March 22, 2026
n6372640831730306687021ebd4bff1e882ea683572f652c9b32bcd79fa8f3fbe8ef989ae7dfd605e3c0b49.jpg

ಚಳ್ಳಕೆರೆ ಅ.30  ಬಿಸಿಯೂಟ ತಯಾರಿಸುವ ವೇಳೆ ಕುಕ್ಕರ್ ಸಿಡಿದು ಅಡುಗೆ ಸಹಾಯಾಕಿ ಗಾಯಗೊಂಡ ಘಟನೆ ನಡೆದಿದೆ.

ತಾಲೂಕಿನ‌ ಮನುಮೈನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿಸುವಾಗ ಕುಕ್ಕರ್ ಸಿಡಿದು ಮುಖ್ಯ ಅಡುಗೆ ತಯಾರಕಿ
ನೀರುಬಾಯಿ (45) ಗಾಯಗೊಂಡಿದ್ದಾರೆ.

ಘಟನೆ ವಿವರ: ಮನುಮೈನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 173 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಬುಧವಾರ ಎಂದಿನಂತೆ ಶಾಲೆಯ ಹಿರಿಯ ಅಡುಗೆ ತಯಾರಕಿ ನೀರುಬಾಯಿ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿಸಲು ಮುಂದಾಗಿದ್ದರು.

ಕುಕ್ಕರ್‌ನಲ್ಲಿ ಬೇಳೆಕಾಳು ಬೇಯಿಸಲು ಇಟ್ಟಿದ್ದರು. ತುಂಬ ಹೊತ್ತಾದರೂ ಕುಕ್ಕರ್ ಸೀಟಿ ಹೊಡೆಯದಿರುವುದನ್ನು ಗಮನಿಸಿದ ನೀರುಬಾಯಿ ಅದರ ಲೆಡ್ ತೆರೆದಿದ್ದಾರೆ. ತಕ್ಷಣವೇ ಕುಕ್ಕರ್ ಸ್ಪೋಟಗೊಂಡಿದೆ. ಅವರ ಎದೆ, ಕೈಗಳು ಸೇರಿ ದೇಹದ ಹಲವು ಭಾಗಗಳಲ್ಲಿ ಗಂಭೀರ ಸ್ವರೂಪದ ಸುಟ್ಟಗಾಯಗಳಾಗಿವೆ. ತಕ್ಷಣವೇ ಶಾಲೆಯ ಮುಖ್ಯಶಿಕ್ಷಕ ವಿಜಯ್ ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮರಳಿ ಶಾಲೆಗೆ ಕರೆತಂದಿದ್ದಾರೆ.

ನಂತರ ನೀರುಬಾಯಿ  ಪತಿ ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ನೀರುಬಾಯಿ 20 ವರ್ಷಗಳಿಂದ ಶಾಲೆಯಲ್ಲಿ ಹಿರಿಯ ಅಡುಗೆ ತಯಾರಕರಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading