ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:: ಪಶು ಇಲಾಖೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ನೇರಲಗುಂಟೆ ಪಶು ಆಸ್ಪತ್ರೆಯ ದ್ವಿತೀಯ ದರ್ಜೆ ಸಹಾಯಕ ಓ ತಿಪ್ಪೇಸ್ವಾಮಿ ರವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಇ.ಕೆ. ಶಿವಣ್ಣ ಹೇಳಿದ್ದರು.
ಮಂಗಳವಾರ ಸಮೀಪದ ನೇರಲಗುಂಟೆ ಪಶು ಆಸ್ಪತ್ರೆ ದ್ವಿತೀಯ ದರ್ಜೆ ಸಹಾಯಕ ಓ ತಿಪ್ಪೇಸ್ವಾಮಿ ರವರಿಗೆ ವಯೋ ನಿವೃತ್ತಿ ಬಿಳ್ಕೊಡುಗೆ ಸಮಾರಂಭದಲ್ಲಿ ಪಶು ವೈದ್ಯಾಧಿಕಾರಿ
ಡಾ. ಇ.ಕೆ. ಶಿವಣ್ಣ ಮಾತನಾಡಿದರು. ನೇರಲಗುಂಟೆ ಪಶು ಆಸ್ಪತ್ರೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾಟವ್ವನಹಳ್ಳಿ ಓ.ತಿಪ್ಪೇಸ್ವಾಮಿ ಸುಮಾರು 30 ಆರು ವರ್ಷಗಳ ಕಾಲ ಇಲಾಖೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿ ಇಂದು ಬೀಳ್ಕೊಡುಗೆ ವಯೋನಿವೃತ್ತಿ ಹೊಂದುತ್ತಿರುವುದು ತುಂಬಾ ನೋವಿನ ಸಂಗತಿ ಸರ್ಕಾರದ ಆದೇಶದಂತೆ ಪ್ರತಿಯೊಬ್ಬ ಸರ್ಕಾರಿ ನೌಕರಸ್ಥರಿಗೆ ನಿವೃತ್ತಿ ಅನುವರಿಯ ಓ ತಿಪ್ಪೇಸ್ವಾಮಿ ರವರ ನಿವೃತ್ತಿ ಜೀವನ ಸುಖಕರವಾಗಿರಲಿ ಅವರ ಉತ್ತಮ ಸೇವೆಯನ್ನು ಪ್ರತಿಯೊಬ್ಬ ಸಿಬ್ಬಂದಿಯು ಮೈಗೂಡಿಸಿಕೊಳ್ಳಲಿ ಎಂದರು.





ಇನ್ನೂ ಇದೇ ವೇಳೆ ದ್ವಿತೀಯ ದರ್ಜೆ ಸಹಾಯಕರಾದ ಪಾಲಾಕ್ಷ ಮತ್ತು ನಂದನ್ ರವರಿಗೆ ನೇರಲಗುಂಟೆ ಪಶು ಆಸ್ಪತ್ರೆಗೆ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಲಾಯಿತು.
ಇದೇ ವೇಳೆ ಜಾನುವಾರು ಅಧಿಕಾರಿ ವಿ.ಎ. ಪ್ರಕಾಶ್ ರೆಡ್ಡಿ, ಹಿರಿಯ ಪಶುವೈದ್ಯ ಕೆ.ಕೃಷ್ಣಮೂರ್ತಿ, ಕಿರಿಯ ಪಶುವೈದ್ಯ ನಂದನ, ದ್ವಿತೀಯ ದರ್ಜೆ ಸೂರಮ್ಮ, ಪ್ರಥಮ ದರ್ಜೆ ಸಹಾಯಕ ಮಂಜುನಾಥ್, ದ್ವಿತೀಯ ದರ್ಜೆ ಸಹಾಯಕ ಪಾಲಕ್ಷ, ಗ್ರಾಮಸ್ಥರಾದ ಟಿ ರಾಜಣ್ಣ ತಿಮ್ಮಪ್ಪಯ್ಯನಹಳ್ಳಿ, ಬ್ಯಾಂಕ್ ರಾಜಣ್ಣ, ಮರಿಯಪ್ಪ, ಭತ್ತಯ್ಯನಹಟ್ಟಿ ತಿಪ್ಪಯ್ಯ, ಚನ್ನಪ್ಪ, ಜಿ.ಟಿ. ತಿಮ್ಮಣ್ಣ,ಸಿ. ಅನಿಲ್ ಕುಮಾರ್, ಇದ್ದರು
About The Author
Discover more from JANADHWANI NEWS
Subscribe to get the latest posts sent to your email.