ಹಿರಿಯೂರು :
ನಮ್ಮ ರೆಡ್ ಕ್ರಾಸ್ ಸಂಸ್ಥೆಯು ಜನಪರ ಕಾಳಜಿ ಹೊಂದಿರುವ ಸಂಸ್ಥೆಯಾಗಿದ್ದು, ನಮ್ಮ ಸಂಸ್ಥೆ ಆರೋಗ್ಯ ಶಿಬಿರಗಳನ್ನು ನಡೆಸುವುದರ ಜೊತೆಗೆ ವಿವಿಧ ಸಮಾಜಸೇವೆ ಸಹ ಮಾಡುವ ಉದ್ದೇಶಹೊಂದಿದ್ದು, ಈ ನಿಟ್ಟಿನಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಸಹ ನೆರವು ನೀಡುತ್ತಿದ್ದು, ಪಿ.ಹೆಚ್.ಡಿ.ವ್ಯಾಸಂಗ ಮಾಡುವ ವಿದ್ಯಾರ್ಥಿ ಎಸ್.ಜಿ.ರಂಗಸ್ವಾಮಿಸಕ್ಕರ ರವರಿಗೆ ರೆಡ್ ಕ್ರಾಸ್ ಸದಸ್ಯರ ಸಹಭಾಗಿತ್ವದಲ್ಲಿ ಸುಮಾರು 30 ಸಾವಿರ ರೂಗಳ ಸಹಾಯಧನ ನೀಡಲಾಗುತ್ತಿದೆ ಎಂಬುದಾಗಿ ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್ ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪಿ.ಹೆಚ್.ಡಿ.ವ್ಯಾಸಂಗ ಮಾಡುವ ವಿದ್ಯಾರ್ಥಿ ಎಸ್.ಜಿ.ರಂಗಸ್ವಾಮಿಸಕ್ಕರ ರವರಿಗೆ ಸಹಾಯಧನ ವಿತರಣೆ ಹಾಗೂ ಹೊಸದಾಗಿ ನೇಮಕವಾಗಿರುವ 45 ಜನ ಪೌರಕಾರ್ಮಿಕರಿಗೆ ಟ್ರಾವಲಿಂಗ್ ಬ್ಯಾಗ್ ವಿತರಣೆ ಹಾಗೂ ಪೌರಕಾರ್ಮಿಕರ ಕಚೇರಿಗೆ 1 ಟೇಬಲ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.



ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕರಾದ ಹೆಚ್.ಎನ್.ಬಸವರಾಜ್ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಖಜಾಂಚಿಯಾದ ಸಣ್ಣಭೀಮಣ್ಣನವರದು ಹೆಸರು ಸಣ್ಣದಾದರೂ ಅವರ ವ್ಯಕ್ತಿತ್ವ ದೊಡ್ಡದು, ಪಿ.ಹೆಚ್.ಡಿ.ವ್ಯಾಸಂಗ ಮಾಡುವ ವಿದ್ಯಾರ್ಥಿ ಎಸ್.ಜಿ.ರಂಗಸ್ವಾಮಿಸಕ್ಕರ ರವರಿಗೆ ವೈಯಕ್ತಿಕವಾಗಿ 20 ಸಾವಿರ ರೂಗಳ ಸಹಾಯಧನ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ, ಇವರ ಈ ಸೇವಾ ಮನೋಭಾವ ನಿಜಕ್ಕೂ ಅರ್ಥಪೂರ್ಣವಾಗಿದೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪರವರು ಮಾತನಾಡಿ, ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದ ಸಕ್ಕರರಂಗಸ್ವಾಮಿಯವರು ಯುವಪೀಳಿಗೆಗೆ ಆದರ್ಶಪ್ರಾಯರು ಎಂದರಲ್ಲದೆ, ಇದೀಗ ಪಿ.ಹೆಚ್.ಡಿ.ವ್ಯಾಸಂಗ ಮಾಡುತ್ತಿರುವ ಉಪನ್ಯಾಸಕ ಎಸ್.ಜಿ.ರಂಗಸ್ವಾಮಿಸಕ್ಕರ ರವರಿಗೆ ವಾಣಿವಿಲಾಸ ವಿದ್ಯಾಸಂಸ್ಥೆ ವತಿಯಿಂದ 10 ಸಾವಿರ ರೂಗಳ ಕೊಡುಗೆ ನೀಡಿ, ಅವರ ಭವಿಷ್ಯ ಉಜ್ವಲವಾಗಲಿ ಎಂಬುದಾಗಿ ಶುಭಹಾರೈಸಿದರು.
ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರೆಡ್ ಕ್ರಾಸ್ ಎ.ರಾಘವೇಂದ್ರರವರು ನಮ್ಮ ನಗರ ಸ್ವಚ್ಛವಾಗಿರಬೇಕಾದರೆ, ನಾವು ಆರೋಗ್ಯವಾಗಿರಬೇಕಾದರೆ ನಮ್ಮ ಪೌರಕಾರ್ಮಿಕರು ಕಾರಣ, ಇವರ ಸೇವೆಯನ್ನು ಗುರುತಿಸಿರುವ ರೆಡ್ ಕ್ರಾಸ್ ಸಂಸ್ಥೆ ಇಂತಹ ಪೌರಕಾರ್ಮಿಕರನ್ನು ಕರೆದು ಅವರಿಗೆ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಟ್ರಾವಲಿಂಗ್ ಬ್ಯಾಗ್ ನೀಡಿ, ಗೌರವಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸವಾಗಿದೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ರೆಡ್ ಕ್ರಾಸ್ ಸಂಸ್ಥೆ ಸದಸ್ಯರಾಗಿರುವ ವಾಣಿವಿಲಾಸ ವಿದ್ಯಾಸಂಸ್ಥೆ ಶಿಕ್ಷಕಿಯರಿಗೆ ಡಾಕ್ಯುಮೆಂಟ್ ಫೈಲ್ ಹಾಗೂ ಪೌರಕಾರ್ಮಿಕರಿಗೆ ಟ್ರಾವಲಿಂಗ್ ಬ್ಯಾಗ್ ಹಾಗೂ ಪೌರಕಾರ್ಮಿಕರ ಕಚೇರಿಗೆ ಟೇಬಲ್ ವಿತರಿಸಲಾಯಿತು. ಜೊತೆಗೆ ರೆಡ್ ಕ್ರಾಸ್ ಹಿರಿಯ ಸದಸ್ಯರಾದ ಎಲ್.ಆನಂದಶೆಟ್ಟಿ, ಡಾ.ಪ್ರಸನ್ನ ಕುಮಾರ್, ಸಣ್ಣಭೀಮಣ್ಣ, ಇವರುಗಳನ್ನು ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಹನುಮಂತರಾಜು, ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರುಗಳಾದ ಪ್ರೋ.ಬಿ.ಕೆ.ನಾಗಣ್ಣ, ಎಸ್.ಜೋಗಪ್ಪ, ಎಂ.ಎಸ್.ರಾಘವೇಂದ್ರ, ಎ.ರಾಘವೇಂದ್ರ, ಎಲ್.ಆನಂದಶೆಟ್ಟಿ, ಟಿ.ಮಲ್ಲೇಶಪ್ಪ, ಡಾ.ಪ್ರಸನ್ನಕುಮಾರ್, ಎಸ್.ಎಲ್.ರಂಗಸ್ವಾಮಣ್ಣ, ತ್ರಿಯಂಬಕೇಶ್ವರ್, ಜನೌಷಧಿ ರವಿ, ಸೇರಿದಂತೆ ಪೌರಕಾರ್ಮಿಕರು, ವಾಣಿವಿಲಾಸ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಕೋ-ಆರ್ಡಿನೇಟರ್ ಗಳಾದ ಶ್ರೀಮತಿ ನಂದಿನಿ, ಶ್ರೀಮತಿ ರಚನಾ, ಶ್ರೀಮತಿ ರಂಜಿತಾ, ಶ್ರೀಮತಿ ಗಂಗಮ್ಮ, ಶ್ರೀಮತಿ ಭಾಗ್ಯ, ಶ್ರೀಮತಿ ಜಯಸುಧಾ, ಶ್ರೀಮತಿ ಹೇಮಲತಾ, ಶ್ರೀಮತಿ ಸಾಕಮ್ಮ, ಕುಮಾರಿ ಪೂಜಾ,ಉಮೇಶ್ ಯಾದವ್, ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.