December 14, 2025
1759208605471.jpg


ಹಿರಿಯೂರು:
ಸಕ್ಕರೆ ಕಾರ್ಖಾನೆಯೊಂದರಿಂದ ಮೊಲ್ಯಾಸಿಸ್ ತುಂಬಿಕೊಂಡು ಬರುತ್ತಿದ್ದ ಟ್ಯಾಂಕರ್ ಗೆ ತಾಲ್ಲೂಕಿನ ಹಿಂಡಸಕಟ್ಟೆ ಗ್ರಾಮದ ಸಮೀಪ ಶನಿವಾರ ಬೆಳಗಿನ ಜಾವ ಕಟ್ಟಿಗೆ ತುಂಬಿದ್ದ ಲಾರಿ ಡಿಕ್ಕಿ ಹೊಡೆದು ಎರಡೂ ವಾಹನಗಳ ಚಾಲಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಲಿಂಗಸೂರು ತಾಲ್ಲೂಕಿನ ನೇರ್ಲಕೆರೆ ಗ್ರಾಮದ ಹುಲುಗಪ್ಪ (28), ಆಂದ್ರದ ಮಡಕಶಿರಾ ಮಂಡಲದ ಗುಡ್ಡಂಪಲ್ಲಿ ಗ್ರಾಮದಬುಜ್ಜಿಬಾಬು (46) ಮೃತ ಚಾಲಕರಾಗಿದ್ದಾರೆ.
ಹುಳಿಯಾರು ಕಡೆಯಿಂದ ಬರುತ್ತಿದ್ದ ಟ್ಯಾಂಕರ್ ಗೆ ಹಿರಿಯೂರು ಕಡೆಯಿಂದ ತೆರಳುತ್ತಿದ್ದ ಲಾರಿ ಡಿಕ್ಕಿಯಾಗಿದೆ. ರಭಸಕ್ಕೆ ಟ್ಯಾಂಕರ್ ನ ಎಂಜಿನ್ ಕ್ಯಾಬಿನ್ ಸಂಪೂರ್ಣ ಜಜ್ಜಿ ಹೋಗಿದೆ. ಟ್ಯಾಕರ್ ನಲ್ಲಿದ್ದ ಮೊಲ್ಯಾಸಿಸ್ ರಸ್ತೆಯಲ್ಲಿ ಹರಿದಿದೆ. ಗ್ರಾಮಾಂತರ ಠಾಣೆ ಎಸ್.ಐ. ಅನುಸೂಯ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading