September 15, 2025
1753891203964.jpg


ಹಿರಿಯೂರು:
ತಾಲ್ಲೂಕಿನ ಬೆಸ್ಕಾಂ ಇಲಾಖೆಯವರು ರೈತರಿಗೆ ರಿಪೇರಿ ಮಾಡಿಕೊಡುವಂತಹ ವಿದ್ಯುತ್ ಪರಿವರ್ತಕಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ಪದೇ ಪದೇ ಸುಟ್ಟು ಹೋಗುತ್ತವೆ. ಬೆಸ್ಕಾಂ ಇಲಾಖೆಯು ಈ ಕೂಡಲೇ ಈ ವಿಚಾರವನ್ನು ಪರಿಗಣಿಸಿ ರೈತರಿಗೆ ನ್ಯಾಯ ಕೊಡಿಸಬೇಕೆಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಒತ್ತಾಯಿಸಿದರು.
ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಇಂದು ವಿದ್ಯುಚ್ಛಕ್ತಿ ಇಲಾಖೆಗೆ ಭೇಟಿಕೊಟ್ಟು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹಾವೀರ್ ಜೈನ್ ರವರಿಗೆ ನಿಮ್ಮ ಈ ಇಲಾಖೆ ಕಾರ್ಯದಿಂದ ನೊಂದಿರುವ ರೈತರನ್ನು ಪರಿಗಣಿಸಿ ವಿದ್ಯುತ್ ಪರಿವರ್ತಕಗಳನ್ನು ರಿಪೇರಿ ಮಾಡಿಕೊಡುವವರ ಲೈಸೆನ್ಸ್ ಅನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ, ಮನವಿಪತ್ರ ಸಲ್ಲಿಸಿ, ಅವರು ಮಾತನಾಡಿದರು.
ಬೆಸ್ಕಾಂ ಇಲಾಖೆಯು ಈ ಕೂಡಲೇ ಈ ವಿಚಾರವನ್ನು ಪರಿಗಣಿಸಿ ರೈತರಿಗೆ ನ್ಯಾಯ ಕೊಡಿಸಬೇಕೆಂದು ಭಾರತೀಯ ಕಿಸಾನ್ ಸಂಘವು ಅಗ್ರಹಿಸಿತು. ತದನಂತರ ಸುಟ್ಟ ಟಿಸಿ ಗಳಿಗೆ ರೈತರುಗಳನ್ನ ಇಲಾಖೆಗೆ ಬರುವುದನ್ನ ತಪ್ಪಿಸಿ ತಾವೇ ವಿದ್ಯುತ್ ಪರಿವರ್ತಕಗಳನ್ನ ಅಳವಡಿಸಿಕೊಡಬೇಕು ಎಂದರು.
ರೈತರು ಬಂದಾಗ ಒಬ್ಬ ಅಧಿಕಾರಿ ಸಿಕ್ಕರೆ ಇನ್ನೊಬ್ಬರು ಸಿಗಲಾರರು. ಇಂತಹ ಸನ್ನಿವೇಶದಲ್ಲಿ ಒಂದು ಟಿ.ಸಿ. ಪಡೆಯಲು ರೈತರು ಒಂದು ವಾರ ಓಡಾಟ ನಡೆಸಬೇಕಾಗುತ್ತದೆ. ತದನಂತರ ಸೀನಿಯರ್ ಟಿ ಆಧಾರದ ಮೇಲೆ ರೈತರು ಟಿ.ಸಿ. ಪಡೆಯಲು 15 ದಿನಗಳು ಆಗುತ್ತದೆ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ದಿಂಡಾವರ ಚಂದ್ರಗಿರಿರವರು ಮಾತನಾಡಿ ದಿಂಡಾವರದ ನಾರಾಯಣಸ್ವಾಮಿ ಜಮೀನಿನಲ್ಲಿ ಇರುವ 63 ಕೆ.ವಿ. ವಿದ್ಯುತ್ ಪರಿವರ್ತಕವು ಇಲ್ಲಿಗೆ ಮೂರು ಸಾರಿ ಸುಟ್ಟಿದೆ. ಪ್ರತಿ ಬಾರಿಯೂ ವಾರ ಅಥವಾ 15 ದಿನಗಳು ಮಾತ್ರ ಬರುತ್ತವೆ. ತದನಂತರ ಸುಟ್ಟು ಹೋಗುತ್ತದೆ. ಹೀಗೆ ಆದರೆ ರೈತರ ಬೆಳೆ ನಷ್ಟ ಪರಿಹಾರವನ್ನು ಯಾರು ಕೊಡುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಹೊಣೆಗಾರರು ಬೆಸ್ಕಾಂ ಇಲಾಖೆಯವರೇ ಹೊಣೆಗಾರರಾಗುತ್ತಾರೆ ಎಂಬುದಾಗಿ ಅವರು ಇಲಾಖೆಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading