ಪ್ರಕಾಶ್ ರಾಮಾನಾಯ್ಕ್
ಅಧ್ಯಕ್ಷರು. ಪದವೀಧರರ ವಿಭಾಗ.
ಚುನಾವಣಾ ಆಯೋಗದಿಂದ ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ಆರಂಭ.
ಆಗ್ನೇಯ ಪದವೀಧರರ ಕ್ಷೇತ್ರದ ವ್ಯಾಪ್ತಿಯಲ್ಲಿ ಚಿತ್ರದುರ್ಗ,ತುಮಕೂರು,ಕೋಲಾರ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ (ಹರಿಹರ,ಜಗಳೂರು ದಾವಣಗೆರೆ ತಾಲ್ಲೂಕುಗಳು) ಒಳಪಟ್ಟಿದ್ದು ,ಮತದಾರರ ನೋಂದಣಿ ನಿಯಮಗಳು1960ರ 31(3)ನೇ ನಿಯಮದ ಅನುಸಾರ ಈ ಮತಕ್ಷೇತ್ರದ ಮತದಾರರರ ಪಟ್ಟಿಯಲ್ಲಿ ಪದವೀದರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಹಕ್ಕುಳ್ಳ ಪ್ರತಿಯೊಬ್ಬ ವ್ಯಕ್ತಿಗೆ ಮತದಾರರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಸಲುವಾಗಿ ಮತದಾರರರ ನೋಂದಣಿಗಾಗಿ ನಮೂನೆ 18ರಲ್ಲಿನ ಅರ್ಜಿಯನ್ನು ಭರ್ತಿಮಾಡಿ 6ನೇ ನವಂಬರ್ 2025ರಂದು ಅಥವಾ ಅದಕ್ಕೂ ಮೊದಲು ಸಂಭಂದಪಟ್ಟ ಅಧಿಕಾರಿಗಳಿಗೆ ಕಳುಹಿಸಲು ಅಥವಾ ತಲುಪಿಸಲು ಕರೆ ನೀಡಲಾಗಿದೆ.
ಪದವೀದರ ಕ್ಷೇತ್ರದ ಮತದಾರರರ ಪಟ್ಟಿಯನ್ನು ಪ್ರತಿ ಚುನಾವಣೆಯ ಮೊದಲು ಹೊಸದಾಗಿ ತಯಾರಿಸಬೇಕಾಗಿದ್ದು ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮತದಾರರರ ಪಟ್ಟಿಯಲ್ಲಿರುವ ಎಲ್ಲಾ ವ್ಯಕ್ತಿಗಳೂ ಸಹ ನಿಗದಿತ ನಮೂನೆಯಲ್ಲಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು.
ಮತದಾರರಾಗಿ ನೊಂದಣಿಯಾಗಲು ಭಾರತದ ಪ್ರಜೆಯಾಗಿರುವ ಆಯಾ ಮತಕ್ಷೇತ್ರದೊಳಗಡೆ ಸಾಮಾನ್ಯವಾಗಿ ವಾಸಿಸುತ್ತಿರುವ ಹಾಗೂ 1ನೇ ನವಂಬರ್ 2025ಕ್ಕೆ ಮುಂಚೆ (ಅರ್ಹತಾ ದಿನಾಂಕ) ಕನಿಷ್ಟ ಮೂರು ವರ್ಷಗಳಷ್ಟು ಮೊದಲು ಭಾರತದಲ್ಲಿರುವ ಯಾವುದಾದರೊಂದು ವಿಶ್ವವಿದ್ಯಾಲಯದ ಪದವೀಧರನಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಮತದಾರರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹನಾಗಿರುತ್ತಾನೆ.
ಅರ್ಹ ವ್ಯಕ್ತಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಲು ನಿಗದಿತ ನಮೂನೆ-18ರ ಅರ್ಜಿಯೊಂದಿಗೆ ಪದವಿ ಪ್ರಮಾಣಪತ್ರದ ಪ್ರತಿ / ಸರ್ಟಿಫಿಕೇಟ್ / ಅಂಕ ಪಟ್ಟಿಯ ಪ್ರತಿಯನ್ನು ಸ್ವಯಂ ದೃಢೀಕರಿಸಿ ಮತ್ತು ಗೆಜೆಟೇಡ್ ಅಧಿಕಾರಿಗಳಿಂದ ದೃಡೀಕರಿಸಿ ಅಡಕದೊಂದಿಗೆ ಸಲ್ಲಿಸಬೇಕು.
ಆದ್ದರಿಂದ ನಮ್ಮ ಜಿಲ್ಲೆಯ ಎಲ್ಲಾ ಪದವೀಧರರು ತಪ್ಪದೇ ನೊಂದಣಿ ಮಾಡಿಕೊಂಡು ಮುಂಬರುವ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಕೋರುತ್ತೆನೆ.
ವಂದನೆಗಳೋಂದಿಗೆ ,
ಇಂತಿ ತಮ್ಮ ವಿಶ್ವಾಸಿ,
ಪ್ರಕಾಶ್ ರಾಮಾನಾಯ್ಕ್
ಅಧ್ಯಕ್ಷರು. ಪದವೀಧರರ ವಿಭಾಗ.
ಜಿಲ್ಲಾ ಕಾಂಗ್ರೆಸ್ ಸಮಿತಿ. ಚಿತ್ರದುರ್ಗ.
ಮೊ- 9945545936
About The Author
Discover more from JANADHWANI NEWS
Subscribe to get the latest posts sent to your email.