July 31, 2025
IMG-20250730-WA0172.jpg

ಚಳ್ಳಕೆರೆ : ಕ್ರೀಡೆಯಿಂದ ಮಕ್ಕಳ ಸರ್ವಾಗಿಣ ಅಭಿವೃದ್ದಿಯಾಗುತ್ತದೆ. ಕ್ರೀಡೆಯ ಮಹತ್ವ ಅರಿತು ಮಕ್ಕಳು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ಶಾಲೆಗೆ ದೇಶಕ್ಕೆ ಕೀರ್ತಿ ತರಬೇಕು ಎಂದು ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ಕಾರ್ಯದರ್ಶಿ ದಯಾನಂದ ಪ್ರಹ್ಲಾದ್ ಹೇಳಿದರು.

ಅವರು ನಗರದ ಚಿತ್ರದುರ್ಗ ರಸ್ತೆಯಲ್ಲಿ ಇರುವ ಡಿ.ಸುಧಾಕರ್ ಒಳಾಂಗಣ ಕ್ರೀಡಾಂಗಣದಲ್ಲಿ ವಿದ್ಯಾಭಾರತಿ ಕರ್ನಾಟಕ ಕ್ರೀಡೋತ್ಸವ ಜಿಲ್ಲಾ ಮಟ್ಟದ ಬ್ಯಾಟ್ ಮಿಟನ್ ಕ್ರೀಡೆಗೆ ಚಾಲನೆ ನೀಡಿ ಮಾತನಾಡಿದರು,
ಮಕ್ಕಳು ಕ್ರೀಡೆಯಲ್ಲಿ ತಪ್ಪದೆ ಎಲ್ಲರೂ ಭಾಗವಹಿಸಬೇಕು, ಸರ್ಕಾರವು ಸಹ ಕ್ರೀಡೆಗೆ ಹೆಚ್ಚಿನ ಸಹಕಾರ ನೀಡುತ್ತದೆ. ದೇಶದಲ್ಲಿ ಕ್ರೀಡಾಭಿಮಾನಿಗಳು ಇರುವುದರಿಂದ ಕ್ರೀಡೆಗೆ ಹೆಚ್ಚಿನ ಪ್ರೋತ್ಸಹ ಸಿಗುತ್ತದೆ. ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದೆ ದೈಹಿಕ ಚಟುವಟಿಕೆಯಾಗಿದೆ. ಅಲ್ಲದೇ ಇದಕ್ಕೆ ಬದ್ದತೆ ಮತ್ತು ನ್ಯಾಯದ ಆಟದ ಅಗತ್ಯ ವಿರುತ್ತದೆ. ಇದರಲ್ಲಿ ಇದನ್ನು ಕ್ರೀಡೆ ವಿಜೇತನನ್ನು ವಸ್ತುನಿಷ್ಟೆ ಮಾರ್ಗಗಳಿಂದ ವ್ಯಾಖ್ಯಾನಿಸಬಹುದು. ಇದನ್ನು ಕ್ರೀಡೆಗಳಲ್ಲಿ ನಿಯಮಗಳ ಅಥವಾ ವಾಡಿಕೆಗಳ ಶ್ರೇಣ ಯಿಂದ ನಡೆಸಲಾಗುತ್ತದೆ. ಕ್ರೀಡೆಯಲ್ಲಿ ಸೋಲು ಗೆಲವು ನಿರ್ಧಾರವಾಗುವುದು ದೈಹಿಕ ಸಾಮರ್ಥ್ಯೆಗಳ ಮತ್ತು ಸ್ಪರ್ಧಾ ಕೌಶಲ್ಯಗಳು ಪ್ರಮುಖ ಅಂಶಗಳಾಗುತ್ತವೆ. ಕ್ರೀಡೆಯ ಮಹತ್ವ ಅರಿತು ಪ್ರತಿಯೋಬ್ಬರು ಕ್ರೀಡೆಯಲ್ಲಿ ಭಾಗವಹಿಸಿ ಎಂದರು.

ವಿದ್ಯಾಭಾರತಿ ಕ್ರೀಡೋತ್ಸವದ ತರಬೇತುದಾರ , ದೈಹಿಕ ಶಿಕ್ಷಕ ಬಸವನ ಗೌಡ ಪಾಟಿಲ್ ಮಾತನಾಡಿ, ಪ್ರತಿ ವರ್ಷವೂ ಸರಕಾರ ಆಯೋಜಿಸಿದಂತೆ ವಿದ್ಯಾಭಾರತಿ ಕ್ರೀಡೋತ್ಸವ ಆಯೋಜಿಸುತ್ತದೆ ಜಿಲ್ಲೆಯ ಮೂರು ಶಾಲೆಗಳ‌ ಕ್ರೀಡಾಪಟುಗಳು ಇಂದು ಸೆಣಸಲಿದ್ದಾರೆ, ಚಿತ್ರದುರ್ಗ, ಚಳ್ಳಕೆರೆ ನಾಯಕನಹಟ್ಟಿ ಶಾಲೆಯ ಮಕ್ಕಳು ಭಾಗವಹಿಸಿದ್ದಾರೆ,
ಕ್ರೀಡಾಪಟುಗಳು ವೃತ್ತಿಪರರು ಅಥವಾ ಹವ್ಯಾಸಿಗಳು ಹಾಗಿರಬಹುದು ಬಹುತೇಕ ಕ್ರೀಡಾ ಪಟುಗಳು ವಿಶೇಷವಾಗಿ ವಿಸ್ತಾರವಾದ ದೈಹಿಕ ತರಬೇತಿ ಮತ್ತು
ಕ್ರೀಡೆಗೆ ಯಾರಬೇಕಾದರು ಭಾಗವಹಿಸಬಹುದು ಮಕ್ಕಳಲ್ಲಿನ ಪ್ರತೀಭೆ ಗುರಿತಿಸುವ ಸಲುವಾಗಿ ಇಂತಹ ಕ್ರೀಡೆಗಳನ್ನೂ ನಡೆಸುವುದು ಉತ್ತಮವಾದ ಕೆಲಸ ಪ್ರತಿಯೋಬ್ಬರು ಸಹ ಕ್ರೀಡೆ, ಕಲೆಯನ್ನು ಪ್ರದರ್ಶಿಸುವುದು ಪ್ರತಿಭೆಗೆ ತಕ್ಕ ಪ್ರತಿಭಾ ಪುರಸ್ಕಾರ ಪಡೆಯಬೇಕು ಎಂದರು.

ಈ ಸಂಧರ್ಭದಲ್ಲಿ ಹೊಂಗಿರಣ ಶಾಲೆಯ ಶಿಕ್ಷಕರಾದ ಸಿದ್ದೇಶ್, ಅರುಣಾಕ್ಷಿ, ಇತರರು, ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading