December 15, 2025
IMG-20241030-WA0240.jpg

ಚಳಕೆರೆ : ಕಾಲುವೆಹಳ್ಳಿ ಗ್ರಾಮದ ದಲಿತರಿಗೆ ಕ್ಷೌರ ಮಾಡುವುದಿಲ್ಲ ಎಂದು ಜಾತಿ ನಿಂಧನೆ ಮಾಡಿದಂತಹ ಪ್ರಕರಣಕ್ಕೆ ಇಂದು ಜಿಲ್ಲಾ ಮಟ್ಟ ತಾಲೂಕು ಮಟ್ಟದ ಅಧಿಕಾರಗಳು ಗ್ರಾಮದಲ್ಲಿ ಸಭೆ ನಡೆಸಿದ್ದರು.

ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮಕ್ಕೆ ದಲಿತ ಮುಖಂಡರು, ಹಾಗೂ ಎಲ್ಲಾ ಸಮಯದ ಮುಖಂಡ ಸಮಕ್ಷಮದಲ್ಲಿ ಸಭೆ ನಡೆಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ ಬಂಡಾರು, ಹಾಗೂ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಎಸ್ ಜೆ.ಕುಮಾರಸ್ವಾಮಿ, ಜಿಲ್ಲಾ ಉಪವಿಭಾಗ ಅಧಿಕಾರಿ ಕಾರ್ತಿಕ್, ತಹಶಿಲ್ದಾರ್ ರೇಹಾನ್ ಪಾಷ, ಸಮಾಜಕಲ್ಯಾಣ ಅಧಿಕಾರಿ ದೇವ್ಲಾನಾಯ್ಕ್ , ಪಿಎಸ್ಐ ಲೋಕೇಶ್, ಈಗೇ ಹಲವು ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡಿ ಸಭೆ ನಡೆಸಿದ್ದಾರೆ.

ಸ್ವಾತಂತ್ರ ಬಂದು 75 ವರ್ಷಗಳ ಕಳೆದರೂ ಇನ್ನೂ ಕಾಲುವೆಹಳ್ಳಿ ಗ್ರಾಮದಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದೆ ಆದ್ದರಿಂದ ನಮಗೆ ಕೂಡಲೇ ನ್ಯಾಯಾಂಗ ವ್ಯವಸ್ಥೆಯಲ್ಲಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಾಲುವೆಹಳ್ಳಿ ಗ್ರಾಮದ ದಲಿತ ಯುವಕರು, ಮುಖಂಡರು ಸಭೆಯಲ್ಲಿ ಮನವಿ ಮಾಡಿದರು.

ಅದರಂತೆ ಗ್ರಾಮದ ಇರುವಂತಹ ಸಮಸ್ಯೆಯಗಳ ಬಗ್ಗೆ ಗ್ರಾಮಸ್ಥರಿಂದ ವಿಚಾರಿಸಿದಂತ ಅಧಿಕಾರಿ ವರ್ಗ ಈ ಕೂಡಲೇ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಅಸ್ಪೃಶ್ಯತೆ ಇರಕೂಡದು, ಸರ್ವರಿಗೂ ಸಮಾನತೆ ಹಕ್ಕು ಸಿಗುವಂತೆ ಹಾಗಬೇಕು, ನಿಮ್ಮ ರಕ್ಷಣೆಗೆ ನಾವು ಇದ್ದೆವೆ ಎಂದು ಜಿಲ್ಲಾ ಉಪವಿಭಾಗ ಅಧಿಕಾರಿ ಕಾರ್ತಿಕ್ ಹೇಳಿದರು.

ಇನ್ನೂ ಜಿಲ್ಲಾ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ಮಾತನಾಡಿ, ಇಂತಹ ಯುಗದಲ್ಲಿ ಕಾಲುವೆಹಳ್ಳಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಎಂಬ ವರದಿಗಳು ಬರುತ್ತವೆ ಎಂದರೆ ನಾಚಿಗೇಡಿತನ ನಮ್ಮೆಲ್ಲರಿಗೂ ಶೋಭೆ ತರುವಂತದ್ದಲ್ಲ ಆದ್ದರಿಂದ ಈ ಕೂಡಲೇ ಕ್ಷೌರ ಮಾಡುವವನ ಹಾಗೂ ದಲಿತ ಯುವಕನ ಜೊತೆಗೆ ದೂರವಾಣಿ ಸಂಪರ್ಕದ ಮೂಲಕ ಮಾತನಾಡಿದಂತಹ ಮುಖಂಡರನ್ನು ನಾವು ಪೊಲೀಸ್ ವಶಕ್ಕೆ ಪಡೆದು ದಲಿತ ಯುವಕರು ಕೇಸ್ ದಾಖಲಿಸದಿದ್ದೆರು ಸುಮೋಟೋ ಪ್ರಕರಣದಲ್ಲಿ ಅವರಿಗೆ ಶಿಕ್ಷೆ ಕೊಡಿಸುತ್ತೆ, ಇಂತಹ ಪ್ರಕರಣಗಳು ಮತ್ತೆ ಎಲ್ಲಿಯೂ ಕೂಡ ಹಾಗಬಾರದು, ಆದ್ದರಿಂದ ಕ್ಷೌರ ಮಾಡುವ ಅಂಗಡಿಯವ ಸಮಾನತೆಯಾಗಿ ಎಲ್ಲಾರೋಟ್ಟಿಗೆ ಇದ್ದರೆ ಸರಿ ಇಲ್ಲವಾದರೆ ಕ್ಷೌರದ ಅಂಗಡಿಯನ್ನು ತೆರುವುಗೊಳಿಸಲಾಗುತ್ತದೆ, ಇನ್ನೂ ನ್ಯಾಯಬೆಲೆ ಅಂಗಡಿ ಮಾಲೀಕ ಸಮಾನತೆ ಕಾಪಾಡಬೇಕು ಇಲ್ಲವಾದರೆ ಕ್ರಮಕೈಗೊಳ್ಳಬೇಕಾಗಯತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಇನ್ನು ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಯಲ್ಲಕ್ಕ ಸಭೆಯಲ್ಲಿ ಮಾತನಾಡಿ, ಸ್ವಾಮಿ ನಮ್ಮ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಶೋಷಣೆ ನಡೆಯುತ್ತಿದೆ, ನಮ್ಮ ಗಂಡು ಮಕ್ಕಳಿಗೆ ಕ್ಷೌರ ಕಟಿಂಗ್ ಮಾಡುವುದಿಲ್ಲ, ಅದರಂತೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರಲು ಅಂಗಡಿಯಿಂದ ದೂರ ನಿಲ್ಲಬೇಕು, ಹೀಗೆ ಹಲವಾರು ಶೋಷಣೆಗಳು ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿವೆ, ಕ್ಷೌರ ಮಾಡಿಸಲು ದೂರದ ಊರಿಗೆ ತೆರಳಿಬೇಕು ಗ್ರಾಮದಲ್ಲಿ ಕ್ಷೌರದ ಅಂಗಡಿ ಇದ್ದರು ದಲಿತರಿಗೆ ಮಾಡುವುದಿಲ್ಲ, ನನ್ನ ಮೊಮ್ಮಗ ಶಾಲೆಗೆ ಹೋಗುವ ವಿದ್ಯಾರ್ಥಿ ಅಜ್ಜಿ ನಮ್ಮ ಗ್ರಾಮದಲ್ಲಿ ಕ್ಷೌರದ ಅಂಗಡಿ ಇದೆ ನನ್ನ ಎಲ್ಲಾ ಗೆಳೆಯರು ಕ್ಷೌರ ಇಲ್ಲಿಯೇ ಮಾಡಿಸುತ್ತಾರೆ ಆದರೆ ನಮ್ಮ ಜನಕ್ಕೆ ಯಾಕೆ ಮಾಡುವುದಿಲ್ಲ ಎಂದು ಪ್ರಶ್ನೆ ಮಾಡುತ್ತಾನೆ ಇದರಿಂದ ಹೇನು ಹೇಳದೆ ಅಳು ಬರುತ್ತೆ ಸ್ವಾಮಿ ಶಾಲೆಗೆ ಹೋಗುವ ಮಕ್ಕಳಿಗೆ ಶೋಷಣೆ ಎಂಬುದು ಮನವರಿಕೆ ಹಾಗುವ ಮುಂಚೆ ಇತಂಹ ಘಟನೆಗಳು ಮರುಕಳಿಸದಂತೆ ಸಮಾನತೆ ನೀಡಿ ಎಂದರು.

ಇನ್ನು ಗ್ರಾಮದ ದೇವರಿಗೆ ಹಬ್ಬ ಹರಿದಿನಗಳಲ್ಲಿ ದಲಿತರಿಂದ ರಥೋತ್ಸವಕ್ಕೆ ಹೂವುಮಾಲೆ ಹಾಕುವ ಹಾಗಿಲ್ಲ, ದಲಿತರು ಹೂವುಮಾಲೆ ಹಾಕಿದರೆ ಅಸ್ಪೃಶ್ಯತೆಯಾಗುತ್ತದೆ ಆದ್ದರಿಂದ ನೀವು ಹಾಕಬೇಡಿ ಎನ್ನುವ ಇಲ್ಲಿನ ಕೆಲವರು ಹೇಳುತ್ತಾರೆ,

ಹೀಗೆ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಪಂಗಡ ಜನಾಂಗಕ್ಕೂ ಹಾಗೂ
ಅತೀ‌ ಕಡಿಮೆ ಸಂಖ್ಯೆಯಲ್ಲಿ ಇರುವ ದಲಿತರಿಗೆ ರಕ್ಷಣೆ ನೀಡಿ ದಲಿತರ ಕೇರಿಗಳಿಗೆ ಸಮಾಜಕವಾಗಿ ಸಮಾನತೆ ಕಲ್ಪಿಸಿ ಕೊಡಬೇಕೆಂದು ದಲಿತ ಯುವಕರ ಒಕ್ಕೂರಲಾಗಿತ್ತು.

ಇದೇ ಸಂಧರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಸಂಚಾಲಕ ಟಿ.ವಿಜಯ್ ಕುಮಾರ್, ಹೊನ್ನುರಸ್ವಾಮಿ, ಚನ್ನಗಾನಹಳ್ಳಿ ಮಲ್ಲೆಶ್, ಮೊರಾರ್ಜಿ, ಭೀಮ ಆರ್ಮಿ ಸಂಘದ ಬಳ್ಳಾರಿಯ ಯುವ ಮುಖಂಡರು,
ಅಂಬೇಡ್ಕರ್ ಸ್ವಾಭಿಮಾನಿ ಸಂಘದ ಪದಾಧಿಕಾರಿಗಳು,
ಮಹಾನಾಯಕ ದಲಿತ ಸೇನೆಯ ರಾಜ್ಯ ಕಾರ್ಯದರ್ಶಿ ನನ್ನಿವಾಳ ಬಸವರಾಜ್, ನಾಗರಾಜ್, ಸುರೇಶ್,, ವಿನೋದ ಕುಮಾರ್,
ವಸಂತ ಕುಮಾರ್ ,ಅಜೀತ್ ಕುಮಾರ್, ರಾಜು, ಬಸವರಾಜ್, ತಿಪ್ಪೇಸ್ವಾಮಿ, ನನ್ನಿವಾಳ ತಿಪ್ಪೇಸ್ವಾಮಿ, ದುರುಗಪ್ಪ, ಜಯಪಾಲಯ್ಯ, ಶ್ರೀನಿವಾಸ್, ಕಾಲುವೆಹಳ್ಳಿ ಪಾಲಯ್ಯ, ಹನುಮಂತಪ್ಪ, ತಿಪ್ಪೇಸ್ವಾಮಿ, ಬಡಗಿ ಹನುಮಂತ ರಾಯ್, ಯರೀಸ್ವಾಮಿ ರಾಜು, ಹರಿಶ್, ಅಭಿಷೇಕ್ ಹೇಮಂತ್ , ವಿಜಯಮ್ಮ, ಗೀತಮ್ಮ, ತಿಪ್ಪಕ್ಕ, ದುರುಗಮ್ಮ, ಗಂಗಮ್ಮ.. ಇತರರು ಹಾಜರಿದ್ದರು.

ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ ಅಸ್ಪೃಶ್ಯತೆ,ದಲಿತ ಯುವಕರಿಗೆ ಕ್ಷೌರ ಮಾಡುವುದಿಲ್ಲ ಎಂದು ಜಾತಿನಿಂಧನೆ ಮಾಡಿರುವಂತಹ ಪ್ರಕರಣಗಳು ಮಾಧ್ಯಮದಲ್ಲಿ, ಪತ್ರಿಕೆಗಳಲ್ಲಿ ವರದಿಯಾಗಿವೆ, ಇದರಿಂದ ನಮ್ಮ ಅಧಿಕಾರಿ ವರ್ಗಕ್ಕೆ ಶೋಭೆ ತರುವಂತದ್ದಲ್ಲ, ಆದ್ದರಿಂದ ಈ ಕೂಡಲೇ ಕ್ಷೌರ ಮಾಡುವವರ ಮೇಲೆ ಹಾಗೂ ದಲಿತ ಯುವಕನ ಜೊತೆ ಸಂಭಾಷಣೆ ಮಾಡಿದಂತಹವರಿಗೆ ದಲಿತ ಯುವಕ ಪ್ರಕರಣ ದಾಖಲಿಸಿಲ್ಲವಾದರೂ ಕೂಡ ನಾವು ಸ್ವಯಂ ಪ್ರೇರಿತವಾಗಿ ಸುಮೋಟೋ ಪ್ರಕರಣದಲ್ಲಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುತ್ತೇವೆ, ಇನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜಾತಿಗಳಿಗೆ ಅಟ್ರಾಸಿಟಿ ಪ್ರಕರಣ ಬರುವುದಿಲ್ಲ ಎಂದು ನಿಮ್ಮ ಅಭಿಪ್ರಾಯವಿದ್ದರೆ ಅಸ್ಪೃಶ್ಯತೆ ಕಾಯ್ದೆ ಒಳಗಡೆ ಪ್ರಕರಣ ದಾಖಲಿಸಿಕೊಳ್ಳುತ್ತೇವೆ, ಇನ್ನು ಕೊಪ್ಪಳದ ಮರಕುಂದಿ ಪ್ರಕರಣ ನಿಮಗೆಲ್ಲ ಗೊತ್ತಿರುವ ವಿಚಾರ 98 ಜನರಿಗೆ ‌ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿರುವುದು, ನಿಮ್ಮೆಲ್ಲರಿಗೂ ತಿಳಿದಿರುವ ವಿಷಯ ‌ಅಂತಹ ಘಟನೆಗಳು ಇಲ್ಲಿ ಜರುಗಬಾರದು,
ಆದ್ದರಿಂದ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಸಮಾನತೆಯಿಂದ ಎಲ್ಲಾ ಜಾತಿ ಜನಾಂಗದವರು ಸಹಬಾಳ್ವೆ ಜೀವನ ನಡೆಸಬೇಕು.

—- ರಂಜಿತ್ ಕುಮಾರ್ ಬಂಡಾರು ಜಿಲ್ಲಾ ಪೊಲೀಸ್ ಅಧೀಕ್ಷರು ಚಿತ್ರದುರ್ಗ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading