ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಸಾಲಿಗ್ರಾಮ ಪಟ್ಟಣದಲ್ಲಿ ಈ ಬಾರಿ ಕನಕ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಸಾಲಿಗ್ರಾಮ ತಾಲೂಕು ಕುರುಬರ ಸಂಘದ ಅಧ್ಯಕ್ಷ ಸಿದ್ದರಾಮೇಗೌಡ ಹೇಳಿದರು.
ಅವರು ಪಟ್ಟಣದಲ್ಲಿ ನಡೆದ ಕನಕ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಮೊದಲ ಬಾರಿಗೆ ಸಾಲಿಗ್ರಾಮ ಪಟ್ಟಣದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ಕನಕ ಜಯಂತಿಯನ್ನು ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಕನಕ ಜಯಂತಿ ಆಚರಣಾ ಸಮಿತಿಯನ್ನು ಈ ಸಂದರ್ಭದಲ್ಲಿ ರಚಿಸಿದ್ದು ಸಮಿತಿಯ ಅಧ್ಯಕ್ಷರಾಗಿ ಭೇರ್ಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ.ಮಂಜಪ್ಪ, ಸದಸ್ಯರುಗಳಾಗಿ ಜೆಸಿಬಿ ಬಲರಾಮ್, ರಾಮೇಗೌಡ, ಪಾಲಾಕ್ಷ, ಮಂಜುನಾಥ್, ರವಿ ಅವರುಗಳನ್ನು ಆಯ್ಕೆಮಾಡಿ ಶಾಸಕ ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಅಡಗೂರು
ಹೆಚ್.ವಿಶ್ವನಾಥ್ ಹಾಗೂ ಎಮ್ ಸಿ ಡಿ ಸಿ ಸಿ ಬ್ಯಾಂಕ್ ನ ನಿರ್ದೇಶಕ ದೊಡ್ಡಸ್ವಾಮೇಗೌಡ ಅವರುಗಳನ್ನು ಭೇಟಿ ಮಾಡಿ ಅವರ ಸಲಹೆ, ಸಹಕಾರ, ಮಾರ್ಗದರ್ಶನದೊಂದಿಗೆ ಕಾರ್ಯಕ್ರಮದ ದಿನಾಂಕವನ್ನು ಪಡೆಯಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.
ಸಂಘಕ್ಕೆ ನೂತನ ಸದಸ್ಯತ್ವವನ್ನು ಮಾಡಿಸುವ ಉದ್ದೇಶದಿಂದ ಸಂಘದ ಎಲ್ಲಾ ಪದಾಧಿಕಾರಿಗಳಿಗೂ ರಶೀದಿ ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. ಎಲ್ಲಾ ಪದಾಧಿಕಾರಿಗಳು ಸಂಘಕ್ಕೆ ಅತಿ ಹೆಚ್ಚಿನ ಸದಸ್ಯರನ್ನು ನೋಂದಾವಣೆ ಮಾಡಿಸಬೇಕೆಂದು ಕರೆ ನೀಡಿದರು.
ಜಾತಿ ಗಣತಿಯಲ್ಲಿ ಕುರುಬ ಎಂದು ನಮೂದಿಸಿ:
ರಾಜ್ಯ ಸರ್ಕಾರವು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಮ್ಮಿಕೊಂಡಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ತೀರ್ಮಾನವನ್ನು ತಾಲೂಕು ಕುರುಬರ ಸಂಘವು ಸ್ವಾಗತಿಸುತ್ತದೆ ಎಂದರು.
ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯನ್ನು ಮಾಡಲು ತಮ್ಮ ಮನೆಗಳಿಗೆ ಬರುವ ಗಣತಿದಾರರಿಗೆ ಕುರುಬ ಸಮುದಾಯದವರು ಜಾತಿ ಹಾಗೂ ಉಪಜಾತಿ ಕಾಲಂ ಗಳಲ್ಲಿ “ಕುರುಬ” ಎಂದು ಬರೆಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ತಾಲೂಕು ಕುರುಬರ ಸಂಘದ ಉಪಾಧ್ಯಕ್ಷರಾದ ರಾಮೇಗೌಡ, ಮಂಜುನಾಥ್, ಮಂಜಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಮಹದೇವ, ಸಂಘಟನಾ ಕಾರ್ಯದರ್ಶಿಗಳಾದ ಪಾಲಾಕ್ಷ, ಸುಬ್ಬೇಗೌಡ, ಸಾಂಸ್ಕೃತಿಕ ಕಾರ್ಯದರ್ಶಿ ಪೂ.ರಾಜೇಗೌಡ, ಖಜಾಂಚಿ ರವಿ, ನಿರ್ದೇಶಕರುಗಳಾದ ಶಿವರಾಂ, ಕೃಷ್ಣಮೂರ್ತಿ, ರಾಜೇಗೌಡ, ಸ್ವಾಮಿಗೌಡ, ಲೋಕೇಶ್, ಅಣ್ಣಯ್ಯ, ದೇವರಾಜ್, ಗೌಡಯ್ಯ, ಸತೀಶ, ಮಹದೇವ, ಬೀರೇಗೌಡ, ಕುಮಾರ, ಉಮಾಶಂಕರ, ಜಯಕುಮಾರ, ಸ್ವಾಮಿಗೌಡ, ಬಲರಾಮ್, ರವಿ, ಸಿ.ಕೆ.ಹೇಮಂತ್ ಕುಮಾರ್ ರವರುಗಳು ಪಾಲ್ಗೊಂಡಿದ್ದರು.
About The Author
Discover more from JANADHWANI NEWS
Subscribe to get the latest posts sent to your email.