಿಧಾನದ ಆಶಯಕ್ಕೆ ಧಕ್ಕೆ ತಂದಂತಾಗುತ್ತದೆ ಒಂದು ಜಾತಿ ಧರ್ಮವನ್ನು ಗುರಿಯಾಗಿಸಿಕೊಂಡು ರಾಜಕಾರಣ ಮಾಡುವ ಪದ್ಧತಿ ಹೋಗಬೇಕಾಗಿದೆ ಇತಿಹಾಸವನ್ನು ನೋಡಿದಾಗ ಸಾರೆ ಜಹಾಂಸೆ ಅಚ್ಚ ಗೀತೆಯನ್ನು ಮಹಮ್ಮದ್ ಇಕ್ಬಾಲ್ ಜೈ ಹಿಂದ್ ಘೋಷಣೆ ಮೊಳಗಿಸಿದವರು ಅಭಿಸಪ್ತಾನ್ ಹಸೇನ್ ಇಂಕಿಲಾಬ್ ಘೋಷಣೆಯನ್ನು ಹಜರತ್ ಮಹಾಲಿ ಭಾರತ ಬಿಟ್ಟು ತೊಲಗಿ ಘೋಷಣೆ ಜೋಸೆಫ್ ಯೋಹಾನ ಆಲಿ ಭಾರತದ ತ್ರಿವರ್ಣ ಧ್ವಜವನ್ನು ರಚಿಸಿದವರು ಮಹಿಳೆ ಸುನಯ ಇವರೆಲ್ಲ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.ಸರ್ವ ಜನಾಂಗದ ಹಿತವನ್ನು ಬಯಸುವ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.
ಕಾಂಗ್ರೆಸ್ ಮುಖಂಡ ಹೆಚ್ ಎಸ್ ಸೈಯ್ಯದ್ ಮಾತನಾಡಿ ಸೂರ್ಯ ಚಂದ್ರ ಇರುವವರೆಗೂ ಟಿಪ್ಪು ಸುಲ್ತಾನ್ ಹೆಸರನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಇತಿಹಾಸ ಗೊತ್ತಿಲ್ಲದವರು ಟಿಪ್ಪು ಸುಲ್ತಾನ್ ರವರನ್ನು ಟೀಕಿಸುತ್ತಾರೆ ಹೀಗಾಗಿ ಮುಸ್ಲಿಂ ಬಾಂಧವರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಟಿಪ್ಪು ಸುಲ್ತಾನ್ ರವರು ಅಪ್ರತಿಮ ದೇಶಭಕ್ತರಾಗಿದ್ದು ಕೇವಲ ಮಸೀದಿ ನಿರ್ಮಾಣವಲ್ಲದೆ ಹಿಂದೂ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ ಮದ್ಯಪಾನ ನಿಷೇಧ ರಾಕೆಟ್ ಉಡಾವಣೆ ಸೇರಿದಂತೆ ಹಲವಾರು ಯೋಜನೆಗಳನ್ನು ಅಂದಿನ ಕಾಲದಲ್ಲಿ ಜಾರಿಗೊಳಿಸಿ, ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಟಿಪ್ಪು ಸುಲ್ತಾನ್ ಹಿಂದುಗಳ ವಿರೋಧಿ ಎಂದು ರಾಜಕೀಯಕ್ಕಾಗಿ ಬಿಂಬಿಸಲಾಗುತ್ತದೆ ಭಾರತ ನೆಲದಲ್ಲಿ ಜನಿಸಿದ ಎಲ್ಲ ಧರ್ಮದವರು ಸಹೋದರ ಭಾವನೆ ಹೊಂದಿದ್ದಾರೆ ದೇಶದಲ್ಲಿ ಶಾಂತಿ ನೆಲೆಸಿರುವುದನ್ನು ಸಹಿಸಲಾಗದ ಕೆಲವರು ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿದ್ದಾರೆ ಅಂತಹ ಕೋಮು ಗಲಭೆ ಸೃಷ್ಟಿಸುವವರ ವಿರುದ್ಧ ಹೋರಾಡುವ ಅನಿವಾರ್ಯತೆ ಬಂದೊದಗಿದೆ ಭಾರತ ಸರ್ವ ಧರ್ಮದ ದೇಶವಾಗಿರುವುದರಿಂದ ಶಾಂತಿ ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ ಕನ್ನಡ ನಾಡು ನುಡಿ ರಕ್ಷಣೆಗೆ ದಕ್ಕೆ ಬಂದಾಗ ಎಲ್ಲಾ ಧರ್ಮಿಯರು ಒಂದಾಗಿ ಹೋರಾಟ ನಡೆಸಿ ತಮ್ಮ ರಾಜ್ಯದ ಪಾಲಿನ ಹಕ್ಕನ್ನು ಪಡೆಯುವಂತಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಅಧ್ಯಕ್ಷರಾದ ಪಿ.ಬಷೀರ್ ಹಯಾತ್, ನಗರಸಭೆ ಅಧ್ಯಕ್ಷೆ ಜೈತುನ್ ಬೀ, ಉಪಾಧ್ಯಕ್ಷೆ ಸುಜಾತ ಪ್ರಹ್ಲಾದ್, ನಗರಸಭೆ ಸದಸ್ಯರಾದ ರಮೇಶ್ ಗೌಡ, ರಾಘವೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಶಶಿಧರ, ಮುಖಂಡರುಗಳಾದ ಹೆಚ್.ಎಸ್.ಸೈಯದ್, ಮುಜೀಬ್, ನಗರಸಭೆ ನಾಮ ನಿರ್ದೇಶನ ಸದಸ್ಯರಾದ ಅನ್ವರ್ ಮಾಸ್ಟರ್, ದಾದಾಪೀರ್, ಅಲ್ಲಾಬಕಷ್, ಜುಬೇರ್, ಮೊಹಮ್ಮದ್ ಕಲಾಮಿ, ಪಟೇಲ್, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಸಮುದಾಯದವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.