March 16, 2026
n6372640741730307271379b667f7e35fb2ad1093fe558d2994f7199588d681ccb5f4359b74f2369b96d145.jpg

ಮೊಳಕಾಲ್ಮೂರು ಸ.30. ಅಕ್ರಮ ಗಾಂಜ ಸಾಗಿಸುತ್ತಿದ್ದ ಆರೋಪಿಯನ್ನು ಅಬಕಾರಿ ಪೋಲಿಸ್ ಅಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಣೆ ಮಾಡುತ್ತಿದ್ದ ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದ ಮೆಹಬೂಬ್‌ ಸುಬಾನ್‌ ಬಂಧಿತ. ಆತ ತಾಲ್ಲೂಕಿನ ರಾಯಾಪುರ ಬಳಿಯ ಕೊಂಟೋಬಯ್ಯನಹಟ್ಟಿ ಕ್ರಾಸ್‌ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಕಂಡು ಗಸ್ತಿನಲ್ಲಿದ್ದ ಅಬಕಾರಿ ಪೋಲಿಸರು ಪರಿಶೀಲಿಸಿದಾಗ ಅರ್ಧ ಕೆ.ಜಿ.ಯಷ್ಟು ಒಣ ಗಾಂಜಾ ಸಾಗಣೆ ಮಾಡುತ್ತಿರುವುದು ಪತ್ತೆಯಸಗಿದೆಎಂದು ತಾಲ್ಲೂಕು ಅಬಕಾರಿ ನಿರೀಕ್ಷಕ ಮೊಹಮದ್‌ ಸಾದತ್‌ ಉಲ್ಲಾ ತಿಳಿಸಿದ್ದಾರೆ.

ಆರೋಪಿಯನ್ನು ಮತ್ತು ಕೃತ್ಯಕ್ಕೆ ಬಳಕೆ ಮಾಡಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆ ವೇಳೆ ಸಿಬ್ಬಂದಿ ತಿಮ್ಮರಾಜು, ಅರುಣ್‌ ಕುಮಾರ್‌ ಮತ್ತು ಪರಶುರಾಮ್‌ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading