ನಾಯಕನಹಟ್ಟಿ:: ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಈ ಸೌಲಭ್ಯವು ಸಿಗಲು ಸರ್ಕಾರ ಯೋಜನೆಯನ್ನು ರೂಪಿಸಿದೆ ಎಂದು ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಎಸ್ ಅನಿತಾ ರವಿಕುಮಾರ್ ಹೇಳಿದರು.
ಬುಧವಾರ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ ಆವರಣದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಸಾಮಾಜಿಕ ಪರಿಶೋಧನಾ ನಿರ್ದೇಶಾಲಯ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ 2023 -24ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಇತರೆ ಅನುಷ್ಠಾನ ಇಲಾಖೆ ಮತ್ತು 15ನೇ ಹಣಕಾಸಿನ ಆಯೋಗದ ಅಡಿಯಲ್ಲಿ ಪಾವತಿ ಆಗಿರುವ ಕಾಮಗಾರಿ ಖರ್ಚು ವೆಚ್ಚದ ಬಗ್ಗೆ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಮಾತನಾಡಿದರು. ತಿಮ್ಮಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉತ್ತಮ ಅಭಿವೃದ್ಧಿ ಕಾಮಗಾರಿಗಳು ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವಂತಹ ಕೆಲಸವನ್ನು ಸಾಮಾಜಿಕ ಪರಿಶೋಧನೆ ತಂಡ ಕಾರ್ಯ ಶ್ಲಾಘನೀಯ ಸಾಮಾಜಿಕ ಪರಿಶೋಧನೆ ತಂಡದಿಂದ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮಹತ್ವದ ಬಗ್ಗೆ ಮನೆ ಮನೆಗಳಿಗೆ ತಲುಪಿಸುವ ಕಾರ್ಯ ಮಾಡಿದ್ದು ಅತ್ಯಂತ ಶ್ಲಾಘನೀಯವಾಗಿದೆ ಎಂದರು.

ಇದೇ ವೇಳೆ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಸಾಮಾಜಿಕ ಪರಿಶೋಧನೆ ಅಧಿಕಾರಿ ಆರ್. ಗಿರೀಶ್ ಮಾತನಾಡಿದರು. ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ ಗ್ರಾಮ ಸಭೆಯಲ್ಲಿ 2023-24ನೇ ಸಾಲಿನ 15ನೇ ಹಣಕಾಸಿನ ಅನುದಾನ ಹಾಗೂ ಮಹಾತ್ಮ ಗಾಂಧಿ ನೆರೆಗಾ ಯೋಜನೆಯ ಅನುಷ್ಠಾನಗೊಂಡಿರುವ ಕಾಮಗಾರಿಗಳ ಬಗ್ಗೆ ಗ್ರಾಮ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ಕುಂದು ಕೊರತೆಗಳ ಪಡೆದುಕೊಂಡು ಸ್ಥಳದಲ್ಲಿ ಪರಿಶೀಲನೆ ಮಾಡಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಎಂ .ತಿಪ್ಪೇಸ್ವಾಮಿ, ಸದಸ್ಯರಾದ ಕೆ ಎಸ್ ಮಂಜಣ್ಣ, ಪ್ರೇಮಲತಾ ಶಂಕರ್ ಮೂರ್ತಿ, ಲಕ್ಷ್ಮಿ ಮಹದೇವಣ್ಣ, ಗೀತಮ್ಮಸಿ.ಕುಮಾರ್, ಡಿ. ರೇವಣ್ಣ, ಶಾಂತಮ್ಮ ಬಸವರಾಜ್, ಪಿಡಿಒ ಶ್ರೀನಿವಾಸ್, ಪಂಚಾಯತಿ ಸಿಬ್ಬಂದಿಗಳಾದ ಕಾರ್ಯದರ್ಶಿ ನಾಗರಾಜ್ ನಾಯ್ಕ, ಡಿಇಒ ಆರ್ ಸಂತೋಷ್, ಬಿಲ್ ಕಲೆಕ್ಟರ್ ಬಿ ತಿಪ್ಪೇಸ್ವಾಮಿ, ಗಜ್ಜುಗಾನಹಳ್ಳಿ ಯುವ ಮುಖಂಡ ಜಿ.ಎಸ್ ತಿಪ್ಪೇಸ್ವಾಮಿ, ಕಾಯಕ ಮಿತ್ರ ಉಮಾ ತಾಲೂಕು ಪಂಚಾಯಿತಿ ಸಾಮಾಜಿಕ ಲೆಕ್ಕ ಪರಿಶೋಧನೆಯ ಸಿಬ್ಬಂದಿಗಳಾದ ರಂಗಪ್ಪ ಪವನ್ ಪ್ರೇಮ ಕುಮಾರ್ ಸಂದೀಪ್ ಭಾಗ್ಯ ಪ್ರಿಯಾಂಕ, ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಗ್ರಾಮಸ್ಥರು ಇದ್ದರು,
About The Author
Discover more from JANADHWANI NEWS
Subscribe to get the latest posts sent to your email.