ನಾಯಕನಹಟ್ಟಿ:: ಐತಿಹಾಸಿಕ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಹುಂಡಿ ಹಣದ ಎಣಿಕೆ ಕಾರ್ಯ ಬುಧವಾರ ದೇವಾಲಯದ ಆವರಣದಲ್ಲಿ ಬ್ಯಾಂಕ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಹಾಯದಲ್ಲಿ ನಡೆಸಲಾಯಿತು.
ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರ ಮಠದಲ್ಲಿ ಮೊದಲು ಮುಜರಾಯಿ ಹಾಗೂ ಕಂದಾಯ ಇಲಾಖೆ ತಾಸಿಲ್ದಾರ್ ಹಾಗೂ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಬೆಳಗ್ಗೆ 10 ಗಂಟೆಗೆ ಶುರುವಾದ ಎಣಿಕೆ ಕಾರ್ಯ ಮಧ್ಯಾಹ್ನ ಒಂದು ಗಂಟೆಗೆ ಮುಕ್ತಾಯವಾಯಿತು.






ನಂತರ ಒಳಮಠದಲ್ಲಿ ಆರಂಭವಾದ ಎಣಿಕೆ ಕಾರ್ಯ ಸಂಜೆ 5ಗಂಟೆಗೆ ಮುಕ್ತಾಯವಾಯಿತು ಹೊರ ಮಠದಲ್ಲಿ: ₹9,36,327.
ಒಳಮಠದಲ್ಲಿ₹. 35,83,445.
ಸಂಗ್ರಹ.
ಒಟ್ಟು ಸಂಗ್ರಹ 45,19,772 ಲಕ್ಷ ಹಣ ಸಂಗ್ರಹ.
ಇದೆ ವೇಳೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ ಮಾತನಾಡಿದರು. ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆ ಕಂದಾಯ ಇಲಾಖೆ ಮಾನ್ಯ ಜಿಲ್ಲಾಧಿಕಾರಿ ಹಾಗೂ ತಹಸಿಲ್ದಾರ್ ಆದೇಶದಂತೆ ಹೊರಮಠ ಮತ್ತು ಒಳ ಮಠದಲ್ಲಿ ಉಂಡಿ ಎಣಿಕೆ ಮಾಡಲಾಗಿದೆ ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಈ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ದಾಸೋಹ ಆಡಳಿತಕ್ಕೆ ಬಳಸಲಾಗುವುದು ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಹುಂಡಿಯಲ್ಲಿ ಹಾಕಿದ ಹಣದಿಂದ ಅಭಿವೃದ್ಧಿಪಡಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮುಜರಾಯಿ ಅಧಿಕಾರಿ ಸದಾಶಿವಪ್ಪ ಉಪತಾಶಿಲ್ದಾರ್ ಬಿ. ಶಕುಂತಲಾ ,ಕಂದಾಯ ನಿರೀಕ್ಷಕ ಚೇತನ್ ಕುಮಾರ್, ಕಂದಾಯ ಇಲಾಖೆ ಸಿಬ್ಬಂದಿ ಜಗದೀಶ್, ಶರಣಬಸಪ್ಪ, ಶಂಕರ್, ಶಶಿಕಲಾ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಡಿ ರತನ್, ಸಿಬ್ಬಂದಿ ವಿರುಪಾಕ್ಷಿ, ನಲಗೇತನಹಟ್ಟಿ ಎಂ.ಬಿ. ಮಹಾಸ್ವಾಮಿ, ವೆಂಕಟೇಶ್, ದೇವಾಲಯ ಸಿಬ್ಬಂದಿ ಎಸ್ ಸತೀಶ್, ಹಾಗೂ ಸಿಬ್ಬಂದಿಗಳು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.