December 14, 2025
1761835919952.jpg

ಬೆಂಗಳೂರು ಅ.30 ಕರ್ನಾಟಕ ರಾಜ್ಯ ಉನ್ನತ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಂಯುಕ್ತ ಸಭೆ

ಇಂದು ನಡೆದ ಈ ಮಹತ್ವದ ಸಭೆಯಲ್ಲಿ ಮಾನ್ಯ ಶರಣ ಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವರು, ಮಾನ್ಯ ಡಾ. ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವರು, ನಾನು ಡಿ. ಸುಧಾಕರ್, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವನಾಗಿ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಭಗವಾನ್, ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳು ಹಾಗೂ ಕೈಗೊಂಡ ನಿರ್ಣಯಗಳು

1. ಸಿ.ಎಂ.ಸಿ.ಆರ್.ಐ., ಚಿತ್ರದುರ್ಗ ಸಂಸ್ಥೆಯ ಕುರಿತು:
ನಿರ್ದೇಶಕರಾದ ಡಾ. ಬಿ.ವೈ. ಯುವರಾಜ್ ಅವರು ದಾವಣಗೆರೆ ವಿಶ್ವವಿದ್ಯಾಲಯದ ಜ್ಞಾನಗಂಗೋತ್ರಿ ಆವರಣದಲ್ಲಿ ಇರುವ ಸ್ನಾತಕೋತ್ತರ ಕೇಂದ್ರದಲ್ಲಿ ಈಗಾಗಲೇ 03 ಕೊಠಡಿಗಳನ್ನು ಎಂ.ಒ.ಯು. ಮೂಲಕ ಪಡೆದಿರುವುದಾಗಿ, ಹಾಗೂ ಇನ್ನು ಹೆಚ್ಚಿನ 09 ಕೊಠಡಿಗಳನ್ನು ಪೂರೈಸಲು ದಾವಣಗೆರೆ ವಿಶ್ವವಿದ್ಯಾಲಯದಿಂದ ಕ್ರಮಕೈಗೊಳ್ಳಲು ಸಭೆಯಲ್ಲಿ ವಿನಂತಿಸಿದರು.

2. ಕಾಲೇಜು ಸ್ಥಳಾಂತರ ಕುರಿತು:
ನಾನು ಹಾಗೂ ಚಳ್ಳಕೆರೆ ಶಾಸಕರಾದ ಶ್ರೀ ರಘುಮೂರ್ತಿ ಅವರು, ಹೊಸದಾಗಿ ನಿರ್ಮಾಣಗೊಂಡಿರುವ ಚಿತ್ರದುರ್ಗ ಜಿಲ್ಲಾ ಕಚೇರಿಯ ಕಟ್ಟಡಕ್ಕೆ (DC Office Complex) ಸಿ.ಎಂ.ಸಿ.ಆರ್.ಐ. ಚಿತ್ರದುರ್ಗ ಸಂಸ್ಥೆಯನ್ನು ಸ್ಥಳಾಂತರಿಸುವಂತೆ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸಭೆಯಲ್ಲಿ ಸೂಚನೆ ನೀಡಿದೆವು.
ಈ ಕುರಿತು ಈಗಾಗಲೇ ಚಿತ್ರದುರ್ಗ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆದಿದ್ದು, ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

3. ಪ್ರಧಾನ ಕಾರ್ಯದರ್ಶಿಗಳ ಕ್ರಮ:
ಪ್ರಧಾನ ಕಾರ್ಯದರ್ಶಿಗಳು (ವೈದ್ಯಕೀಯ ಶಿಕ್ಷಣ) ಸಭೆಯಲ್ಲಿ ಈ ಕುರಿತು ಆದೇಶ ಹೊರಡಿಸಿರುವುದಾಗಿ ತಿಳಿಸಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಪರಿಣಿತ ಅಧಿಕಾರಿಗಳ ಸಮಿತಿಯನ್ನು ಸ್ಥಳ ಪರಿಶೀಲನೆಗೆ ಕಳುಹಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ನಿರ್ಧಾರಕ್ಕೆ ಮಾನ್ಯ ಶರಣ ಪ್ರಕಾಶ್ ಪಾಟೀಲ್ ಸಚಿವರು ಸಹಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರ ಕ್ರಮ ಕೈಗೊಳ್ಳಲು ಸೂಚಿಸಿದರು.

4. ಹೊಸ ಡಿಸಿ ಕಚೇರಿಯ ಹಸ್ತಾಂತರ:
ಸಿ.ಎಂ.ಸಿ.ಆರ್.ಐ. ಸಂಸ್ಥೆಗೆ ಹೊಸದಾಗಿ ನಿರ್ಮಿಸಲಾದ ಡಿಸಿ ಕಚೇರಿಯನ್ನು ಹಸ್ತಾಂತರಿಸಿಕೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.
ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ನಿರ್ಧರಿಸಲಾಯಿತು.

5. ವಿದ್ಯಾರ್ಥಿಗಳ ಶೈಕ್ಷಣಿಕ ಸೌಲಭ್ಯ:
ಸಭೆಯಲ್ಲಿ MBBS ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಇಲ್ಲದಿರುವ ಕುರಿತು ಚರ್ಚಿಸಲಾಯಿತು.
ಕನಿಷ್ಠ 04 ಬಸ್ಸುಗಳನ್ನು ಸಿ.ಎಂ.ಸಿ.ಆರ್.ಐ. ಚಿತ್ರದುರ್ಗ ಸಂಸ್ಥೆಗೆ ಒದಗಿಸಲು DMF ಅಥವಾ CSR ಅನುದಾನದಲ್ಲಿ ಪೂರೈಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಈ ಕುರಿತು ಮಾನ್ಯ ಉನ್ನತ ಶಿಕ್ಷಣ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಸಹಮತ ವ್ಯಕ್ತಪಡಿಸಿದರು, ಜೊತೆಗೆ ಚಳ್ಳಕೆರೆ ಶಾಸಕರಾದ ಶ್ರೀ ರಘುಮೂರ್ತಿ ಕೂಡ ಬಸ್ಸುಗಳನ್ನು ಒದಗಿಸುವುದಕ್ಕೆ ಒಪ್ಪಿಗೆ ನೀಡಿದರು.

6. ಹಾಸ್ಟೆಲ್ ಕಟ್ಟಡ ನಿರ್ಮಾಣ:
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಿಸುತ್ತಿರುವ ಸಿ.ಎಂ.ಸಿ.ಆರ್.ಐ. ಹಾಸ್ಟೆಲ್ ಕಟ್ಟಡದ 03 ಹಂತಗಳು ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಒಂದು ವಾರದೊಳಗೆ ಹಸ್ತಾಂತರಿಸಲಾಗುವುದು ಎಂದು ಕಾರ್ಯಪಾಲಕ ಅಭಿಯಂತರರು ಸಭೆಯಲ್ಲಿ ತಿಳಿಸಿದರು.

7. ಪ್ರಯೋಗಶಾಲೆ ಹಾಗೂ ತರಗತಿ ಕೊಠಡಿ ವಿಸ್ತರಣೆ:
ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿಗಳು, ಹಾಲಿ ಸ್ನಾತಕೋತ್ತರ ಕೇಂದ್ರದ ಮೇಲ್ಮಹಡಿಯಲ್ಲಿ ಖಾಲಿ ಇರುವ ಸ್ಥಳದಲ್ಲಿ ಪ್ರಯೋಗಶಾಲೆ ಹಾಗೂ ಬೋಧನಾ ಕೊಠಡಿಗಳನ್ನು ನಿರ್ಮಿಸಿಕೊಳ್ಳಬಹುದೆಂದು ಅಭಿಪ್ರಾಯಪಟ್ಟರು.
ಅದೇ ವೇಳೆ ವಿಕಲಚೇತನ ವಿದ್ಯಾರ್ಥಿಗಳಿಗೆ ಲಿಫ್ಟ್ ಇಲ್ಲದಿರುವುದರಿಂದ ತರಗತಿಗಳಿಗೆ ಹಾಜರಾಗಲು ತೊಂದರೆಯಾಗುತ್ತಿದೆ ಎಂದು ಸೂಚಿಸಲಾಯಿತು.
ಈ ಕುರಿತು ಅಭಿಯಂತರರೊಂದಿಗೆ ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಯಿತು.

8. ಸಂಸ್ಥೆಯ ಕುಂದು-ಕೊರತೆ ಪರಿಹಾರ ಕ್ರಮ:
ಸಭೆಯಲ್ಲಿ ಸಿ.ಎಂ.ಸಿ.ಆರ್.ಐ. ಚಿತ್ರದುರ್ಗ ಸಂಸ್ಥೆಯಲ್ಲಿ ಯಾವುದೇ ಸಮಸ್ಯೆಗಳು ಎದುರಾದರೆ, ನಿರ್ದೇಶಕರು ನೇರವಾಗಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ (ನನ್ನೊಂದಿಗೆ) ಚರ್ಚಿಸಿ ಪರಿಹಾರ ಕಂಡುಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.
ಈ ವೇಳೆ ಚಳ್ಳಕೆರೆ ಶಾಸಕರಾದ ಶ್ರೀ ರಘುಮೂರ್ತಿ ಸಹಮತ ವ್ಯಕ್ತಪಡಿಸಿ, “ನಾವೆಲ್ಲರೂ ಸಂಸ್ಥೆಯ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ” ಎಂದು ಹೇಳಿದರು.

ಸಭೆಯು ಚಿತ್ರದುರ್ಗದ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ.
ಉನ್ನತ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಂಯೋಜನೆಯಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳು, ಮೂಲಸೌಕರ್ಯ ಮತ್ತು ಸಂಶೋಧನಾ ಅವಕಾಶಗಳು ಲಭ್ಯವಾಗಲಿವೆ.

T Raghumurthy Dr MC Sudhakar Dr.Sharan Prakash Patil Indian National Congress – Karnataka Chief Minister of Karnataka

#CMCRIChitradurga #MedicalEducation #HigherEducation #DavangereUniversity #ChitradurgaDevelopment #DSudhakar #KarnatakaGovernment

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading