September 15, 2025
Screenshot_20241130_173811.png

ಚಳ್ಳಕೆರೆ ನ.30.  ಪ್ರಗತಿ ಪರುಶೀಲನಾ ಸಭೆ ಅಧಿಕಾರಿಗಳ ಬದಲು ಕಚೇರಿ ಸಿಬ್ಬಂದಿಗಳು ಬಂದಿದ್ದು ಮತ್ತೆ ಮುಂದಿನ‌ಸಭೆ ಇದೇ ಮರುಕಳಿಸಿದರೆ ಸರಕಾರಕ್ಕೆ ಶಿಸ್ತು ಕ್ರಮಕ್ಕೆ ವರದಿ ಕಳಿಸಲಾಗುವುದು ಎಂದು ನಿರ್ದೇಶಕರು ಪರಿಶಿಷ್ಟ ವರ್ಗಗಗಳ ಕಲ್ಯಾಣಾಧಿಕಾರಿ ಹಾಗೂ ತಾಲೂಕು ಉಸ್ತುವಾರಿ ಅಧಿಕಾರಿ ಟಿ.ಯೋಗೇಶ್ ಖಡಕ್ ಎಚ್ಚರಿಕೆ ನೀಡಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ‌ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಡಾ.ಅಶೋಕ್ ಹಾಗೂ ಡಾ.ವಿರುಪಾಕ್ಷಪ್ಪ ಸಭೆಗೆ ಮಾಹಿತಿ ನೀಡುವಾಗ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಲ್ಲಿ‌ಕಡಿಮೆ ಖರ್ಚು ಹಾಗೂ ಕಡಿಮೆ ನೀರಿನಲ್ಲಿ‌ ಅತಿ ಹೆಚ್ಚು ಇಳುವರಿ ಕೊಡುವ ಬೆಳೆಗಳ‌ಬಗ್ಗೆ ರೈತರಿಗೆ ಅರಿವು ಮೂಡಿಸ ಬೇಕು.
ಇಲ್ಲಿ ಅತಿ ಹೆಚ್ಚು ಶೇಂಗಾ ಬೆಳೆ ಬೆಳೆಯುವುದರಿಂದ ನಿರುದ್ಯೋಗ ಹೋಗಲಾಡಿಸಲು ಶೇಂಗಾ ಮಿಠಾಯಿ ತಯಾರು ಮಾಡುವ ಗುಡಿ ಕೈಗಾರಿಕೆ ಹಾಗೂ ನರೇಗಾ ಯೋಜನೆಯಡಿಯಲ್ಲಿ ರೈತರಿಗೆ .ಕೂಲಿಕಾರ್ಮಿಕರಿಗೆ ಹೆಚ್ಚು ಕೂಲಿ ಕೆಲಸ ನೀಡುವಂತೆ ಸೂಚಿಸಿದರು.
ಕುಡಿಯುವ ನೀರು ಸರಬರಾಜು ಎಇಇ ದಯಾನಂದ್ ಸಭೆಗೆ ಮಾಹಿತಿ ನೀಡುವಾಗ ಯೋಗೇಶ್ ಮಾತನಾಡಿ ತಾಲೂಕಿನ‌ ಶಾಲಾ ಕಾಲೇಜು. ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜಲಜೀವನ್ ಮಿಷನ್ ಯೋಜನೆಯಡಿ ನಲ್ಲಿ‌ಸಂಪರ್ಕ ಕಲ್ಪಿಸುವಂತೆ ಸೂಚನೆ ನೀಡಿದರು.
ಬಿಇಒ ಸುರೇಶ್ ಸಭೆಗೆ ಮಾಹಿತಿ ನೀಡುವಾಗ ತಾಲೂಕಿನಲ್ಲಿ‌ಹತ್ತನೇ ತರಗತಿ ಫಲಿತಾಂಶ ಶೇ 100 ರ ಗಡಿ ಮುಟ್ಟ ಬೇಕು ಅತಿ ಕಡಿಮೆ ಫಲಿತಾಂಶವಿರುವ ಶಾಲೆಗಳಿಗೆ ತಾಲೂಕು ಮಟ್ಟದ ನೋಡೆಲ್ ಅಧಿಕಾರಿಗಳನ್ನು ನೇಮಿಸಿ‌ ವಿಶೇಷ ತರಗತಿಗಳನ್ನು ಮಾಡುವ ಮೂಲಕ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಪೌರಾಯುಕ್ತ ಜಗ್ಗರೆಡ್ಡಿ ಸಭೆಗೆ ಮಾಹಿತಿ ನೀಡುವಾಗ ಸರಕಾರದ ಅನುದಾನವನ್ನು ಕೇವಲ ಟೆಂಡರ್ ಕಾಮಗಾರಿಗಳಿಗೆ ಬಳಕೆ ಮಾಡಿಕೊಳ್ಳದೆ ಅದರ ಮೀಸಲು ಅನುದಾ‌ನದಲ್ಲಿ‌ ಪಿಯುಸಿ ನಂತರದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಸಹಕಾರಿಯಾಗುವಂತಹ ಪುಸ್ತಕ ಹಾಗೂ ತರಬೇತಿ ಕೊಡಿಸುವಂತೆ ಸೂಚಿಸಿದರು.
ತಾಲೂಜು ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಕಾಲಕಳೆಯದೆ ಗ್ರಾಮೀಣ ಪ್ರದೇಶಗಳಿಗೆ ಭೇಡಿ ನೀಡಿ ಜನರೊಂದಿಗೆ ಬೆರೆತು ಸಮಸ್ಯೆಗಳನ್ನು ಹರಿತು ಸರಕಾರದ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸ ಬೇಕು.
ಪ್ರಗತಿ ಪರಿಶೀಲನಾ ಸಭೆ ನಡೆಸಲು ನಾನು ಬೆಂಗಳೂರಿನಿಂದ ಬಂದಿದ್ದೇನೆ ಆದರೆ ಬಹುತೇಕ ಅಧಿಕಾರಿಗಳು ಕುಂಠು ನೆಪ ಹೇಳಿ ಸಭೆಗೆ ಬಾರದೆ ಸಿಬ್ಬಂದಿಗಳನ್ನು ಕಳಿಸಿದ್ದಾರೆ ಮತ್ತೆ ಇಂತಹ ಘಟನೆ ಮರುಕಳಿಸಬಾರದು ಅಧಿಕಾರಿಗಳನ್ನು ಹತೋಟಿಗೆ ತೆಗೆದುಕೊಳ್ಳುವಂತೆ ತಹಶೀಲ್ದಾರ್ ರೇಹಾನ್ ಪಾಷ ಹಾಗೂ ತಾಪಂ ಇಒ ಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪರಿಶಿಷ್ಟಕಲ್ಯಾಣಾಧಿಕಾರಿ ದಿವಾಕರ್ . ತಹಶೀಲ್ದಾರ್ ರೇಹಾನ್ ಪಾಷ. ತಾಪಂ ಸಹಾಯಕ ನಿರ್ದೇಶಕ ಸಂಪತ್ . ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading